More

    ಜೆಡಿಎಸ್‌ಗೆ ಅಧಿಕಾರ ಗ್ಯಾರಂಟಿ


    ನೆಲಮಂಗಲ
    ಈ ಬಾರಿಯ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಲಿದ್ದು, ರಾಜ್ಯದ ಜನತೆ ಸುಭಿಕ್ಷವಾಗಿ ಇರಬಹುದಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.
    ನಗರಸಭೆ ವ್ಯಾಪ್ತಿಯ ಅರಿಶಿಣಕುಂಟೆ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿ, ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲದಿದ್ದರೆ, ಜನರ ಬೆಂಬಲ ಇಲ್ಲದಿದ್ದರೆ ಪಕ್ಷದ ವರಿಷ್ಠರು 4ನೇ ಬಾರಿ ನನಗೆ ಬಿ ಾರಂ ಕೊಡುತ್ತಿರಲಿಲ್ಲ. ಕೇವಲ 14 ತಿಂಗಳ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿದ ಸುಭದ್ರ ಆಡಳಿತ, ರೈತರ ಸಾಲಮನ್ನಾದಂತಹ ಮಹತ್ವದ ನಿರ್ಣಯ ಜನತೆಯ ಮನಸ್ಸಿನಲ್ಲಿದೆ. ಈಗ ಸೀ ಶಕ್ತಿ ಸಂಘದ ಸಾಲಮನ್ನಾ, ವಿದ್ಯಾವಂತ ಯುವಕರ ಶೈಕ್ಷಣಿಕ ಸಾಲಮನ್ನಾ ಮಾಡುವುದು, ಪ್ರತಿ ಗ್ರಾಪಂ ಹೈಟೆಕ್ ಶಾಲೆ ನಿರ್ಮಿಸಿ ಖಾಸಗಿ ಶಾಲೆಗಳಲ್ಲಿ ದೊರೆಯುವ ಗುಣಮಟ್ಟ ಶಿಕ್ಷಣವನ್ನು ಉಚಿತವಾಗಿ ನೀಡುವುದು, ದೊಡ್ಡ ಶಸ ಚಿಕಿತ್ಸೆಗೆ ಆಗುವ ಲಕ್ಷಾಂತರ ರೂ. ವೆಚ್ಚವನ್ನು ಸರ್ಕಾರದಿಂದಲೇ ಭರಿಸುವುದು, ಬಿತ್ತನೆ ಬೀಜ, ರಸಗೊಬ್ಬರ ಖರೀದಿಗಾಗಿ ರೈತರಿಗೆ ಪ್ರತಿ ಎಕರೆ 10 ಸಾವಿರ ಆರ್ಥಿಕ ನೆರವು ನೀಡುವ ಮಹತ್ವದ ಅಂಶಗಳುಳ್ಳ ಪಂಚರತ್ನ ಯೋಜನೆ ಜಾರಿಗೊಳಿಸಲಿದ್ದಾರೆ ಎಂದರು.
    ಚುನಾವಣೆಗೂ ಮುನ್ನವೇ ನಗರೋತ್ಥಾನ ಯೋಜನೆಯಡಿ 14 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ನಗರಸಭೆ ವ್ಯಾಪ್ತಿಯ ಕಾಂಕ್ರೀಟ್ ಚರಂಡಿ, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕೆಲ ನಗರಸಭೆ ಸದಸ್ಯರು ನನ್ನ ಹೆಸರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದಲೇ ಕಾಮಗಾರಿ ಆರಂಭಿಸಲು ಬಿಟ್ಟಿಲ್ಲ. ಚುನಾವಣೆ ಮುಗಿದ ಕೂಡಲೇ ಕಾಮಗಾರಿ ಆರಂಭವಾಗಲಿವೆ ಎಂದರು.
    ಜೆಡಿಎಸ್ ತಾಲೂಕು ಅಧ್ಯಕ್ಷ ಟಿ. ತಿಮ್ಮರಾಯಪ್ಪ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ 5 ವರ್ಷಗಳ ಪೂರ್ಣಾವಧಿ ಮುಖ್ಯಮಂತ್ರಿ ಆಗಬೇಕೆಂಬ ಎಚ್.ಡಿ.ದೇವೇಗೌಡರ ಕನಸು ಈ ಬಾರಿ ನನಸಾಗಲಿದೆ. ಪಂಚರತ್ನ ಯೋಜನೆಯಿಂದ ರಾಜ್ಯದ ಎಲ್ಲ ಸಮಸ್ಯೆಗಳಿಗೆ ಮುಕ್ತಿ ದೊರೆತು ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು. ಸರ್ಕಾರ ಇಲ್ಲದಿದ್ದರೂ ಸುಮಾರು 400 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿರುವ ಡಾ.ಕೆ.ಶ್ರೀನಿವಾಸಮೂರ್ತಿ ಎಂದೂ ಪ್ರಚಾರ ಮಾಡಿಕೊಳ್ಳಲಿಲ್ಲ. ಜೆಡಿಎಸ್ ಅಭ್ಯರ್ಥಿ ಸ್ಥಳೀಯರು, ದಿನಬೆಳಗಾದರೆ ಕ್ಷೇತ್ರದ ಜನರ ಕೈಗೆ ಸಿಗುವವರು, ಇಂತಹ ಒಳ್ಳೆಯ ಅಭ್ಯರ್ಥಿಯನ್ನು ಕಳೆದುಕೊಳ್ಳುವುದು ಬೇಡ ಎಂದರು. ಅರಿಶಿಣಕುಂಟೆ ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ, ನಗರಸಭೆ ಸದಸ್ಯ ಎನ್.ಗಣೇಶ್, ಪುರಸಭೆ ಮಾಜಿ ಅಧ್ಯಕ್ಷ ಸೀತಾರಾಮ್, ಮುಖಂಡರಾದ ನಂಜುಂಡಪ್ಪ, ರಾಮಕೃಷ್ಣ ಹೆಗಡೆ, ಮಂಜುನಾಥ್, ರಮೇಶ್, ಆಂಜಿನಪ್ಪ, ಶಿವಕುಮಾರ್, ಮೈಕ್ ಶಿವಣ್ಣ, ಪ್ರಕಾಶ್, ಮಂಜಮ್ಮ, ಸಿದ್ಧರಾಜು, ಶರ್ಮಾ, ಬಾರ್‌ಆನಂದ್, ಶೇಖರ್, ಹರೀಶ್, ಹನುಮಂತರಾಜು, ಮಂಜುನಾಥ್, ವಕೀಕನಾಗೇಂದ್ರ, ಪುಟ್ಟಬೈಲೇಗೌಡ, ವಾಜರಹಳ್ಳಿ ರಮೇಶ್, ಜಕ್ಕನಹಳ್ಳಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
    ಕೈ ಬೆಂಬಲಿಗರ ಯತ್ನ ವಿಫಲ: ನಗರಸಭೆ ವ್ಯಾಪ್ತಿಯ ಭಿನ್ನಮಂಗಲ ಗ್ರಾಮಕ್ಕೆ ಮತಯಾಚನೆಗೆ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಬಂದ ವೇಳೆ ಕೆಲ ಕಾಂಗ್ರೆಸ್ ಬೆಂಬಲಿಗರು ಧಿಕ್ಕಾರ ಕೂಗಬೇಕೆಂಬ
    ವ್ಯಾಟ್ಸ್‌ಆ್ಯಪ್ ಸಂದೇಶಗಳು ಶುಕ್ರವಾರ ರಾತ್ರಿ ಹರಿದಾಡಿದ್ದು, ಪೊಲೀಸ್ ಇಲಾಖೆ ಅಧಿಕಾರಿ ಮುಂಜಾಗ್ರತಾ ಕ್ರಮದಿಂದಾಗಿ ಕಾಂಗ್ರೆಸ್ ಬೆಂಬಲಿಗರ ಪ್ರಯತ್ನ ವಿಫಲವಾಯಿತು.
    ದೇಗುಲಗಳಲ್ಲಿ ವಿಶೇಷ ಪೂಜೆ: ಮೊದಲಿಗೆ ಅರಿಶಿಣಕುಂಟೆಯ ಶ್ರೀ ಆಂಜನೇಯ ಸ್ವಾಮಿ ವಿಶೇಷ ಪೂಜೆ ಸಲ್ಲಿಸಿ ಮತಯಾಚನೆ ಆರಂಭಿಸಲಾಯಿತು. ನಂತರ ಭಿನ್ನಮಂಗಲ, ಭಕ್ತನಪಾಳ್ಯ, ವಾಜರಹಳ್ಳಿ, ಬಸವನಹಳ್ಳಿ, ವಿಶ್ವೇಶ್ಚರಪುರ ಗ್ರಾಮಗಳ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಆಯಾ ಭಾಗದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts