More

    ಎಸ್​ಪಿ ಸ್ಕ್ವಾಡ್ ಹೆಸರಿನಲ್ಲಿ ಹಣ ವಸೂಲಿಗೆ ಮುಂದಾದ ಗ್ಯಾಂಗ್​! ಥಳಿಸಿ, ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಬಾಗಲಕೋಟೆ: ಲಾಕ್​ಡೌನ್​ ಸಮಯದಲ್ಲಿ ಜನರು ಹಣ ಮಾಡಲು ಅನೇಕ ಮಾರ್ಗಗಳನ್ನು ಹುಡುಕಿಕೊಳ್ಳಲಾರಂಭಿಸಿದ್ಆರೆ. ಅದೇ ರೀತಿ ಎಸ್​ಪಿ ಸ್ಕ್ವಾಡ್​ ಹೆಸರಿನಲ್ಲಿ ಇಸ್ಪೀಟ್​ ಅಡ್ಡಗಳ ಮೇಲೆ ದಾಳಿ ಮಾಡಿ ಹಣ ಪೀಕಲು ಯತ್ನಿಸಿದ ಗ್ಯಾಂಗ್​ ಒಂದಕ್ಕೆ ಗ್ರಾಮಸ್ಥರೇ ಪಾಠ ಕಲಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

    ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಗ್ರಾಮಕ್ಕೆ ಕಾರಿನಲ್ಲಿ ಬಂದ ಗ್ಯಾಂಗ್​ ಒಂದು ತಾವು ಎಸ್ ಪಿ ಸ್ಕ್ವಾಡ್​ಗಳು ಎಂದು ಹೇಳಿಕೊಂಡಿದ್ದಾರೆ. ಅಲ್ಲಿನ ಇಸ್ಪೀಟ್ ಅಡ್ಡದ ಮೇಲೆ ದಾಳಿ ಮಾಡಿ ಹಣ ವಸೂಲಿಗೆ ಮುಂದಾಗಿದ್ದರು. ಅದಾದ ಮೇಲೆ ಕೆಲ ಮನೆಗಳಿಗೂ ನುಗ್ಗಿದ್ದರಂತೆ. ಇದರಿಂದಾಗಿ ಸಿಟ್ಟಿಗೆದ್ದ ಗ್ರಾಮಸ್ಥರು ಆ ಗ್ಯಾಂಗ್​ ಅನ್ನು ತರಾಟೆಗೆ ತೆಗೆದುಕೊಂಡಿದೆ. ನಿಮ್ಮ ಐಡಿ ಕಾರ್ಡ್​ ಎಲ್ಲಿ ಏನು ಎಂದು ಪ್ರಶ್ನಿಸಲಾರಂಭಿಸಿದಾಗ ಗ್ಯಾಂಗ್​ ಸುಮ್ಮನಾಗಿದೆ. ಗ್ರಾಮಸ್ಥರು ಆ ಗ್ಯಾಂಗ್​ಗೆ ಥಳಿಸಿರುವುದಾಗಿಯೂ ವರದಿಯಾಗಿದೆ. ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಡಾರ್ಕ್‌ವೆಬ್‌ನಲ್ಲಿ ಡ್ರಗ್ಸ್ ಖರೀದಿಸಿ ಲಾಕ್‌ಡೌನ್​ ವೇಳೆ ಮಾರಾಟ ಮಾಡುತ್ತಿದ್ದ ಕದೀಮರು

    ‘ಕೋಳಿಗೆ ನಿನ್ನೆಯಿಂದ ಭೇದಿ.. ಅದ್ಕೇ ಹಾಸ್ಪಿಟಲ್​ಗೆ ಕರ್ಕೊಂಡ್​ ಹೋಗ್ತಿದೀನಿ..’ ಪೊಲೀಸರನ್ನೇ ಬೆಚ್ಚಿಬೀಳಿಸಿದ ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts