More

    ಮಕ್ಕಳ ಹಕ್ಕುಗಳ ಸಮರ್ಪಕ ಅನುಷ್ಠಾನ ಅಗತ್ಯ

    ಗಂಗಾವತಿ: ಮಕ್ಕಳ ಹಕ್ಕುಗಳನ್ನು ಸಮರ್ಪಕ ಅನುಷ್ಠಾನಗೊಳಿಸಬೇಕಿದ್ದು, ಉಜ್ವಲ ಭವಿಷ್ಯಕ್ಕೆ ಮಕ್ಕಳಿಗೆ ಹಕ್ಕುಗಳ ಬಗ್ಗೆ ಮಾಹಿತಿ ನೀಡಬೇಕಿದೆ ಎಂದು ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಹೇಳಿದರು.

    ನಗರದ ನೀಲಕಂಠೇಶ್ವರ ವೃತ್ತದ ಬಳಿಯ ಶಾಸಕರ ಮಾದರಿ ಬಾಲಕಿಯರ ಸ.ಹಿ.ಪ್ರಾ.ಶಾಲೆಯಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಮಕ್ಕಳಿಗಾಗಿ ಕಾನೂನಿನಲ್ಲಿ ಹಲವು ಹಕ್ಕುಗಳಿದ್ದು, ಶಿಕ್ಷಕರು ತಿಳಿಸುವ ಕೆಲಸ ಮಾಡಬೇಕಿದೆ. ಹಕ್ಕುಗಳ ಪಾಲನೆಗಾಗಿ ಪ್ರತಿ ಶಾಲೆಗಳಲ್ಲಿ ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಭೆ ಆಯೋಜಿಸುವ ಅಗತ್ಯವಿದೆ ಎಂದರು.

    ಬಿಇಒ ವೆಂಕಟೇಶ ರಾಮಚಂದ್ರಪ್ಪ ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗೆ ಮೂಲ ಸೌಲಭ್ಯ ಒದಗಿಸಲಾಗುತ್ತಿದ್ದು, ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಮಕ್ಕಳ ಹಕ್ಕುಗಳ ಬಗ್ಗೆ ವಕೀಲರಾದ ಶಿವಕುಮಾರ, ನಾಗರಾಜ್ ಗುತ್ತೇದಾರ್, ಸೌಭಾಗ್ಯಲಕ್ಷ್ಮೀ, ಶರಣಬಸವ ತಿಳಿಸಿಕೊಟ್ಟರು. ಸಿಡಿಪಿಒ ಯೋಜನಾಧಿಕಾರಿ ಪ್ರವೀಣಕುಮಾರ ಹೇರೂರು, ಮೇಲ್ವಿಚಾರಕರಾದ ಶರಣಮ್ಮ ನಾಲತ್ವಾಡ್, ವಿದ್ಯಾವತಿ, ಮುಖ್ಯಶಿಕ್ಷಕ ರಮೇಶ ಹುನಗುಂದ ಇತರರಿದ್ದರು.

    ಪ್ರತಿಭಾ ಸ್ಕೂಲ್

    ನಗರದ ಈದ್ಗಾ ಕಾಲನಿಯ ಪ್ರತಿಭಾ ಹಿ.ಪ್ರಾ. ಮತ್ತು ಪ್ರೌಢಶಾಲೆಯಲ್ಲಿ ಮಕ್ಕಳ ದಿನ ಆಚರಿಸಲಾಯಿತು. ಮಕ್ಕಳ ದಿನಾಚರಣೆಯ ಔಚಿತ್ಯ ಮತ್ತು ಹಕ್ಕುಗಳ ಕುರಿತು ಶಿಕ್ಷಕ ವಿಜಯಕುಮಾರ ಮಾತನಾಡಿದರು. ಶಾಲಾಡಳಿತ ಮಂಡಳಿ ಅಧ್ಯಕ್ಷೆ ಪುಟ್ಟಮ್ಮ ಗಿಡ್ಡಿ, ಕಾರ್ಯದರ್ಶಿ ಎಚ್. ಅರುಣ ಗಿಡ್ಡಿ, ಮುಖ್ಯಶಿಕ್ಷಕ ಕೆಂಚಪ್ಪ ಮಾಳಮ್ಮನವರ್, ಶಿಕ್ಷಕರಾದ ಮಂಜುನಾಥ ಶಿವಲೀಲಾ, ಎಲ್.ಲಕ್ಷ್ಮೀಕುಮಾರಿ, ಬಿ.ಜ್ಯೋತಿ, ಬಿ.ಸರೋಜಾ, ರೂಪಾ, ಲಕ್ಷ್ಮಣ , ಜಗನ್ನಾಥ ಬಾಬು, ದಾಕ್ಷಾಯಣಿ, ಅರುಣಾ ಸಿರಿಗೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts