More

    ಒಳಮೀಸಲಿಗಾಗಿ 21ರಂದು ಬೆಳಗಾವಿಯಲ್ಲಿ ಧರಣಿ: ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮುತ್ತಣ್ಣ ಹೇಳಿಕೆ

    ಗಂಗಾವತಿ: ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡುವಂತೆ ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧದ ಮುಂದೆ ಡಿ.21ರಂದು ಧರಣಿ ನಡೆಸಲಾಗುವುದು ಎಂದು ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮುತ್ತಣ್ಣ ವೈ.ಬೆಣ್ಣೂರ್ ಹೇಳಿದರು.

    ನಗರದ ಡಾ.ಅಂಬೇಡ್ಕರ್ ವೃತ್ತದ ಬಳಿ ಒಕ್ಕೂಟದಿಂದ ಹಮ್ಮಿಕೊಂಡಿರುವ ಜಾಗೃತಿ ಯಾತ್ರೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ನ್ಯಾಯಾಧೀಶ ಎ.ಜೆ.ಸದಾಶಿವ ಅಯೋಗ ವರದಿಯಂತೆ ಮಾದಿಗ ಸಮುದಾಯಕ್ಕೆ ಒಳ ಮೀಸಲು ನೀಡಬೇಕಿದ್ದು, ಚಳಿಗಾಳ ಅಧಿವೇಶನದಲ್ಲಿ ಮಂಡಿಸುವಂತೆ ಒತ್ತಾಯಿಸಲಾಗಿದೆ. ಮೀಸಲು ವಿರೋಧಿಸುವ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುವುದು. ಒಳ ಮೀಸಲು ವಿಚಾರದಲ್ಲಿ ರಾಜಕೀಯ ಪಕ್ಷಗಳು ನಿರ್ಲಕ್ಷಿಸುತ್ತಿದ್ದು, ಗಮನ ಸೆಳೆಯಲು ಎಲ್ಲ ಜಿಲ್ಲೆಗಳಲ್ಲಿ ಬೈಕ್ ರ‌್ಯಾಲಿ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಲಾಗುವುದು ಎಂದರು.

    ಒಕ್ಕೂಟದ ಪದಾಧಿಕಾರಿಗಳಾದ ಎಸ್.ಆರ್.ರಂಗನಾಥ ಶಿರಾ, ಅಜಿತ್ ಮಾದಾರ್, ಸ್ಥಳೀಯ ಸಂಘಟನೆ ಮುಖಂಡರಾದ ಸೋಮನಾಥ ಕಂಪ್ಲಿ, ಮಲ್ಲಿಕಾರ್ಜುನ ದೇವರಮನಿ, ದುರುಗಪ್ಪ, ಕುಮಾರ ಸಂಗಾಪುರ, ನೀಲಪ್ಪ ಹಣವಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts