More

    ಅಂಜನಾದ್ರಿ ಬೆಟ್ಟದ ಹುಂಡಿ ಹಣ ಎಣಿಕೆ; 21.44 ಲಕ್ಷ ರೂ. ಸಂಗ್ರಹ

    ಗಂಗಾವತಿ: ತಾಲೂಕಿನ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಹುಂಡಿ ಹಣ ಎಣಿಕೆ ಮಾಡಿದ್ದು, 21.44 ಲಕ್ಷ ರೂ. ಸಂಗ್ರಹವಾಗಿದೆ. ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯದ ಹುಂಡಿಯನ್ನು ಪ್ರತಿ ತಿಂಗಳು ತೆರೆಯಲಾಗುತ್ತದೆ. ಕಂದಾಯ, ಪೊಲೀಸ್,ಬ್ಯಾಂಕ್ ಮತ್ತು ಭಕ್ತರ ಸಹಕಾರದೊಂದಿಗೆ ಹುಂಡಿ ಹಣ ಎಣಿಸಲಾಗಿದ್ದು, 36 ದಿನಗಳಲ್ಲಿ 21,44 ಲಕ್ಷ ರೂ. ಸಂಗ್ರಹವಾಗಿದೆ. ಇದರೊಂದಿಗೆ 100 ಗ್ರಾಂ ಮೌಲ್ಯದ ಬೆಳ್ಳಿ ಲಿಂಗ, ತೊಟ್ಟಿಲು ಮತ್ತು ಆಂಜನೇಯ ಮೂರ್ತಿಗಳು ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಬರೆದ ಭಕ್ತರ 5 ಪತ್ರಗಳು ದೊರೆತಿದ್ದು, ಸರ್ಕಾರದ ಆದೇಶದಂತೆ ಯಾವುದನ್ನೂ ಬಹಿರಂಗಪಡಿಸಿಲ್ಲ. ಚಿರತೆ ಹಾವಳಿ ಕಾರಣ ದೇವಾಲಯದ ದರ್ಶನ ಪಡೆಯುವ ಅವಧಿ ಬದಲಿಸಿದ್ದು, ಬೆಳಗ್ಗೆ 8 ರಿಂದ ಮಧ್ಯಾಹ್ನ 3ರವರೆಗೆ ಸೀಮಿತಗೊಳಿಸಲಾಗಿದೆ.

    ಗ್ರೇಡ್-2 ತಹಸೀಲ್ದಾರ್ ವಿ.ಎಚ್. ಹೊರಪೇಟಿ ಮಾತನಾಡಿ, ಸಂಗ್ರಹವಾದ ಹಣವನ್ನು ಸಣಾಪುರದ ಪಿಕೆಜಿ ಬ್ಯಾಂಕ್‌ನಲ್ಲಿ ಜಮೆ ಮಾಡಲಾಗಿದ್ದು, ಭಕ್ತರು ಮತ್ತು ಪ್ರವಾಸಿಗರಿಗೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ ಎಂದರು. ಶಿರಸ್ತೇದಾರರಾದ ಅನಂತ ಜೋಶಿ, ರವಿಕುಮಾರ ನಾಯಕ್ವಾಡಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ, ಶರಣಮ್ಮ, ಜೆ.ಎನ್. ಶ್ರೀಕಂಠ, ಬ್ಯಾಂಕ್ ಸಿಬ್ಬಂದಿ ರಾಜಶೇಖರ್, ಸುನೀಲ್ ಮತ್ತು ದೇವಾಲಯ ವ್ಯವಸ್ಥಾಪಕ ವೆಂಕಟೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts