More

    ಜೀವನದಲ್ಲಿ ನೆಮ್ಮದಿ-ಶಾಂತಿ ಅಗತ್ಯ

    ಗಂಗಾವತಿ: ಅಸಹಾಯಕ ಕುಟುಂಬಗಳಿಗೆ ವಾತ್ಸಲ್ಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿದ್ದು, ನಿರ್ಗತಿಕರಿಗೆ ಸಂಸ್ಥೆ ನೆರವಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಬಿ.ಗಣೇಶ ಹೇಳಿದರು.

    ತಾಲೂಕಿನ ಸಿಂಗನಾಳದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ವಾತ್ಸಲ್ಯ ಯೋಜನೆಯಡಿ ನಿರ್ಮಿಸಿರುವ ಮನೆಯನ್ನು ಲಾನುಭವಿ ಹಂಪಮ್ಮ ಅವರಿಗೆ ಶುಕ್ರವಾರ ವಿತರಿಸಿ ಮಾತನಾಡಿದರು.

    ಜನನ, ಜೀವನ, ಮರಣದ ನಡುವೆ ನೆಮ್ಮದಿ ಬದುಕಿಗೆ ಆದ್ಯತೆ ನೀಡಬೇಕಿದೆ. ಸಮಾಜದ ಅಸಹಾಯಕ ಕುಟುಂಬಗಳಿಗೆ ಧರ್ಮಸ್ಥಳ ಸಂಸ್ಥೆ ಮನೆಗಳನ್ನು ನಿರ್ಮಿಸಿ ಕೊಡುತ್ತಿದೆ. ಯೋಜನೆಯಡಿ 17,873 ಕುಟುಂಬಗಳಿಗೆ ಮನೆ, ನೀರು, ಬೆಳಕು, ಔಷಧ, ಆಹಾರ, ಶೌಚಗೃಹ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.

    ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸತ್ಯನಾರಾಯಣ, ಗ್ರಾಪಂ ಅಧ್ಯಕ್ಷೆ ಸರ್ವಮಂಗಳಾ, ಉಪಾಧ್ಯಕ್ಷ ರುದ್ರೇಶ, ಒಕ್ಕೂಟದ ಅಧ್ಯಕ್ಷ ಹುಸೇನಪ್ಪ, ಪ್ರಮುಖರಾದ ರಮೇಶ, ಬಸವರಾಜ, ವಲಯ ಮೇಲ್ವಿಚಾರಕ ಮಂಜುನಾಥ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶಾರದಾ, ಸೇವಾ ಪ್ರತಿನಿಧಿ ಲಕ್ಷ್ಮೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts