More

    ಹಿಂದು ಸಮುದಾಯದ ಸ್ವಾಭಿಮಾನದ ಸಂಕೇತ

    ಗಂಗಾವತಿ: ಅಯೋಧ್ಯೆಯ ಶ್ರೀರಾಮಮಂದಿರ ಐತಿಹಾಸಿಕ ಕ್ಷೇತ್ರವಾಗಲಿದೆ. ಜಗತ್ತಿನ ಶ್ರೇಷ್ಠ ಧಾರ್ಮಿಕ ಕೇಂದ್ರವಾಗಲಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

    ನಗರದ ಹಿರೇಜಂತಕಲ್ ಶಂಖುಚಕ್ರ ದೇವಾಲಯದ ಬಳಿ ವಿಶ್ವಹಿಂದು ಪರಿಷತ್-ಬಜರಂಗ ದಳ ಜಿಲ್ಲಾ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಮನೆಮನೆಗೆ ಮಂತ್ರಾಕ್ಷತೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

    ಹಿಂದು ಸಮುದಾಯದ ಸ್ವಾಭಿಮಾನದ ಸಂಕೇತವಾಗಿದೆ. ಮುಂದಿನ ದಿನಗಳಲ್ಲಿ ಸೌಹಾರ್ದತೆ ಕೇಂದ್ರವಾಗಲಿದೆ. ಜ.22ರಂದು ಅಧಿಕೃತವಾಗಿ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದ್ದು, ದೇಗುಲ ದರ್ಶನಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಜನಪ್ರಿಯತೆ ಹೆಚ್ಚುತ್ತಿದೆ ಎಂದರು.

    ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮಾತನಾಡಿ, ಬಹುದಿನಗಳ ಕನಸು ಶೀಘ್ರವೇ ನನಸಾಗಲಿದೆ. ಧರ್ಮಶಕ್ತಿ ಮೂಲಕ ಸಾಧಿಸಲಾಗಿದೆ ಎಂದರು. ಮನೆಮನೆಗೆ ಮಂತ್ರಾಕ್ಷತೆ ಅಭಿಯಾನದ ಬಗ್ಗೆ ಬಜರಂಗ ದಳ ಜಿಲ್ಲಾ ಕಾರ್ಯದರ್ಶಿ ವಿನಯ್ ಪಾಟೀಲ್ ಮಾಹಿತಿ ನೀಡಿದರು.

    ನಗರಸಭೆ ಮಾಜಿ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಟಿ, ಮಾಜಿ ಸದಸ್ಯ ಪರಮೇಶ್ವರ ಈಡಿಗ, ಕೆಆರ್‌ಪಿಪಿ ಮುಖಂಡರಾದ ವೀರೇಶ ಬಲ್ಕುಂದಿ, ವೀರೇಶ ಸುಳೇಕಲ್, ಬಿಜೆಪಿ ಮುಖಂಡರಾದ ಬಸವರಾಜ, ಚಂದ್ರಪ್ಪ, ಪಾಂಡುನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts