More

    ನಡುಗಡ್ಡೆಯಲ್ಲಿ ಸಿಲುಕಿಕೊಂಡ ಕುರಿಗಾಹಿಗಳು

    ಗಂಗಾವತಿ: ತಾಲೂಕಿನ ವಿಪ್ರ ದೇವಘಾಟ್ ಬಳಿ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿ ಇಬ್ಬರು ಕುರಿಗಾಹಿಗಳು ಮತ್ತು 100 ಕುರಿಗಳು ಸಿಲುಕಿದ್ದು, ರಕ್ಷಣೆಗಾಗಿ ಜಿಲ್ಲಾಡಳಿತ ಹರಸಾಹಸ ನಡೆಸಿತು.
    ಮಲ್ಲಾಪುರದ ಹನುಮಪ್ಪ, ಪುತ್ರ ಹನುಮೇಶ ಗೊಲ್ಲರ್, ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದು, ಮೊಬೈಲ್ ಮೂಲಕ ತಾಲೂಕು ಆಡಳಿತ ನಿರಂತರ ಸಂಪರ್ಕದಲ್ಲಿದೆ. ಕುರಿ ಮೇಯಿಸಲು ದೇವಘಾಟ ಬಳಿ ಮಂಗಳವಾರ ತೆರಳಿದ್ದು, ಸಂಜೆ ವಾಪಸಾಗಬೇಕು ಎನ್ನುವಷ್ಟರಲ್ಲಿ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಟ್ಟಿದ್ದರಿಂದ ಸಂಪರ್ಕ ಕಡಿತಗೊಂಡಿದೆ. ನದಿಗೆ 1.70 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬರುತ್ತಿದೆ. ನಡುಗಡ್ಡೆಯಲ್ಲಿ ಮನೆಯೊಂದರ ಹೊರವಲಯದಲ್ಲಿ ಆಶ್ರಯ ಪಡೆದಿದ್ದು, ರಕ್ಷಿಸುವಂತೆ ಗಡ್ಡಿಯ ಬೆಟ್ಟದ ಮೇಲಿಂದ ಮನವಿ ಮಾಡುತ್ತಿದ್ದಾರೆ.
    ರಕ್ಷಣೆ ವಿಲ: ಕುರಿಗಾಹಿ ಮತ್ತು ಕುರಿಗಳನ್ನು ರಕ್ಷಿಸಲು ಕೊಪ್ಪಳ, ಗಂಗಾವತಿ ಅಗ್ನಿಶಾಮಕ ದಳದ ರಕ್ಷಣಾ ಪಡೆ ಯತ್ನಿಸಿತ್ತಾದರೂ ನೀರಿನ ರಭಸ ಹೆಚ್ಚಿದ್ದರಿಂದ ಸಾಧ್ಯವಾಗಿಲ್ಲ. ರಕ್ಷಣಾ ಸಲಕರಣೆ, ಬನಾನ್ ಬೋಟ್ ಸಂಚಾರದ ಸಾಮರ್ಥ್ಯ ಕಡಿಮೆ ಇರುವ ಕಾರಣ ತೆರಳಲು ಸಿಬ್ಬಂದಿ ಹಿಂದೇಟು ಹಾಕಿದ್ದಾರೆ. ಸ್ಥಳಕ್ಕೆ ಎಸಿ ಬಸವಣ್ಣಪ್ಪ ಕಲಶೆಟ್ಟಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು. ರಕ್ಷಿಸುವ ಕುರಿತಂತೆ ಅಗ್ನಿಶಾಮಕ ಸಿಬ್ಬಂದಿ ಜತೆ ಚರ್ಚಿಸಿದ್ದು, ಎನ್‌ಡಿಆರ್‌ಎ್ ತಂಡದ ನೆರವು ಪಡೆಯುವ ಬಗ್ಗೆ ಯೋಚಿಸಿದ್ದಾರೆ.

    ತಹಸೀಲ್ದಾರ್ ಯು.ನಾಗರಾಜ್, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಗ್ರಾಮೆಲೆಕ್ಕಿಗ ಮಂಜುನಾಥ ದುಮ್ಮಾಣಿ, ಅಗ್ನಿಶಾಮಕ ಅಧಿಕಾರಿಗಳಾದ ಜಿ.ಕೃಷ್ಣೋಜಿ, ರಂಗನಾಥ ಇತರರಿದ್ದರು.

    ನಡುಗಡ್ಡೆಯಲ್ಲಿ ಸಿಲುಕಿದವರೊಂದಿಗೆ ತಾಲೂಕಾಡಳಿತ ಸಂಪರ್ಕದಲ್ಲಿದ್ದು, ಆಹಾರಕ್ಕೆ ಕೊರತೆಯಿಲ್ಲ. ರಕ್ಷಿಸುವ ಕುರಿತು ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇನೆ. ಲಿಂಗಸುಗೂರಿನ ಎನ್‌ಡಿಆರ್‌ಎ್ ತಂಡದೊಂದಿಗೆ ಈಗಾಗಲೇ ಚರ್ಚಿಸಿದ್ದು, ಅಗತ್ಯ ಬಿದ್ದರೆ ಕರೆಸಿಕೊಳ್ಳಲಾಗುವುದು.
    ಬಸವಣ್ಣಪ್ಪ ಕಲಶೆಟ್ಟಿ
    ಎಸಿ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts