More

    ಸಣಾಪುರ ಕಿರುಜಲಾಶಯದಲ್ಲಿ ಮೊಸಳೆ ಪ್ರತ್ಯಕ್ಷ

    ಗಂಗಾವತಿ: ತಾಲೂಕಿನ ಸಣಾಪುರದ ಕಿರುಜಲಾಶಯದಿಂದ ದಡಕ್ಕೆ ಬಂದಿದ್ದ ಮೊಸಳೆಯೊಂದನ್ನು ಗ್ರಾಮಸ್ಥರು ಗುರುವಾರ ರಕ್ಷಿಸಿದ್ದು, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

    ಕ್ವಿಂಟಾಲ್ ತೂಕದ ಮೊಸಳೆ ಸದೃಢವಾಗಿದ್ದು, ಜಲಾಶಯದ ಮೇಲ್ಭಾಗದಿಂದ ಜಿಗಿದಿರುವುದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ. ಸಣಾಪುರದಿಂದ ಜಂಗ್ಲಿಗೆ ಹೋಗುವ ಮಧ್ಯದಲ್ಲಿ ಕಿರುಜಲಾಶಯವಿದ್ದು, ನೀರಿಲ್ಲದಿದ್ದರಿಂದ ಬರಿದಾಗಿದೆ. ನೀರು ಹುಡಿಕಿಕೊಂಡು ಮೊಸಳೆ ಬಂದಿರುವ ಶಂಕೆಯಿದ್ದು, ಕೃಷಿ ಕೆಲಸಕ್ಕೆ ಹೋಗುತ್ತಿದ್ದ ಗ್ರಾಮಸ್ಥರು ಮೊಸಳೆಯನ್ನು ನೋಡಿದ್ದಾರೆ.

    ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮೊಸಳೆ ತಪ್ಪಿಸಿಕೊಳ್ಳಲು ಕೆಳಭಾಗದ ಕಲ್ಲಿನ ಪೊಟರೆಯಲ್ಲಿ ಅಡಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಗ್ರಾಮಸ್ಥರು ಮೊಸಳೆಯನ್ನು ಹಿಡಿದು ಅರಣ್ಯ ರಕ್ಷಕ ಮಾರುತಿಗೆ ಒಪ್ಪಿಸಿದ್ದಾರೆ. ಜಲಾಶಯದಲ್ಲಿ ಮೊಸಳೆ ಬಿಡಲು ಅರಣ್ಯ ಸಿಬ್ಬಂದಿ ನಿರ್ಧರಿಸಿದ್ದರೂ, ಗ್ರಾಮಸ್ಥರು ವಿರೋಧಿಸಿದ್ದರಿಂದ ಅನಿವಾರ್ಯವಾಗಿ ತುಂಗಭದ್ರಾ ನದಿಗೆ ಕೊಂಡೊಯ್ದು ಬಿಡಲಾಯಿತು.

    ಜಲಾಶಯದಲ್ಲಿ ಭಾರಿ ಪ್ರಮಾಣದ ಮೊಸಳೆಗಳು ಕಂಡು ಬರುತ್ತಿದ್ದು, ಬಂಡೆ ಕಲ್ಲುಗಳ ಮೇಲೆ ಕಾಣಿಸಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಜಲಾಶಯದಲ್ಲಿ ಈಜಾಡುವುದು ಮತ್ತು ಕಲ್ಲುಗಳ ಮೇಲಿಂದ ಜಿಗಿಯುವುದು ಹೆಚ್ಚಾಗಿದೆ. ಪ್ರವಾಸಿಗರಿಗಾಗಿ ಹರಿಗೋಲುಗಳನ್ನು ಹಾಕಲಾಗುತ್ತಿದೆ. ಪ್ರವಾಸಿಗರ ಸುರಕ್ಷತೆಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈಜಾಡುವುದನ್ನು ಮತ್ತು ಹರಿಗೋಲು ಹಾಕುವುದನ್ನು ನಿಷೇಧಿಸುವಂತೆ ಗ್ರಾಪಂ ಮಾಜಿ ಉಪಾಧ್ಯಕ್ಷ ನರಸಿಂಹಲು ಇತರರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts