More

    ಚಾಲಕರ ಕುಂದುಕೊರತೆ ಪರಿಹಾರಕ್ಕೆ ಶ್ರಮ

    ಗಂಗಾವತಿ: ಆರ್‌ಟಿಒ ಮತ್ತು ಪೊಲೀಸರ ಕಿರುಕುಳ ತಪ್ಪಿಸಲು ಒಕ್ಕೂಟ ಪರಿಣಾಮಕಾರಿ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ ಜಿ.ನಾರಾಯಣಸ್ವಾಮಿ ಹೇಳಿದರು.

    ನಗರದ ಶ್ರೀ ಕೃಷ್ಣದೇವರಾಯ ಕಲಾಭವನದಲ್ಲಿ ಕರ್ನಾಟಕ ಚಾಲಕರ ಒಕ್ಕೂಟ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು. ಎಲ್ಲ ಜಿಲ್ಲೆಗಳಲ್ಲಿ ಒಕ್ಕೂಟ ಕರ್ತವ್ಯ ನಿರ್ವಹಿಸುತ್ತಿದ್ದು, ಚಾಲಕರ ಕುಂದುಕೊರತೆಗಳ ನಿವಾರಣೆಗೆ ಶ್ರಮಿಸುತ್ತಿದೆ. ಮನೆ, ನಿವೇಶನ ಒದಗಿಸುವುದರ ಜತೆಗೆ ರಾಜ್ಯ ಸರ್ಕಾರ ಜಾರಿಗೆ ತರುವ ಚಾಲಕರ ವಿರೋಧಿ ನೀತಿಗಳ ವಿರುದ್ಧ ಹೋರಾಟ ಹಮ್ಮಿಕೊಳ್ಳುತ್ತಿದೆ. ಆರ್‌ಟಿಒ, ಪೊಲೀಸರ ಕಿರುಕುಳ ಹೆಚ್ಚಾದರೆ ಸಂಘದ ಗಮನಕ್ಕೆ ತಂದರೆ ಪ್ರತಿಭಟನೆಗೆ ವೇದಿಕೆ ಒದಗಿಸಲಾಗುವುದು ಎಂದರು.

    ಜಿಲ್ಲಾಧ್ಯಕ್ಷ ಶಿವಕುಮಾರ ಗುಂಡೂರು ಮಾತನಾಡಿ, ಒಕ್ಕೂಟ ಬಲಪಡಿಸಿದಾಗ ಹಕ್ಕುಗಳನ್ನು ಪಡೆಯಲು ಸಾಧ್ಯವಿದ್ದು, ಎಲ್ಲ ತಾಲೂಕುಗಳಲ್ಲಿ ಒಕ್ಕೂಟ ಅಸ್ತಿತ್ವಕ್ಕೆ ತರಬೇಕು. ಸಂಘಟನಾತ್ಮಕವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

    ಸಂಘದ ಕಾರ್ಯಾಧ್ಯಕ್ಷ ಎಂ.ಡಿ.ಮುಸ್ತ್ಾ, ಪದಾಧಿಕಾರಿಗಳಾದ ಸುಭಾಷ್ ಪಾಟೀಲ್, ಗುರುಮೂರ್ತಿ, ಮಸ್ತಾನ್, ನವೀನ್, ರಾಜಕುಮಾರ, ಆನಂದ, ಮಹಿಳಾ ಘಟಕದ ಭಾರತಿ ಕೃಷ್ಣ, ಸುಗಂಧಿ ಗಣೇಶ, ಸೌಭಾಗ್ಯ, ತಾಲೂಕು ಘಟಕದ ಅಧ್ಯಕ್ಷ ಕನಕಪ್ಪ ಕಲಗೇರಿ ಇತರರಿದ್ದರು. 15 ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts