More

    ಗಂಗಾವತಿಯಲ್ಲಿ ಬೋನಿಗೆ ಬಿದ್ದ ಗಂಡು ಚಿರತೆ ; ಇನ್ನೊಂದರ ಸೆರೆಗೆ ನಡೆದಿದೆ ಕಾರ್ಯಾಚರಣೆ

    ಗಂಗಾವತಿ: ಇಲ್ಲಿನ ಜಯನಗರ ಬಳಿ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ ಎರಡು ಚಿರತೆಗಳ ಪೈಕಿ ಒಂದು ಬೋನಿಗೆ ಬಿದ್ದಿದೆ.

    ವಾರದ ಹಿಂದೆ ವಾಯುವಿಹಾರಕ್ಕೆ ತೆರಳಿದ ಸ್ಥಳೀಯರಿಗೆ ಚಿರತೆಗಳು ಕಾಣಿಸಿಕೊಂಡಿದ್ದು, ಕೆಳಮಟ್ಟದವರಿಗೂ ಸಂಚರಿಸಿದ್ದವು. ಅರಣ್ಯ ಇಲಾಖೆಯು ಎಪಿಎಂಸಿ ಮಾಜಿ ಸದಸ್ಯ ಜೋಗದ ನಾರಾಯಣಪ್ಪ ನಾಯಕ ಅವರ ಹೈನುಗಾರಿಕೆ ಶೆಡ್ ಸನಿಹದಲ್ಲಿ ಬೋನು ಇಟ್ಟಿತ್ತು. ಭಾನುವಾರ ರಾತ್ರಿ ಆಹಾರ ಅರಸಿ ಬಂದ ಚಿರತೆ ಬೋನಿಗೆ ಬಿದ್ದಿದ್ದು, ನಾಯಿಗಳು ಕಿರುಚಾಟ ಹೆಚ್ಚಾಗಿದ್ದರಿಂದ ಪರಿವೀಕ್ಷಿಸಿದಾಗ ಬಲೆಗೆ ಬಿದ್ದಿರುವುದು ಗೊತ್ತಾಗಿದೆ. ಅಂದಾಜು 3 ರಿಂದ 4ವರ್ಷದ ಗಂಡು ಚಿರತೆಯಾಗಿದ್ದು, ತಪ್ಪಿಸಿಕೊಳ್ಳಲು ಬೋನಿನಲ್ಲಿಯೇ ಗಂಟೆಗೂ ಹೆಚ್ಚು ಕಾಲ ಪರದಾಡಿದೆ. ಇದರಿಂದ ಹಲ್ಲಿನ ಭಾಗದಲ್ಲಿ ರಕ್ತ ಸೋರಿದೆ.

    ರಾತ್ರಿಯೇ ಚಿರತೆಯನ್ನು ಕಾದಿಟ್ಟ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದು, ಬೆಳಗಿನ ವೇಳೆ ಇನ್ನೊಂದು ಚಿರತೆ ಬಂದಿದ್ದನ್ನು ಸ್ಥಳೀಯರು ನೋಡಿದ್ದಾರೆ.ಖಾಸಗಿ ೆಟೋಗ್ರಾರ್, ಡ್ರೋನ್ ಕ್ಯಾಮರಾದ ಮೂಲಕ ಸೆರೆ ಹಿಡಿಯಲೆತ್ನಿಸಿದ್ದಾರೆ. ಈ ಬಗ್ಗೆ ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಮೇಟಿ ಮಾತನಾಡಿ, ಒಂದು ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಇನ್ನೊಂದನ್ನು ಹಿಡಿಯಲು ಬೊನು ಅಳವಡಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts