More

  ಅಕ್ಷರ ಕಲಿತ ಶಾಲೆಗೆ ಏಳು ಲಕ್ಷ ರೂ. ಸಾಮಗ್ರಿ ವಿತರಣೆ

  ಗಂಗಾವತಿ: ವಿದ್ಯೆ ಕಲಿತ ತಾಲೂಕಿನ ಢಣಾಪುರದ ಸ.ಹಿ.ಪ್ರಾ. ಶಾಲೆಗೆ ಹಳೇ ವಿದ್ಯಾರ್ಥಿ ಬೆಂಗಳೂರಿನ ಟಿ.ವೆಂಕಟಪ್ರಸಾದ ಅಯೋಧ್ಯೆ ಎಂಬುವರು 7ಲಕ್ಷ ರೂ. ಮೌಲ್ಯದ ಕಲಿಕಾ ಸಾಮಗ್ರಿ ನೀಡಿ ಮಾದರಿಯಾಗಿದ್ದಾರೆ.

  ಮೂಲತಃ ಅಯೋಧ್ಯೆಯವರಾಗಿದ್ದು, 1970ರಲ್ಲಿ ಢಣಾಪುರ ಸ.ಹಿ.ಪ್ರಾ.ಶಾಲೆಯಲ್ಲಿ ಓದಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಸ್ವಂತ ಉದ್ಯಮ ಆರಂಭಿಸಿದ್ದಾರೆ. ಓದಿದ ಸ್ಕೂಲ್‌ಗೆ ನೆರವಾಗುವ ನಿಟ್ಟಿನಲ್ಲಿ ಶಾಲೆಗೆ ಮಂಗಳವಾರ ಭೇಟಿ ನೀಡಿದ್ದು, 7ಲಕ್ಷ ರೂ.ಮೌಲ್ಯದ ಕಲಿಕಾ ಸಾಮಗ್ರಿಗಳ ಜತೆಗೆ ವಿದ್ಯಾರ್ಥಿಗಳಿಗೆ 300 ಜ್ಯಾಮಿಟ್ರಿ ಬಾಕ್ಸ್ ಮತ್ತು ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.

  ಸ್ವಂತ ಉದ್ಯಮದೊಂದಿಗೆ ಹಲವರಿಗೆ ಉದ್ಯೋಗ ನೀಡಿದ್ದರೂ, ಸರ್ಕಾರಿ ಶಾಲೆಗೆ ನೆರವು ನೀಡಿದ ಬಗ್ಗೆ ಹೆಮ್ಮೆಯಿದೆ. ಸರ್ಕಾರಿ ಶಾಲೆ ಮಕ್ಕಳು ಗುಣಮಟ್ಟದ ಸೌಲಭ್ಯ ಮತ್ತು ಶಿಕ್ಷಣದಿಂದ ವಂಚಿತರಾಗಬಾರದೆಂದು ಉದ್ದೇಶದಿಂದ ಕೈಲಾದಷ್ಟು ನೆರವು ನೀಡಿದ್ದೇನೆ ಎಂದು ಟಿ.ವೆಂಕಟಪ್ರಸಾದ ಅಯೋಧ್ಯೆ ಹೇಳಿದರು.

  ಇದೇ ಸಂದರ್ಭದಲ್ಲಿ ಶಾಲಾಡಳಿತ ಮಂಡಳಿ ಮತ್ತು ಗ್ರಾಮಸ್ಥರ ಪರವಾಗಿ ವೆಂಕಟಪ್ರಸಾದರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ವೆಂಕಟೇಶ, ಪ್ರೌಢಶಾಲೆ ಮುಖ್ಯಶಿಕ್ಷಕ ಹನುಮಂತಪ್ಪ ಚವ್ಹಾಣ, ಶಿಕ್ಷಕರಾದ ಶರಣಬಸವ, ಶಿವಕುಮಾರ, ಕವಿತಾ, ಜ್ಯೋತಿ, ತಾಪಂ ಮಾಜಿ ಸದಸ್ಯ ಬಿ.ಕ್ಕೀರಪ್ಪ, ಮುಖಂಡರಾದ ಮಲ್ಲನಗೌಡ, ಚಿದಾನಂದಪ್ಪ, ಡಿ.ವಿಶ್ವನಾಥ, ಮದನಮೋಹನ್, ಹರೀಶ್, ಹನುಮೇಶ, ಟಿ.ನಾಗಪ್ಪ, ಆನಂದ, ರಾಘು ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts