More

    ಕಾರ್ಮಿಕರಿಗೆ ಕನಿಷ್ಟ ವೇತನ ಜಾರಿಗೊಳಿಸಲು ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್.ಬಸವರಾಜ ಆಗ್ರಹ

    ಗಂಗಾವತಿ: ಜನಪ್ರತಿನಿಧಿಗಳಿಗಾಗಿ ದುಂದು ವೆಚ್ಚ ಮಾಡುವ ಸರ್ಕಾರ, ಕಾರ್ಮಿಕರಿಗೆ ಕನಿಷ್ಟ ವೇತನ ಜಾರಿಗೊಳಿಸುವಲ್ಲಿ ಮೀನಮೇಷ ಎಣಿಸುತ್ತಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್.ಬಸವರಾಜ ಹೇಳಿದರು.

    ನಗರದ ಶ್ರೀ ಚನ್ನಬಸವ ಸ್ವಾಮಿ ಕಲಾ ಮಂದಿರದಲ್ಲಿ ಸಿಐಟಿಯುನಿಂದ ಬುಧವಾರ ಆಯೋಜಿಸಿದ್ದ 5ನೇ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದರು. ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಶ್ರಮ ಸಾಕಷ್ಟಿದ್ದು, ಕನಿಷ್ಟ 26ಸಾವಿರ ರೂ. ನಿಗದಿಗೊಳಿಸುವಂತೆ ಒತ್ತಾಯಿಸಿದರೂ, ಕೇಂದ್ರ ಸರ್ಕಾರ 5,780ರೂ.ಗೆ ಶಿಾರಸು ಮಾಡಿದ್ದು ಖಂಡನೀಯ. ಆಹಾರ ಸೇರಿ ದೈನಂದಿನ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಕಾರ್ಮಿಕ ಸಂಘಟನೆಗಳ ಮನವಿಗೆ ಸರ್ಕಾರ ಬೆಲೆ ನೀಡುತ್ತಿಲ್ಲ. ದೇಶದಲ್ಲಿರುವ 11ಕಾರ್ಮಿಕ ಸಂಘಟನೆಗಳ ಪೈಕಿ ಸಿಐಟಿಯು ಪ್ರಬಲ ಮತ್ತು ಕ್ರಿಯಾಶೀಲರಾಗಿದ್ದು, ರಾಜ್ಯಮಟ್ಟದ ಸಮಾವೇಶ ಉಡುಪಿ ಮತ್ತು ರಾಷ್ಟ್ರೀಯ ಮಟ್ಟದ ಸಮಾವೇಶ ಬೆಂಗಳೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಸಮಾವೇಶದ ಮೂಲಕ ಹೋರಾಟದ ಕ್ರಿಯಾಯೋಜನೆ ರೂಪಿಸುತ್ತಿದ್ದು, ಸಂಘಟನಾತ್ಮಕ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

    ಜಿಲ್ಲಾ ಕಾರ್ಯದರ್ಶಿ ಖಾಸೀಂ ಸರ್ದಾರ್ ಮಾತನಾಡಿ, ಸಮಾವೇಶಗಳು ಕ್ರಿಯಾಶೀಲತೆ ಹೆಚ್ಚಿಸುತ್ತಿದ್ದು, ಹೋರಾಟದ ರೂಪುರೇಷೆ ಸಿದ್ಧಪಡಿಸಲು ವೇದಿಕೆಯಾಗಿದೆ. ಕಾರ್ಮಿಕರನ್ನು ಕಡೆಗಣಿಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹೋರಾಟದ ಮೂಲಕ ಉತ್ತರ ನೀಡಲಾಗುತ್ತಿದೆ. ಮೂರುವರ್ಷಕ್ಕೊಮ್ಮೆ ಸಮಾವೇಶ ಆಯೋಜಿಸಲಾಗುತ್ತಿದೆ ಎಂದರು.

    ಅಧ್ಯಕ್ಷತೆವಹಿಸಿದ್ದ ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಮಾತನಾಡಿದರು.ವಿವಿಧ ಸಂಘಟನೆ ಪದಾಧಿಕಾರಿಗಳಾದ ಲಕ್ಷ್ಮೀ ದೇವಿ, ನಾಗೇಶ ನಾಯಕ, ಹನುಮಂತಪ್ಪ, ಶಿವನಗೌಡ, ಶಿವಕುಮಾರ, ಜಿ.ಹುಲಿಗೆಮ್ಮ, ಟಿ.ನಬೀಸಾಬ್, ಶಿವಣ್ಣಬೆಣಕಲ್, ಗಿರಿಜಮ್ಮ ದರೋಜಿ, ಶ್ರೀನಿವಾಸ ಹೊಸಳ್ಳಿ, ಸಾವಿತ್ರಿ ಜೋಶಿ ಸೇರಿ ಅಕ್ಷರ ದಾಸೋಹ, ಅಂಗನವಾಡಿ, ಪ್ರಾಂತ ಕೂಲಿಕಾರರ ಮತ್ತು ರೈ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ತಾಲೂಕು ಕಾರ್ಯದರ್ಶಿ ಮಂಜುನಾಥ ಡಗ್ಗಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts