More

    ನವವೃಂದಾವನ ಗಡ್ಡಿಯಲ್ಲಿ ಶ್ರೀ ಸುಧೀಂದ್ರ ತೀರ್ಥರ ಮಧ್ಯಾರಾಧನೆ ಸಂಪನ್ನ

    ಗಂಗಾವತಿ: ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ನವವೃಂದಾವನ ಗಡ್ಡಿಯಲ್ಲಿ ಮಂತ್ರಾಲಯ ಮಠದಿಂದ ಶ್ರೀ ಸುಧೀಂದ್ರ ತೀರ್ಥರ ಮಧ್ಯಾರಾಧನೆ ಗುರುವಾರ ಭಕ್ತಿ, ಶ್ರದ್ಧೆಯಿಂದ ಜರುಗಿತು.

    ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ಮೂಲರಾಮದೇವರ ಸಂಸ್ಥಾನಪೂಜೆ, ಸುಧೀಂದ್ರ ತೀರ್ಥರ ವೃಂದಾವನಕ್ಕೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ರಜತ ಕವಚ ಸಮರ್ಪಣೆ ಮತ್ತು ಎಲ್ಲ ವೃಂದಾವನಗಳಿಗೆ ಪೂಜೆ ಸಲ್ಲಿಸಲಾಯಿತು. ಮಹಾಮಂಗಳಾರತಿ, ವಿದ್ವಾಂಸರಿಂದ ಪ್ರವಚನ, ಅಷ್ಟೋತ್ತರ ಪಾರಾಯಣ, ಭಜನೆ ಹಮ್ಮಿಕೊಳ್ಳಲಾಗಿತ್ತು. ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯದಿಂದ ಆನೆಗೊಂದಿಗೆ ಬಂದಿದ್ದ ರೇಷ್ಮೆ ವಸವನ್ನು ಮೆರವಣಿಗೆ ಮೂಲಕ ನವವೃಂದಾವನಕ್ಕೆ ತರಲಾಯಿತು. ನಂತರ ಸುಧೀಂದ್ರ ತೀರ್ಥರ ವೃಂದಾವನಕ್ಕೆ ಸಮರ್ಪಿಸಲಾಯಿತು. ಭಕ್ತರಿಗೆ ತಪ್ತ ಮುದ್ರಾಧಾರಣೆ ಹಾಕಲಾಯಿತು.

    ವಿಪ್ರ ಸಮಾಜದ ಮುಖಂಡರಾದ ನರಹರಿ ಆಚಾರ್, ಸುಳಾದಿ ಹನುಮೇಶಾಚಾರ್, ವರದೇಂದ್ರಾಚಾರ್, ಭೀಮಾಚಾರ್, ಪುರಾಣಿಕ ಶ್ರೀನಿವಾಚಾರ್, ಅನಂತ ಪುರಾಣಿಕ್, ನರಸಿಂಗಾಚಾರ್, ಸಾಮವೇದ ಗುರುರಾಜಾಚಾರ್, ರಾಮಕೃಷ್ಣ ಜಹಾಗೀರದಾರ್, ವಿಜೇಂದ್ರಾಚಾರ್, ನರಸಿಂಹಾಚಾರ್, ಆನೆಗೊಂದಿ ರಾಯರ ಮಠದ ಸುಮಂತ ಕುಲ್ಕರ್ಣಿ ಇಡಪನೂರ್ ಸೇರಿ ಕೊಪ್ಪಳ, ರಾಯಚೂರು, ಹೊಸಪೇಟೆ, ಬಳ್ಳಾರಿ, ಕಂಪ್ಲಿ ಭಕ್ತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts