More

    ಗಂಗಾವತಿ ತಾಲೂಕಿನ ಜಬ್ಬಲಗುಡ್ಡದ ಬೆಟ್ಟದಲ್ಲಿ ಪ್ರಾಗೈತಿಹಾಸಿಕ ವರ್ಣಚಿತ್ರ ಪತ್ತೆ

    ಗಂಗಾವತಿ: ತಾಲೂಕಿನ ಗಡಿಭಾಗ ಜಬ್ಬಲಗುಡ್ಡದ ಬೆಟ್ಟದಲ್ಲಿ ಪ್ರಾಗೈತಿಹಾಸಿಕ ಕಾಲದ ಅಪರೂಪದ ವರ್ಣಚಿತ್ರ ಪತ್ತೆಯಾಗಿದೆ.

    ಬೆಟ್ಟದ ಬಳಿ ನೈಸರ್ಗಿಕವಾಗಿ ರೂಪಿತವಾದ ಕಲ್ಲಾಸರೆಯಲ್ಲಿ ಕಂಡು ಬಂದಿದ್ದು, ಹೆಣ್ಣು ಮತ್ತು ಗಂಡು ಜಿಂಕೆಗಳು ಸಮ್ಮಿಲನದ ಕೆಂಪು ಬಣ್ಣದ ರೇಖಾಚಿತ್ರವಾಗಿದೆ. ಎರಡು ಜೋಡಿಯಂತೆ ನಾಲ್ಕು ಜಿಂಕೆಗಳಿದ್ದು, ಹೆಣ್ಣು ಮತ್ತು ಗಂಡು ಎಂದು ವಿಂಗಡಿಸಲು ಕವಲು ಕೋಡುಗಳನ್ನು ರಚಿಸಲಾಗಿದೆ(ಹೆಣ್ಣಿಗೆ ಕೋಡುಗಳಿಲ್ಲ, ಗಂಡಿಗೆ ಕೋಡುಗಳಿವೆ). ಚಾರಣ ಬಳಗದ ಸದಸ್ಯ ಮಂಜುನಾಥ ಗುಡ್ಲಾನೂರ್, ಚಾರಣಕ್ಕೆ ತೆರಳಿದಾಗ ಕಾಣಿಸಿದ್ದು, ವಿಶಿಷ್ಟವಾಗಿದೆ.

    ಈವರೆಗೆ ವ್ಯಕ್ತಿ, ಆಯುಧಗಳ ಚಿತ್ರಗಳು ಕಂಡಿದ್ದವು. ಜಿಂಕೆಗಳ ಬಗ್ಗೆ ಗೋಚರಿಸಿದ್ದಿಲ್ಲ. ಈ ಬಗ್ಗೆ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಪ್ರತಿಕ್ರಿಯಿಸಿ, ಕ್ರಿಪೂ 1200ರ ಅವಧಿಯಲ್ಲಿ ಕಬ್ಬಿಣದ ಬೃಹತ್ ಶಿಲಾಯುಗದ ಜನ ರಚಿಸಿರುವ ಬಗ್ಗೆ ಉಲ್ಲೇಖವಿದ್ದು, ಕೊಪ್ಪಳದ ಜಿಲ್ಲೆಯ ಏಳು ಗುಡ್ಡಗಳ ಪ್ರದೇಶದಲ್ಲಿ ವರ್ಣಚಿತ್ರಗಳಿವೆ. ಆದಿ ಕಾಲದ ಜನಜೀವನ, ಪ್ರಾಣಿ ಸಂಪತ್ತು ಮತ್ತು ಕಲಾಭಿಜ್ಞತೆ ಅರಿಯಲು ವರ್ಣಚಿತ್ರಗಳು ಸಹಕಾರಿಯಾಗಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts