More

    ನೇರಪಾವತಿ ಯೋಜನೆಗೆ ಒಳಪಡಿಸಲು ಹಿಂದೇಟು

    ಗಂಗಾವತಿ: ಸೇವೆ ಕಾಯಂ ಮತ್ತು ತ್ಯಾಜ್ಯ ಸಾಗಣೆ ವಾಹನ ಚಾಲಕರನ್ನು ನೇರಪಾವತಿ ಯೋಜನೆಗೆ ಒಳಪಡಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಗತಿಪರ ಪೌರ ಕಾರ್ಮಿಕರ ಸಂಘದ ಸದಸ್ಯರು ನಗರದ ಆಟೋನಗರದಲ್ಲಿ ಗುರುವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

    ಸಂಘದ ರಾಜ್ಯಾಧ್ಯಕ್ಷ ಜೆ.ಭಾರದ್ವಾಜ್ ಮಾತನಾಡಿ, ಚುನಾವಣೆ ನೆಪದಿಂದ ನೇರಪಾವತಿ ಪೌರಕಾರ್ಮಿಕರ ಕಾಯಂ ಮತ್ತು ತ್ಯಾಜ್ಯ ಸಾಗಿಸುವ ವಾಹನ ಚಾಲಕರನ್ನು ನೇರಪಾವತಿಗೆ ಒಳಪಡಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಪೌರಕಾರ್ಮಿಕರ ನೇರನೇಮಕಾತಿಗೆ ವಯೋಮಿತಿ 55 ವರ್ಷ ನಿಗದಿಪಡಿಸಿರುವುದು ಖಂಡನೀಯ. ಬೆಳಗಾವಿ ಅಧಿವೇಶನದಲ್ಲಿ ಭರವಸೆ ನೀಡಿದ್ದ ಸರ್ಕಾರ, ಏಕಾಏಕಿ ನಿಲವು ಬದಲಿಸುತ್ತಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ. 11,133 ಪೌರಕಾರ್ಮಿಕರನು ರೋಸ್ಟರ್ ಪದ್ಧತಿ ಪ್ರಕಾರ ನೇರಪಾವತಿಯಿಂದ ನೇರನೇಮಕಾತಿ ಮಾಡಲು ಮುಂದಾಗಿದ್ದು, ಉಳಿದ ಕಾರ್ಮಿಕರಿಗೆ ಅನ್ಯಾಯವಾಗಲಿದೆ. ಎಲ್ಲ ಕಾರ್ಮಿಕರಿಗೂ ನ್ಯಾಯ ಸಿಗುವವರೆಗೆ ಹೋರಾಟ ನಿರಂತರವಾಗಲಿದೆ ಎಂದರು.

    ಸಿಪಿಐ(ಎಂಎಲ್)ಲಿಬರೇಷನ್ ಜಿಲ್ಲಾ ಕಾರ್ಯದರ್ಶಿ ವಿಜಯ ದೊರೈರಾಜು, ಎಐಸಿಸಿಟಿಯು ಜಿಲ್ಲಾಧ್ಯಕ್ಷ ಪರಶುರಾಮ್, ವಿವಿಧ ಘಟಕದ ಪದಾಧಿಕಾರಿಗಳಾದ ಗಿಡ್ಡಪ್ಪ, ಬಾಬರ್, ರಮೇಶ, ಮಾಯಮ್ಮ, ನಿಂಗಮ್ಮ, ಪಾರ್ವತೆಮ್ಮ, ದುರುಗಪ್ಪ ಕಾರಟಗಿ, ಗಂಗಪ್ಪ, ಶೇಖರಪ್ಪ ಕಾರಟಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts