More

    ಆತ್ಮವಿಶ್ವಾಸದಿಂದ ನಿರೀಕ್ಷಿತ ಗುರಿ: ವಿಎಸ್‌ಕೆ ವಿವಿ ವಿದ್ಯಾವಿಷಯಕ ಪರಿಷತ್ ಸದಸ್ಯ ಶಿವಾನಂದ ಮೇಟಿ ಹೇಳಿಕೆ

    ಗಂಗಾವತಿ: ಆತ್ಮವಿಶ್ವಾಸದಿಂದ ನಿರೀಕ್ಷಿತ ಗುರಿ ತಲುಪಬೇಕಿದ್ದು, ರೈತರು ಮತ್ತು ದೇಶದ ಸೇವೆಗೆ ವಿದ್ಯಾರ್ಥಿಗಳು ಶ್ರಮಿಸಬೇಕಿದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ವಿದ್ಯಾವಿಷಯಕ ಪರಿಷತ್ ಸದಸ್ಯ ಶಿವಾನಂದ ಮೇಟಿ ಹೇಳಿದರು.

    ನಗರದ ಸರ್ಕಾರಿ ಕೃಷಿ ಕಾಲೇಜು ಆವರಣದಲ್ಲಿ ರಾಯಚೂರು ಕೃವಿ ವಿವಿ, ಕೃಷಿ ಕಾಲೇಜು, ಕೃಷಿ ಸಂಶೋಧನ ಕೇಂದ್ರ ಮತ್ತು ಕೃಷಿವಿಜ್ಞಾನ ಕೇಂದ್ರ ಆಶ್ರಯದಲ್ಲಿ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿನಿಲಯದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಹಿರಿದಾದ ಕನಸು ಹೊಂದಿರಬೇಕಿದ್ದು, ಮಾನವೀಯತೆಯತ್ತ ಗಮನಹರಿಸಬೇಕು. ಅಧ್ಯಯನ ಮತ್ತು ಕ್ರಿಯಾಶೀಲತೆ ಮೂಲಕ ಕಾಲೇಜು ಹೆಸರು ಉಳಿಸುವಂತೆ ಸಲಹೆ ನೀಡಿದರು.

    ರಾಯಚೂರು ಕೃಷಿ ವಿವಿ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜೆ.ಪಾಟೀಲ್ ಮಾತನಾಡಿ, ದೊರೆತ ಸೌಲಭ್ಯಗಳೊಂದಿಗೆ ಉತ್ತಮ ಸಾಧನೆ ಮಾಡಬೇಕಿದ್ದು, ಪಾಲಕರ ಶ್ರಮ ಸಾರ್ಥಕ ಪಡಿಸುವಂತೆ ಸಲಹೆ ನೀಡಿದರು. ರಾಯಚೂರು ವಿವಿ ಡೀನ್ ಡಾ.ಎಸ್.ಬಿ.ಗೌಡಪ್ಪ, ಕಾಲೇಜು ವಿಶೇಷಾಧಿಕಾರಿ ಡಾ.ಬಿ.ಜಿ.ಮಸ್ತಾನರೆಡ್ಡಿ, ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್, ತಜ್ಞರಾದ ಡಾ.ಜೆ.ವಿಶ್ವನಾಥ, ಡಾ.ಎಂ.ವಿ.ರವಿ, ಡಿ.ಶ್ರೀಧರ್, ಡಾ.ಸುಜಯ್ ಹುರಳಿ, ಡಾ. ಜ್ಯೋತಿ, ಡಾ.ಎಸ್.ಬಿ.ಗೌಡರ್, ಪ್ರಾಧ್ಯಾಪಕರಾದ ಡಾ. ವಾಸುದೇವ, ಡಾ.ಬದ್ರಿಪ್ರಸಾದ, ಡಾ.ಮಹಾಂತೇಶ ಡಾ.ಕಿರಣಕುಮಾರ, ಡಾ.ಬಾಳೇಶ್, ಡಾ.ಶರಣಪ್ಪ ಕುರಿ, ಪವನಕುಮಾರ ಗುಂಡೂರು, ದೈಹಿಕ ಉಪನ್ಯಾಸಕ ಸುದರ್ಶನರಾವ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts