More

    ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಉತ್ತೇಜನ

    ಗಂಗಾವತಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕ್ರೀಯಾಶೀಲತೆ ರೂಢಿಸಿಕೊಳ್ಳಬೇಕಿದ್ದು, ಶಿಕ್ಷಣ ಸಂಸ್ಥೆಯಲ್ಲಿ ಒದಗಿಸುವ ಶೈಕ್ಷಣಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಬ್ರೇನ್ ಫೀಡ್ ಸಂಸ್ಥೆ ಮುಖ್ಯಸ್ಥ ಹಾಗೂ ಶೈಕ್ಷಣಿಕ ತಜ್ಞ ವಿ.ಕೆ. ಬ್ರಹ್ಮಂ ಸಲಹೆ ನೀಡಿದರು.

    ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದ ಸಮಾರೋಪದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಸೌಲಭ್ಯಗಳನ್ನು ಹೊಂದಿದ ವಿದ್ಯಾನಿಕೇತನ ಸಂಸ್ಥೆ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ ಜತೆಗೆ ಕ್ರೀಡಾ ಚಟುವಟಿಕೆಗಳಿಗೂ ಉತ್ತೇಜನ ನೀಡುತ್ತಿದೆ. ಸಂಪನ್ಮೂಲ ವ್ಯಕ್ತಿಗಳ ಮೂಲಕ ತರಬೇತಿ ನೀಡುತ್ತಿದ್ದು, ಈ ಭಾಗದ ಜನರ ಸೌಭಾಗ್ಯ ಎಂದರು.

    ಸಮುದಾಯ ಆರೋಗ್ಯಾಧಿಕಾರಿ ಡಾ. ವೀರನಾಯ್ಕ ಮಾತನಾಡಿ, ವಿದ್ಯಾನಿಕೇತನ ಸಂಸ್ಥೆ ಗುಣಮಟ್ಟದ ಸೌಲಭ್ಯಗಳ ಜತೆಗೆ ಶಿಸ್ತನ್ನು ಕಲಿಸುತ್ತಿದೆ. ವಿದ್ಯಾರ್ಥಿಗಳ ಆರೋಗ್ಯದತ್ತ ಗಮನಹರಿಸುತ್ತಿದೆ ಎಂದರು.

    ಸಂಸ್ಥೆ ಮುಖ್ಯಸ್ಥ ಸೂರಿಬಾಬು ನೆಕ್ಕಂಟಿ ಮಾತನಾಡಿ, ಪಾಲಕರ ಸಹಕಾರದೊಂದಿಗೆ ಸಂಸ್ಥೆ ಉತ್ತಮವಾಗಿ ಬೆಳೆದಿದ್ದು, ಸಿಬಿಎಸ್‌ಸಿ ಪಠ್ಯಕ್ರಮದ ಶಾಲೆಯ ಎಲ್ಲ ಹಂತದ ಬೆಳವಣಿಗೆಯಲ್ಲೂ ಜತೆಗಿದ್ದಾರೆ ಎಂದರು. ಪ್ರತಿಭಾವಂತ ಮತ್ತು ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    ಹಿರಿಯ ವಕೀಲ ಡಿ.ಎ.ಹಾಲಸಮುದ್ರ, ಉದ್ಯಮಿ ಚೆನ್ನುಪಾಟಿ ಪ್ರಭಾಕರ, ಮುಖಂಡರಾದ ರಮೇಶನಾಯಕ, ಡಾ.ಶ್ರೀನಿವಾಸ ಚೌಧರಿ, ಪ್ರಾಚಾರ್ಯೆ ವಸಂತ ಲಕ್ಷ್ಮೀ, ಉಪ ಪ್ರಾಚಾರ್ಯೆ ಶೀಬಾ, ಎಪಿಎಂಸಿ ನಿವೃತ್ತ ಕಾರ್ಯದರ್ಶಿ ಚಂದ್ರಮೋಹನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts