More

    ಕಾಲುವೆಗಳ ನಿರ್ವಹಣೆ ಪ್ರತಿಯೊಬ್ಬರ ಜವಾಬ್ದಾರಿ

    ಗಂಗಾವತಿ: ಕಾಲುವೆಗಳ ನಿರ್ವಹಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಜಲಸಂಪನ್ಮೂಲ ರಕ್ಷಿಸುವಂತೆ ರಾಜ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಭಾವಿ ಸಲಹೆ ನೀಡಿದರು.

    ತಾಲೂಕಿನ ಆನೆಗೊಂದಿ ಭಾಗದಲ್ಲಿ ನೀರಾವರಿ ನಿಗಮದಿಂದ ಕೈಗೆತ್ತಿಕೊಂಡ ವಿಎನ್‌ಸಿ ವ್ಯಾಪ್ತಿಯ ಕಾಲುವೆಗಳ ಕಾಮಗಾರಿಗಳನ್ನು ಬುಧವಾರ ವೀಕ್ಷಿಸಿ ಮಾತನಾಡಿದರು.

    ವಿಜಯನಗರ ಆಡಳಿತಾವಧಿಯಲ್ಲಿ ಕೊಪ್ಪಳ, ವಿಜಯನಗರ ಜಿಲ್ಲೆ ವ್ಯಾಪ್ತಿಯಲ್ಲಿ ನೀರಾವರಿ ಕಾಲುವೆಗಳನ್ನು ನಿರ್ಮಿಸಿದ್ದು, ನೈಸರ್ಗಿಕ ಸಂಪತ್ತು ಹೆಚ್ಚಳಕ್ಕೆ ಕಾರಣವಾಗಿದೆ. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ವಿಶೇಷ ಅನುದಾನದಲ್ಲಿ ಕಾಲುವೆಗಳ ಆಧುನೀಕರಣ ಯೋಜನೆ ರೂಪಿಸಿದ್ದು, ಕೆಲವೆಡೆ ಕಾಮಗಾರಿಗಳು ನಡೆಯುತ್ತಿವೆ. ಕಾಲುವೆ ವ್ಯಾಪ್ತಿಯ ಅಪರೂಪದ ಜಲಚರಗಳನ್ನು ಗಮನದಲ್ಲಿಟ್ಟುಕೊಂಡು ಆಧುನೀಕರಣದ ಯೋಜನೆ ರೂಪಿಸಲಾಗಿದೆ ಎಂದರು.

    ಅಧಿಕಾರವಹಿಸಿ ಕೊಂಡ ನಂತರ ಮೊದಲ ಬಾರಿಗೆ ತುಂಗಭದ್ರಾ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ಭೇಟಿ ನೀಡಿದ್ದು, ಅಣೆಕಟ್ಟೆಗಳು, ರಾಯ, ಬಸವ, ವಿಎನ್‌ಸಿ ಕಾಲುವೆ ವ್ಯಾಪ್ತಿಯ ಕಾಮಗಾರಿ ವೀಕ್ಷಿಸಿದರು.

    ಆಧುನೀಕರಣ ಕಾಮಗಾರಿ ಕುರಿತು ಯೋಜನೆ ನೋಡಲ್ ಅಧಿಕಾರಿ ಕೆ.ಬಿ.ಎಚ್.ಶಿವಶಂಕರ್ ಮಾಹಿತಿ ನೀಡಿದರು. ಕಾಡಾ ವಿಭಾಗದ ಮುಖ್ಯ ತಾಂತ್ರಿಕ ಇಂಜಿನಿಯರ್ ಬಸಪ್ಪ ಜಾನಕರ್, ಅಗಳಕೇರಾ ವಿಭಾಗದ ಎಇಇ ಅಮರೇಶಪ್ಪ, ತಜ್ಞರಾದ ರಮೇಶ, ಮಲ್ಲಿಕಾರ್ಜುನ, ಆರ್.ದೊರೈಸ್ವಾಮಿ, ಗುತ್ತಿಗೆ ಕಂಪನಿ ಪ್ರತಿನಿಧಿ ಕೆ.ಟಿ.ಶೆಟ್ಟಿ, ನಿವೃತ್ತ ಇಂಜಿನಿಯರ್ ರಾಜೇಶ ವಸದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts