More

    ಅಂಜನಾದ್ರಿಯಲ್ಲಿ ಕಾಂಕ್ರೀಟ್ ಕಟ್ಟಡಗಳಿಗೆ ಅವಕಾಶ ನೀಡದಿರಿ: ಆನೆಗೊಂದಿ ರಾಜವಂಶಸ್ಥ ರಾಜಾ ಶ್ರೀಕೃಷ್ಣದೇವರಾಯ ಒತ್ತಾಯ

    ಗಂಗಾವತಿ: ಪಾರಂಪರಿಕ ರೀತಿಯಲ್ಲಿ ಅಂಜನಾದ್ರಿ ಪ್ರದೇಶವನ್ನು ಸರ್ಕಾರ ಅಭಿವೃದ್ಧಿಪಡಿಸಬೇಕು ಎಂದು ಆನೆಗೊಂದಿ ರಾಜವಂಶಸ್ಥ ರಾಜಾ ಶ್ರೀಕೃಷ್ಣದೇವರಾಯ ಒತ್ತಾಯಿಸಿದ್ದಾರೆ.

    ಆನೆಗೊಂದಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಂಜನಾದ್ರಿ ಬೆಟ್ಟಕ್ಕೆ ರಾಮಾಯಣ ಕಾಲದ ಹಿನ್ನೆಲೆಯಿದ್ದು, ಸರ್ಕಾರ ಬಿಡುಗಡೆಗೊಳಿಸಿರುವ ಅನುದಾನ ಸಮರ್ಪಕ ಬಳಕೆ ಆಗಬೇಕು. ಹಳೆಯ ದೇವಾಲಯಗಳ ಮಾದರಿಯಲ್ಲಿ ಅಭಿವೃದ್ಧಿ ಕೈಗೊಳ್ಳಬೇಕಿದ್ದು, ಕಾಂಕ್ರಿಟ್ ಕಟ್ಟಡಗಳಿಗೆ ಅವಕಾಶ ನೀಡಬಾರದು. ಕಿಷ್ಕಿಂಧಾ ಕ್ಷೇತ್ರದಲ್ಲಿ ಅನುದಾನ ಬಳಸಿಕೊಳ್ಳುವ ಬಗ್ಗೆ ಸರ್ಕಾರ ಕ್ರಿಯಾಯೋಜನೆ ರೂಪಿಸಿದ್ದು, ಥೀಮ್‌ಪಾರ್ಕ್, ರೋಪ್‌ವೇ, ಸ್ನಾನಘಟ್ಟ, ವಹಿವಾಟು ಮಳಿಗೆ ನಿರ್ಮಿಸಲು ನಿರ್ಧರಿಸಿದೆ. ಅಭಿವೃದ್ಧಿ ಸ್ವಾಗತಾರ್ಹವಾಗಿ. ರಾಮಾಯಣ ಮತ್ತು ಮಹಾಭಾರತ ನಡೆದಿರುವ ಬಗ್ಗೆ ಹಲವು ಕುರಹುಗಳಿದ್ದು, ಸ್ಮಾರಕಗಳು, ಪರಿಸರಕ್ಕೆ ಧಕ್ಕೆಯಾಗುವ ಯಾವುದೇ ಕಾಮಗಾರಿ ಕೈಗೊಳ್ಳಬಾರದು. ಸ್ಥಳೀಯರ ಅಭಿಪ್ರಾಯ ಪಡೆದು ನೀಲಿನಕ್ಷೆ ಸಿದ್ಧಪಡಿಸಲು ಸರ್ಕಾರ ಗಮನಹರಿಸಬೇಕು. ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸುವ ಉದ್ದೇಶವಿದ್ದಲ್ಲಿ, ಅಂಜನಾದ್ರಿ ವ್ಯಾಪ್ತಿ ಬಿಟ್ಟು, ಆನೆಗೊಂದಿ, ಸಂಗಾಪುರ, ಕಡೆಬಾಗಿಲು, ಬಸವನದುರ್ಗ ಬಳಿ ಕಾಮಗಾರಿ ನಡೆಸಲಿ ಎಂದರು.

    ಕಿಷ್ಕಿಂಧಾ ಪ್ರದೇಶವಾದ ಹಂಪಿ, ಆನೆಗೊಂದಿ, ಪಂಪಾಸರೋವರ, ಅಂಜನಾದ್ರಿ, ದುರ್ಗಾದೇವಿ ಬೆಟ್ಟದಲ್ಲಿ ಸಿಗುವ ಶಾಂತಿ, ನೆಮ್ಮದಿ ಮತ್ತೆಲ್ಲೂ ಸಿಗಲ್ಲ. ಅಂಜನಾದ್ರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸಲು ವಿರೋಧವಿದೆ. ಅಭಿವೃದ್ಧಿ ಸಂದರ್ಭದಲ್ಲಿ ಸ್ಥಳೀಯರು ಕೃಷಿ ಭೂಮಿ ಕಳೆದುಕೊಳ್ಳುತ್ತಿದ್ದು, ಹೆಚ್ಚಿನ ಹುದ್ದೆಗಳು ಸಂತ್ರಸ್ತರಿಗೆ ನೀಡಬೇಕು. ಪರಂಪರೆ ಮತ್ತು ದೇಸಿ ವಾಸ್ತುಶಿಲ್ಪ ರೂಪದಲ್ಲಿ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts