More

    ಡಾ.ಅಂಬೇಡ್ಕರ್ ಕಂಚಿನ ಮೂರ್ತಿ ಅನಾವರಣ

    ಗಂಗಾವತಿ: ಮೂರು ದಶಕಗಳ ನಂತರ ನಗರದ ಕೋರ್ಟ್ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕಂಚಿನ ಮೂರ್ತಿಯನ್ನು ಸೋಮವಾರ ರಾತ್ರಿ ಅನಾವರಣಗೊಳಿಸಲಾಯಿತು.

    ಮೂರ್ತಿ ಬೇಡಿಕೆ 1990ರಿಂದ ಇದ್ದರೂ, ತಾಂತ್ರಿಕ ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ನಗರಸಭೆಯಿಂದ 15 ಲಕ್ಷ ರೂ. ಮಂಜೂರಾದರೂ, ವೃತ್ತದ ವ್ಯಾಸ ದೊಡ್ಡದಾಗಿದೆ ಎಂಬ ಕಾರಣಕ್ಕಾಗಿ ವಕೀಲರೊಬ್ಬರು ಕೋರ್ಟ್ ಮೊರೆ ಹೋಗಿದ್ದರಿಂದ ವಿಳಂಬವಾಗಿತ್ತು. ದಲಿತಪರ ಸಂಘಟನೆಗಳ ಮುಖಂಡರ ಹೋರಾಟದ ಲದಿಂದ ಕಂಚಿನ ಮೂರ್ತಿ ತಯಾರಾಗಿತ್ತು. ಆದರೆ, ಉಪ ಪ್ರಧಾನಿ ಬಾಬು ಜಗಜೀವನರಾಮ್ ಮೂರ್ತಿ ಪ್ರತಿಷ್ಠಾಪಿಸಿದ ನಂತರ ಎರಡನ್ನೂ ಒಂದೇ ಸಲ ಅನಾವರಣಗೊಳಿಸುವಂತೆ ಒಂದು ಗುಂಪು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿತ್ತು. ಎರಡು ಗುಂಪಿನ ನಡುವೆ ಸುದೀರ್ಘ ರಾಜಿ ಸಂಧಾನ ನಡೆಸಿದ ನಂತರ ಅನಾವರಣಕ್ಕೆ ಒಪ್ಪಿಗೆ ದೊರೆತಿತ್ತು. ಸೋಮವಾರ ಸಂಜೆ ತಡೆಯಾಜ್ಞೆ ತೆರವುಗೊಳಿಸಿರುವ ಮಾಹಿತಿ ದೊರೆಯುತ್ತಿದ್ದಂತೆ ಶಾಸಕರಾದ ಪರಣ್ಣ ಮುನವಳ್ಳಿ ಮತ್ತು ಬಸವರಾಜ ದಢೇಸೂಗೂರು ಮೂರ್ತಿಗೆ ಹಾಲಿನ ಅಭಿಷೇಕ, ಬೃಹತ್ ಹಾರ ಹಾಕಿ ದೀಪ ಬೆಳಗುವ ಮೂಲಕ ಅನಾವರಣಗೊಳಿಸಿದರು. ಸಮಾನತೆಯ ಹಕ್ಕು ನೀಡಿದ ಡಾ.ಅಂಬೇಡ್ಕರ್ ಪ್ರತಿಯೊಬ್ಬರಿಗೂ ದೇವರಾಗಿದ್ದು, ಸಣ್ಣಪುಟ್ಟ ಮನಸ್ತಾಪ ಬದಿಗಿಟ್ಟು ಸಾಮರಸ್ಯದಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

    ನಯೋಪ್ರಾ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಠಿ, ಬಿಜೆಪಿ ಮುಖಂಡರಾದ ಸಂತೋಷ ಕೆಲೋಜಿ, ಜೋಗದ ಹನುಮಂತಪ್ಪ ನಾಯಕ, ದಲಿತಪರ ಸಂಘಟನೆ ಮುಖಂಡರಾದ ಮರಿಯಪ್ಪ ಕುಂಟೋಜಿ, ಸಿ.ಕೆ.ಮರಿಸ್ವಾಮಿ, ಹುಸೇನಪ್ಪ ಸ್ವಾಮಿ ಮಾದಿಗ, ಬಸವರಾಜ ಛಲವಾದಿ, ಜೋಗದ ನಾರಾಯಣಪ್ಪ ನಾಯಕ, ಶಿವಪ್ಪ ಮಾದಿಗ, ಸಂಗಮೇಶ ಅಯೋಧ್ಯಾ, ದೊಡ್ಡ ಭೋಜಪ್ಪ, ಹುಸೇನಪ್ಪ ಹಂಚಿನಾಳ, ಅಮರಜ್ಯೋತಿ ವೆಂಕಟೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts