More

    ಆಪ್ತ ಸಮಾಲೋಚನೆಯಿಂದ ಆತ್ಮವಿಶ್ವಾಸ ಹೆಚ್ಚಳ

    ಗಂಗಾವತಿ: ಮುಂಜಾಗ್ರತೆ ಕ್ರಮ ಮತ್ತು ಸಕಾಲಕ್ಕೆ ಚಿಕಿತ್ಸೆ ಪಡೆಯುವ ಮೂಲಕ ರೋಗ ನಿಯಂತ್ರಿಸಬಹುದಾಗಿದ್ದು, ಆತ್ಮವಿಶ್ವಾಸ ಮುಖ್ಯವಾಗಿದೆ ಎಂದು ಉಪವಿಭಾಗ ಆಸ್ಪತ್ರೆ ಎಆರ್‌ಟಿ ವಿಭಾಗದ ಆಪ್ತ ಸಮಾಲೋಚಕ ಶಿವಾನಂದ ನಾಯ್ಕರ್ ಹೇಳಿದರು.

    ನಗರದ ಟಿಎಂಎಇ ಸಂಸ್ಥೆಯ ಬಿಇಡಿ ಕಾಲೇಜು ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ಷಯ ಮತ್ತು ಏಡ್ಸ್ ರೋಗ ನಿಯಂತ್ರಣ ಕುರಿತು ಜಾಗೃತ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

    ರೋಗ ನಿಯಂತ್ರಣಕ್ಕಾಗಿ ಕ್ರೀಯಾಶೀಲ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ತಪಾಸಣೆ ಮತ್ತು ಚಿಕಿತ್ಸೆಗಾಗಿ ಇಲಾಖೆ ಆಸ್ಪತ್ರೆಯಲ್ಲಿ ಮಾಹಿತಿ ಪಡೆಯಬಹುದಾಗಿದೆ. ಆಪ್ತ ಸಮಾಲೋಚನೆಯೊಂದಿಗೆ ಬಹುತೇಕ ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಾಗುತ್ತಿದೆ ಎಂದರು.

    ಅಧ್ಯಕ್ಷತೆವಹಿಸಿದ್ದ ಸಹಾಯಕ ಪ್ರಾಧ್ಯಾಪಕ ಕೆ.ಎಂ.ಶಿವಪ್ರಕಾಶ ಮಾತನಾಡಿ, ಆರೋಗ್ಯದತ್ತ ಹೆಚ್ಚಿನ ಕಾಳಜಿವಹಿಸಬೇಕಿದ್ದು, ಸ್ವಚ್ಛತೆ ಮತ್ತು ಪರಿಸರ ರಕ್ಷಣೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

    ರೋಗ ಹರಡುವಿಕೆ, ತಪಾಸಣೆ, ಚಿಕಿತ್ಸೆ, ನಿಯಂತ್ರಣ ಮತ್ತು ಇಲಾಖೆ ಯೋಜನೆಗಳ ಬಗ್ಗೆ ಆರೋಗ್ಯ ಕಾರ್ಯಕರ್ತರಾದ ಹುಸೇನ್‌ಬಾಷಾ, ಅಕ್ಬರ್ ಪಾಷಾ ಮಾಹಿತಿ ನೀಡಿದರು.

    ಪ್ರಾಧ್ಯಾಪಕರಾದ ಡಾ.ಜಿ.ಎಂ.ವಿಜಯಲಕ್ಷ್ಮೀ, ಡಾ.ಡಿ.ಎಂ. ಅರುಣಕುಮಾರ, ಡಾ.ಕೆ.ರಮೇಶ ಸಿದ್ದಪ್ಪ, ಜಯರಾಮ ಮರಡಿತೋಟದ, ಶಿವರಾಜ ಪಾಟೀಲ, ಎಂ.ರುದ್ರೇಶ ಆರಾಳ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts