More

    ಮಳೆಗೆ ಜೀನಜೀವನ ಅಸ್ತವ್ಯಸ್ತ; ವಿದ್ಯುತ್ ಕಡಿತ, ಗುಡಿಸಲುಗಳಿಗೆ ನುಗ್ಗಿದ ಜಲ


    ಗಂಗಾವತಿ: ನಗರ ಸೇರಿ ತಾಲೂಕಾದ್ಯಂತ ಶನಿವಾರ ತಡರಾತ್ರಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

    ಕೊಳಚೆ ಪ್ರದೇಶದ ಜನರು ಹೆಚ್ಚು ತೊಂದರೆ ಅನುಭವಿಸಿದರು. ಚಂದ್ರಹಾಸ ಥಿಯೇಟರ್, ಕಂದಾಯ ಭವನ, ಜಯನಗರ ಬೈಪಾಸ್ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಸಂಚಾರ ವ್ಯತ್ಯಯ ಉಂಟಾಯಿತು. ಬಸ್ ನಿಲ್ದಾಣದ ಬಳಿ ಶುದ್ಧ ಕುಡಿವ ನೀರು ಪೂರೈಕೆ ವಾಲ್ವ್ ಕುಸಿದ ಪರಿಣಾಮ ದೊಡ್ಡ ಪ್ರಮಾಣದ ಗುಂಡಿ ಬಿದ್ದಿದ್ದು, ಅಪಾರ ಪ್ರಮಾಣದ ನೀರು ಪೋಲಾಯಿತು. ವಿದ್ಯುತ್ ವ್ಯತ್ಯಯದಿಂದ ಶುದ್ಧ ಕುಡಿವ ನೀರು ಪೂರೈಕೆ ಇರಲಿಲ್ಲ. ಮುಜಾವರ ಕ್ಯಾಂಪ್, ಮೆಹಬೂಬ್‌ನಗರ, ಗೌಸಿಯಾ ಕಾಲನಿ, ಎಚ್‌ಆರ್‌ಎಸ್ ಕ್ಯಾಂಪ್, ಗುಡ್ಡದ ಕ್ಯಾಂಪ್ ಪ್ರದೇಶದ ಗುಡಿಸಲುಗಳಿಗೆ ನೀರು ನುಗ್ಗಿದೆ. ದುರ್ಗಮ್ಮ ಹಳ್ಳಕ್ಕೆ ಹೆಚ್ಚುವರಿ ನೀರು ಹರಿದು ಬಂದಿದೆ. ತುಂಗಭದ್ರಾ ಜಲಾಶಯದಿಂದ ನದಿ ತೀರಕ್ಕೆ 60 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಹರಿಗೋಲು ಮತ್ತು ಯಾಂತ್ರಿಕ ದೋಣಿ ಬಳಸುವುದನ್ನು ನಿಷೇಧಿಸಲಾಗಿದೆ.ಗಂಗಾವತಿ ಹೋಬಳಿಯಲ್ಲಿ 19.5 ಮಿಮೀ, ವೆಂಕಟಗಿರಿ 13.2, ಮರಳಿ 32.1 ಮತ್ತು ವಡ್ಡರಹಟ್ಟಿಯಲ್ಲಿ 57 ಮಿಮೀ ಮಳೆಯಾದ ಬಗ್ಗೆ ವರದಿಯಾಗಿದೆ. ಬಾಧಿತ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಂದಾಯ ಮತ್ತು ನಗರಸಭೆ ನಿಯೋಜಿತ ಸಿಬ್ಬಂದಿ ಕೇಂದ್ರ ಸ್ಥಾನ ಬಿಡದಂತೆ ಜಿಲ್ಲಾಡಳಿತ ಸೂಚಿಸಿದೆ.

    ದಸರಾ ಕ್ರೀಡಾಕೂಟ ಮುಂದಕ್ಕೆ : ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ಆ.28ರಂದು ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಮಳೆ ಕಾರಣ ಮುಂದೂಡಲಾಯಿತು. ರನ್ನಿಂಗ್ ಟ್ರ್ಯಾಕ್ ಮತ್ತು ಇತರ ಮೈದಾನ ಜಲಾವೃತವಾಗಿದೆ. ವೈಯಕ್ತಿಕ ಮತ್ತು ಗುಂಪು ಆಟಗಳನ್ನು ಆಡಿಸಲು ಮೈದಾನ ಸಿದ್ಧಪಡಿಸಿ ಉದ್ಘಾಟನೆಗೆ ವ್ಯವಸ್ಥೆ ಮಾಡಲಾಗಿತ್ತು. ಸೆ.1ರಂದು ಕ್ರೀಡಾಕೂಟ ನಡೆಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ಅಧಿಕಾರಿ ಕೆ.ರಂಗಸ್ವಾಮಿ ನಾಯಕ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts