More

    ವ್ಯಕ್ತಿತ್ವ ವಿಕಸನಕ್ಕೆ ಎಸ್ಸೆಸ್ಸೆಲ್ಸಿ ತರಬೇತಿ ಕಾರ್ಯಾಗಾರ ಪೂರಕ

    ಗಂಗಾವತಿ: ಶಿಕ್ಷಣ ಮತ್ತು ದಾಸೋಹದಿಂದ ಭವಿಷ್ಯ ರೂಪಿಸಬಹುದಾಗಿದ್ದು, ಉಚಿತ ತರಬೇತಿ ಕೇಂದ್ರಗಳು ಬಡವರ ಮಕ್ಕಳಿಗೆ ಅನುಕೂಲವಾಗಿವೆ ಎಂದು ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಹಿರಿಯ ವೈದ್ಯ ಜಿ.ಚಂದ್ರಪ್ಪ ಹೇಳಿದರು.

    ನಗರದ ಶ್ರೀ ಚನ್ನಮಲ್ಲಿಕಾರ್ಜುನ ದೇವಾಲಯ ಆವರಣದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಶ್ರೀ ಗುರುಚನ್ನಬಸವಸ್ವಾಮಿ ಉಚಿತ ಕೋಚಿಂಗ್ ಸೆಂಟರ್ ಆಯೋಜಿಸಿರುವ ಉಚಿತ ತರಬೇತಿ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

    ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 21,579 ಅಭ್ಯರ್ಥಿಗಳು

    ಉಚಿತ ತರಬೇತಿ ಕಾರ್ಯಾಗಾರ

    ವ್ಯಕ್ತಿತ್ವ ವಿಕಸನಕ್ಕೆ ಎಸ್ಸೆಸ್ಸೆಲ್ಸಿ ಪೂರಕವಾಗಿದ್ದು, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡಬಾರದು. ಇತ್ತೀಚಿನ ದಿನಗಳಲ್ಲಿ ಬಾಲಕಿಯರೇ ಓದಿನತ್ತ ಹೆಚ್ಚು ಗಮನಹರಿಸುತ್ತಿದ್ದು, ಬಾಲಕರ ಬಗ್ಗೆ ಪಾಲಕರು ಗಂಭೀರವಾಗಿ ಪರಿಗಣಿಸಬೇಕು. ಉಚಿತ ತರಬೇತಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಕಲಿಕಾ ಸಾಮಗ್ರಿ ವಿತರಣೆ

    ಸಂಪನ್ಮೂಲ ವ್ಯಕ್ತಿ ಸಿದ್ದಲಿಂಗೇಶ ಪೂಲಭಾವಿ ಮಾತನಾಡಿ, 16 ವರ್ಷಗಳಿಂದ ಉಚಿತ ತರಬೇತಿ ನೀಡಲಾಗುತ್ತಿದ್ದು, ಹಲವು ವಿದ್ಯಾರ್ಥಿಗಳು ವಿವಿಧ ಉದ್ಯೋಗದಲ್ಲಿದ್ದಾರೆ. ತರಬೇತಿಯೊಂದಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಧ ಸಂಘಟನೆ ನೆರವಿನೊಂದಿಗೆ ಕಲಿಕಾ ಸಾಮಗ್ರಿ ವಿತರಿಸಲಾಗುತ್ತಿದೆ ಎಂದರು.

    ಶ್ರೀ ಚನ್ನಬಸವಸ್ವಾಮಿ ದೇವಾಲಯ ಟ್ರಸ್ಟ್ ಧರ್ಮದರ್ಶಿಗಳಾದ ಕೆ.ಚನ್ನಬಸಯ್ಯಸ್ವಾಮಿ, ಪ್ರೊ.ಚಂದ್ರೇಗೌಡ ಪೊ.ಪಾಟೀಲ್, ಸಂಯೋಜಕ ಶರಣಪ್ಪ ಬೂದಗುಂಪಾ, ಶಿಕ್ಷಕರಾದ ಆರ್.ಬಿ.ತಿಮ್ಮಾಪುರ, ಉಲ್ಲಾಸರಡ್ಡಿ, ಶರಣೇಗೌಡ, ಅಜಯ್ ಇತರರಿದ್ದರು. ಶಿಬಿರದಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪಾಲಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts