More

    ಕೊಟ್ಟೂರು ಬಸವೇಶ್ವರ ರಥೋತ್ಸವ ಅದ್ದೂರಿ

    ಗಂಗಾವತಿ: ನಗರದ ಆರಾಧ್ಯ ದೈವ ಕೊಟ್ಟೂರು ಬಸವೇಶ್ವರ ದೇವಾಲಯದ ಜಾತ್ರಾಮಹೋತ್ಸವ ನಿಮಿತ್ತ ಮಹಾರಥೋತ್ಸವ ಗುರುವಾರ ಸಂಜೆ ವಿಜೃಂಭಣೆಯಿಂದ ಜರುಗಿತು.

    ಜಾತ್ರೆ ಹಿನ್ನೆಲೆಯಲ್ಲಿ ಮಾ.11ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಕಂಕಣ ಕಟ್ಟುವುದು, ಪಲ್ಲಕ್ಕಿ, ಹೂವಿನ ಪಲ್ಲಕ್ಕಿ ಉತ್ಸವ ನಡೆದವು. ರಥೋತ್ಸವ ಹಿನ್ನೆಲೆಯಲ್ಲಿ ದೇವಾಲಯದ ಶಿಲಾಮಂಟಪವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಮೂರ್ತಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಪಟ ಏರಿಸುವುದು, ಮಹಾಮಂಗಳಾರತಿ, ಮಡಿ ತೇರು ಮತ್ತು ಪ್ರಸಾದ ವಿತರಣೆ ಜರುಗಿತು. ಸಂಜೆ ಸರ್ವಾಂಲಕೃತ ರಥೋತ್ಸವನ್ನು ದೇವಾಲಯದಿಂದ ಕಲ್ಮಠದ ಬಳಿಯ ಪಾದಗಟ್ಟೆವರೆಗೂ ಅದ್ದೂರಿಯಾಗಿ ನೆರವೇರಿಸಲಾಯಿತು.

    ದೇವಾಲಯಕ್ಕೆ 14ನೇ ಶತಮಾನದ ಹಿನ್ನೆಲೆ ಇದೆ. ಶತಮಾನಗಳಿಂದಲೂ ಜಾತ್ರಾಮಹೋತ್ಸವ ನಡೆಯುತ್ತಿದೆ. ಜಾತ್ರೆ ನಿಮಿತ್ತ ದೇವಾಲಯದ ಆದಾಯಕ್ಕಾಗಿ ವರ್ಷಕ್ಕೊಮ್ಮೆ ವಾರದ ಸಂತೆ ದೇವಾಲಯದ ಮುಂದೆ ನಡೆಯುತ್ತಿದ್ದು, ಜಾಗದ ಕೊರತೆಯಿಂದ ಕೆಲವರ್ಷಗಳ ಹಿಂದೆ ಸ್ಥಗಿತಗೊಂಡಿದೆ.

    ದೇವಾಲಯ ಸಮಿತಿ ಪದಾಧಿಕಾರಿಗಳಾದ ಗುಂಜಳ್ಳಿ ರಾಜಶೇಖರ್, ಅರಳಿ ಶೇಖರಪ್ಪ, ಹೊಸಳ್ಳಿ ಶಂಕರಗೌಡ, ಬೆನಕನಾಳ ಬಸವರಾಜ, ಬಿ.ಜಗದೀಶಪ್ಪ, ಅಕ್ಕಿ ಶಿವಪ್ರಕಾಶ, ಗಾಳಿ ರುದ್ರಪ್ಪ, ಸೋಮನಾಥ ಪಟ್ಟಣಶೆಟ್ಟಿ, ವಿರೂಪಾಕ್ಷಗೌಡ ನಾಯಕ, ಪಂಪಣ್ಣನಾಯಕ, ಬಳ್ಳಾರಿ ರಾಮಣ್ಣನಾಯಕ ಸೇರಿ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts