More

    5ನೇ ಟೆಸ್ಟ್ ಪಂದ್ಯ ರದ್ದತಿ ಕುರಿತು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಹೇಳಿದ್ದೇನು?

    ನವದೆಹಲಿ: ಕೋವಿಡ್ ವೈರಸ್‌ಗೆ ಹೆದರಿ ಆಟಗಾರರು ಆಡಲು ಹಿಂದೇಟು ಹಾಕಿದ್ದಕ್ಕೆ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯ ರದ್ದುಗೊಂಡಿತೇ ಹೊರತು, ಐಪಿಎಲ್‌ಗಾಗಿ ರದ್ದುಗೊಳಿಸಲಿಲ್ಲ ಎಂದು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಪಂದ್ಯಕ್ಕೆ ಎರಡು ದಿನ ಮುಂಚೆ ಜೂನಿಯರ್ ಫಿಸಿಯೋಗೆ ವೈರಸ್ ಕಾಣಿಸಿಕೊಂಡಿತು, ಇವರ ಸಂಪರ್ಕದಲ್ಲಿದ್ದ ಬಹುತೇಕ ಆಟಗಾರರು ಆಡಲು ಹಿಂದೇಟು ಹಾಕಿದರು. ಇದಕ್ಕೆ ಆಟಗಾರರನ್ನು ದೂರುವಂತಿಲ್ಲ. ಮುನ್ನೆಚ್ಚರಿಕೆ ದೃಷ್ಟಿಯಿಂದ ಪಂದ್ಯವನ್ನು ರದ್ದುಗೊಳಿಸಿದ್ದು, ಮುಂದಿನ ದಿನಗಳಲ್ಲಿ ಪಂದ್ಯ ನಡೆಯಲಿದೆ ಎಂದು ಗಂಗೂಲಿ ಹೇಳಿದ್ದಾರೆ. ಐಪಿಎಲ್‌ನಲ್ಲಿ ಆಡುವ ಸಲುವಾಗಿ ಭಾರತ ತಂಡದ ಯುಎಇಗೆ ಬೇಗ ತಲುಪುವ ದೃಷ್ಟಿಯಿಂದ ಕಡೇ ಪಂದ್ಯದಿಂದ ಹಿಂದೆ ಸರಿದರು ಎಂದು ಇಂಗ್ಲೆಂಡ್‌ನ ಕೆಲ ಮಾಜಿ ಆಟಗಾರರ ಟೀಕೆಗೆ ಗಂಗೂಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಐಪಿಎಲ್‌ಗೆ ಕೆಲ ಇಂಗ್ಲೆಂಡ್ ಆಟಗಾರರ ಅಲಭ್ಯ, ಫ್ರಾಂಚೈಸಿಗಳ ಅಸಮಾಧಾನ

    * 5ನೇ ಟೆಸ್ಟ್ ಎಂದೇ ಪರಿಗಣನೆ !
    ಮುಂದಿನ ದಿನಗಳಲ್ಲಿ ಪಂದ್ಯ ಆಯೋಜಿಸಲು ಇಸಿಬಿಗೆ ಮುಕ್ತ ಅವಕಾಶ ನೀಡಲಾಗಿದ್ದು, ಸರಣಿ ಭಾಗವಾಗಿ 5ನೇ ಪಂದ್ಯ ಅಂತಾನೆ ನಡೆಯಲಿದೆ ಎಂದು ಗಂಗೂಲಿ ತಿಳಿಸಿದರು. ಏಕೈಕ ಟೆಸ್ಟ್ ಪಂದ್ಯ ಎಂದು ನಡೆಯುವುದಿಲ್ಲ, ನಮಗೂ ಸರಣಿಯನ್ನು ಮುಕ್ತಾಯಗೊಳಿಸಬೇಕು ಎಂಬ ಹಂಬಲವಿದೆ. ಸರಣಿ ಗೆಲುವಿನ ಸನಿಹದಲ್ಲಿದ್ದೇವು, ಸರಣಿ ಸದ್ಯಕ್ಕೆ ಸ್ಥಗಿತಗೊಂಡಿದೆ ಅಷ್ಟೇ ಎಂದರು. ಸೆ.23 ರಂದು ವೈಯಕ್ತಿಕ ಕೆಲಸದ ನಿಮಿತ್ತ ಲಂಡನ್‌ಗೆ ತೆರಳುತ್ತಿರುವ ಗಂಗೂಲಿ, ಟೆಸ್ಟ್ ಪಂದ್ಯದ ಪರಿಷ್ಕೃತ ದಿನಾಂಕದ ಬಗ್ಗೆ ಇಸಿಬಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

    ನಿಗದಿತ ಓವರ್‌ಗಳ ತಂಡಕ್ಕೆ ರೋಹಿತ್ ಶರ್ಮ ಸಾರಥ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts