More

    ಸಾರ್ವತ್ರಿಕ ಚುನಾವಣೆ ಹಿನ್ನೆಲೆ, ಗೃಹರಕ್ಷಕರಿಗೆ ತರಬೇತಿ ಶಿಬಿರ

    ಗಂಗಾವತಿ: ಮುಂಬರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನಗರದ ಕಸಾಪ ಭವನದಲ್ಲಿ ಪೊಲೀಸ್ ಮತ್ತು ಗೃಹರಕ್ಷಕ ಇಲಾಖೆಯಿಂದ ತ್ರಿವಳಿ ತಾಲೂಕಿನ ಗೃಹರಕ್ಷಕರಿಗಾಗಿ ಎರಡು ದಿನದ ತರಬೇತಿ ಶಿಬಿರ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

    ಚುನಾವಣೆ ಪ್ರಚಾರ ಮತ್ತು ಮತದಾನ ಸಂದರ್ಭದಲ್ಲಿ ಗೃಹರಕ್ಷಕ ದಳದ ಕರ್ತವ್ಯ ನಿಷ್ಠೆ, ಪಾರದರ್ಶಕ ಸೇವೆ ಮತ್ತು ಕಾರ್ಯ ಕ್ಷಮತೆಯ ಬಗ್ಗೆ ಮಾಹಿತಿ ನೀಡಲಾಯಿತು. ಎರಡು ದಿನದ ತರಬೇತಿ ಶಿಬಿರದಲ್ಲಿ ಮಾರ್ಗದರ್ಶ ನೀಡಿದ ಗೃಹರಕ್ಷಕ ಇಲಾಖೆ ಜಿಲ್ಲಾ ಬೋಧಕ ಎಚ್.ಯೋಗೇಂದ್ರ ಮಾತನಾಡಿ, ಚುನಾವಣೆ ಒಂದು ಹಬ್ಬ ಇದ್ದಂತೆ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅವಕಾಶವಿದ್ದು, ನಿಷ್ಪಕ್ಷಪಾತ ಮತ್ತು ಪಾರದರ್ಶಕ ಆಡಳಿತ ಮೂಲಕ ಜನರ ಮೆಚ್ಚುಗೆ ಗಳಿಸಬೇಕು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಹಕಾರೊಂದಿಗೆ ಗೃಹರಕ್ಷಕ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಬದ್ಧರಾಗಿದ್ದಾರೆ ಎಂದರು.

    ಡಿವೈಎಸ್ಪಿಗಳಾದ ಎಚ್.ಶೇಖರಪ್ಪ, ಶರಣಬಸಪ್ಪ, ಗೃಹರಕ್ಷಕ ಇಲಾಖೆ ಸಹಾಯಕ ಎಸ್.ವಿ.ರಾತ್ರೀಕರ್, ತಾಲೂಕು ಘಟಕಾಧಿಕಾರಿಗಳಾದ ಎಸ್.ಮೀರಾಸಾಬ್, ಕನಕಗಿರಿಯ ಗೋಪಾಲಶಾಸಿ, ಕಾರಟಗಿಯ ಅಶೋಕ ಬಡಿಗೇರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts