More

    ಪುಸ್ತಕಗಳು ಮನುಷ್ಯನ ಜೀವನಕ್ಕೆ ಮಾರ್ಗದರ್ಶಿ: ಸಂಶೋಧಕ, ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್ ಅಭಿಮತ

    ಗಂಗಾವತಿ: ಬದುಕಿನ ಅನುಭವಗಳನ್ನು ಒಳಗೊಂಡ ಪುಸ್ತಕಗಳು ಜ್ಞಾನವಾಹಿನಿಗಳಾಗಿದ್ದು, ಮನುಷ್ಯ ಜೀವನಕ್ಕೆ ಮಾರ್ಗದರ್ಶಿಯಾಗಿವೆ ಎಂದು ಸಂಶೋಧಕ, ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್ ಹೇಳಿದರು.

    ನಗರದ ಶ್ರೀ ಚನ್ನಮಲ್ಲಿಕಾರ್ಜುನ ಪುರಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅನುಭವಗಳಿಗೆ ಅಕ್ಷರ ರೂಪ ನೀಡಿದಾಗ ಮೌಲ್ಯಯುತ ಕೃತಿ ಹೊರಬರಲು ಸಾಧ್ಯವಿದ್ದು, ಶರಣರ ವಚನಗಳ ಸಾರವನ್ನು ಸರಳ ಮತ್ತು ಸುಂದರವಾಗಿ ಹೆಬ್ಬಾಳ ಶ್ರೀಗಳು ಅಕ್ಷರ ರೂಪಕ್ಕಿಳಿಸಿದ್ದಾರೆ ಎಂದರು.

    ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಮಾತನಾಡಿ, ಶರಣರ ವಚನಗಳನ್ನಾಧರಿಸಿ ‘ನಾನಿದ್ದು ಲವೇನು’ ಪುಸ್ತಕ ರಚಿಸಿದ್ದು, ಬದುಕಿನ ಬವಣೆ ನಿವಾರಿಸಲು ಸಹಕಾರಿಯಾಗಲಿದೆ ಎಂದರು. ನಾಗಭೂಷಣ ಶಿವಾಚಾರ್ಯರ ನಾನಿದ್ದು ಲವೇನು, ಸಾಲಗುಂದಿ ವೀರಭದ್ರಪ್ಪ ರಚಿತ ಶ್ರೀ ಚನ್ನಬಸವಸ್ವಾಮಿಗಳ ಪ್ರಾರ್ಥನೆ ಮತ್ತು ಮಂಗಳಾರತಿ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

    ಗ್ರಂಥ ದಾನಿಗಳಾದ ಪಾರ್ವತಮ್ಮ ರಾಜಶೇಖರ್ ಹೊಸ್ಕೇರಿ ದಂಪತಿಯನ್ನು ಸನ್ಮಾನಿಸಲಾಯಿತು. ತಲೇಖಾನ ಹಿರೇಮಠದ ವೀರಭದ್ರಯ್ಯ ಸ್ವಾಮೀಜಿ, ಮಠದ ಟ್ರಸ್ಟಿಗಳಾದ ಸಿದ್ದನಗೌಡ, ಚಂದ್ರೇಗೌಡ ಪೊ.ಪಾಟೀಲ್, ಶಿವಪ್ರಕಾಶ ಅಕ್ಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts