More

    ನಾಡಿಗೆ ಗಾಣಿಗ ಸಮುದಾಯದ ಕೊಡುಗೆ ಅಪಾರ, ಶ್ರೀ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಶ್ರೀ ಪೂರ್ಣಾನಂದ ಪುರಿ ಸ್ವಾಮೀಜಿ ಅಭಿಮತ

    ವಿಜಯವಾಣಿ ಸುದ್ದಿಜಾಲ ನೆಲಮಂಗಲ
    ಶ್ರಮ ಸಂಸ್ಕೃತಿಯ ಪ್ರತೀಕವಾದ ಗಾಣಿಗ ಸಮಾಜ ನಾಡಿಗೆ ಅಪಾರ ಕೊಡುಗೆ ನೀಡಿದೆ ಎಂದು ಶ್ರೀ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಶ್ರೀ ಪೂರ್ಣಾನಂದ ಪುರಿ ಸ್ವಾಮೀಜಿ ತಿಳಿಸಿದರು.


    ನಗರದ ಸೊಂಡೇಕೊಪ್ಪ ಮುಖ್ಯರಸ್ತೆ ಗಾಣಿಗರ ಸಮುದಾಯ ಭವನದಲ್ಲಿ ಶ್ರೀ ತ್ರಿಶಕ್ತಿ ಮಹಿಳಾ ಗಾಣಿಗರ ಸೇವಾ ಟ್ರಸ್ಟ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.


    ಗಾಣಿಗರ ಸಮುದಾಯದ ಸಂತರು, ಮಹನೀಯರು ಶ್ರಮ ಪಟ್ಟು ಸಮಾಜದ ಹೆಸರು ಶಾಶ್ವತಗೊಳಿಸಿದ್ದಾರೆ. ಮಹಿಳಾ ಸೇವಾ ಟ್ರಸ್ಟ್ ಜನರಲ್ಲಿ ಸಂಸ್ಕೃತಿ, ನೈತಿಕ ಮೌಲ್ಯ ಬೆಳೆಸುವ ಕೇಂದ್ರವಾಗಿ ಬೆಳೆಯಬೇಕು. ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾದ ಸಮಾಜದ ಮುಖಂಡರ ಸಹಕಾರದಿಂದ ಮಹಿಳೆಯರು ಒಗ್ಗೂಡುವ ನಿಟ್ಟಿನಲ್ಲಿ ಟ್ರಸ್ಟ್ ರಚಿಸಿರುವುದು ಉತ್ತಮ ಬೆಳವಣಿಗೆ ಎಂದರು.


    ಸಮುದಾಯದ ಜನರು ಮಕ್ಕಳ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಬೇಕು. ರಾಜ್ಯದಲ್ಲಿ ಗಾಣಿಗ ಸಮಾಜದ ಜನಸಂಖ್ಯೆ 45 ಲಕ್ಷ ಇದೆ. ಆದರೆ ನಿರೀಕ್ಷಿಸಿದಷ್ಟು ಬೆಳವಣಿಗೆ ಕಂಡಿಲ್ಲ. ಆದ್ದರಿಂದ ಅರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಮಾಜ ಇನ್ನಷ್ಟು ಬೆಳೆಯಬೇಕು. ಸಮುದಾಯಕ್ಕೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಶ್ರೀ ಮಠ ಸದಾ ಸಿದ್ಧ ಎಂದರು.


    ಶ್ರೀ ತ್ರಿಶಕ್ತಿ ಮಹಿಳಾ ಗಾಣಿಗರ ಸೇವಾ ಟ್ರಸ್ಟ್ ಅಧ್ಯಕ್ಷೆ ಎಲ್.ಮಂಜುಳಾ ನವೀನ್‌ಕುಮಾರ್ ಮಾತನಾಡಿ, ತಾಲೂಕಿನಾದ್ಯಂತ ಗಾಣಿಗ ಸಮುದಾಯ ಮಹಿಳೆಯರ ಏಳಿಗೆಗಾಗಿ ಸೇವಾ ಟ್ರಸ್ಟ್ ಆರಂಭಿಸಲಾಗಿದೆ. ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕ ಸಬಲರಾಗಬೇಕು ಎಂಬುದು ಟ್ರಸ್ಟ್ ಮುಖ್ಯ ಉದ್ದೇಶ. ಟ್ರಸ್ಟ್ ಉದ್ಘಾಟನೆ ಪ್ರಯುಕ್ತ ಸಮುದಾಯದ 100ಕ್ಕೂ ಹೆಚ್ಚು ಮಂದಿ ಮಕ್ಕಳಿಗೆ ನೋಟ್ ಬುಕ್ ಮತ್ತು ಕಲಿಕಾ ಸಾಮಗ್ರಿ ವಿತರಣೆ ಮಾಡಲಾಗಿದೆ ಎಂದರು.
    ಶ್ರೀ ತ್ರಿಶಕ್ತಿ ಮಹಿಳಾ ಗಾಣಿಗರ ಸೇವಾ ಟ್ರಸ್ಟ್ ಗೌರವಾಧ್ಯಕ್ಷೆ ಜಯಂತಿ, ಉಪಾಧ್ಯಕ್ಷೆ ಮೀನಾಕುಮಾರ್, ಹೇಮಲತಾ, ಪ್ರಧಾನಕಾರ್ಯದರ್ಶಿ ಆಶಾ, ಜಂಟಿ ಕಾಯರ್ರ್ದರ್ಶಿ ವಿಜಯಲಕ್ಷ್ಮೀ, ಖಜಾಂಚಿ ಲತಾ ನಟರಾಜು, ಸಹಾಯಕ ಲೆಕ್ಕಾಧಿಕಾರಿ ಅನಿತಾ, ಸಂಘಟನಾ ಕಾರ್ಯದರ್ಶಿ ಜಯಶ್ರೀ, ಸಹಕಾರ್ಯದರ್ಶಿ ಉಮಾ ಮೋಹನ್‌ಕುಮಾರ್, ಸೌಭ್ಯಾಗ್ಯಾ, ಗಾಣಿಗ ಸಂಘದ ಗೌರವಾಧ್ಯಕ್ಷ ಎನ್.ಜಿ.ನಾಗರಾಜು, ಅಧ್ಯಕ್ಷ ಲೊಕೇಶ್‌ಬಾಬು, ವ್ಯವಸ್ಥಾಪಕ ನಟರಾಜು ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts