More

    ಯುಡಿಐಡಿ ಕಾರ್ಡ್ ಇಲ್ಲದವರಿಗೂ ಬಸ್ ಪಾಸ್ ನೀಡಿ

    ಗಂಗಾವತಿ: ಯುಡಿಐಡಿ ಕಾರ್ಡ್ ಇಲ್ಲದ ಅಂಗವಿಕಲರಿಗೂ ಬಸ್ ಪಾಸ್ ವ್ಯವಸ್ಥೆ ಗೊಳಿಸುವಂತೆ ಒತ್ತಾಯಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಸದಸ್ಯರು ನಗರದ ಎನ್‌ಇಕೆಎಸ್‌ಆರ್‌ಟಿಸಿ ಘಟಕದ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ಘಟಕ ವ್ಯವಸ್ಥಾಪಕ ಸಂಜೀವಮೂರ್ತಿಗೆ ಮನವಿ ಸಲ್ಲಿಸಿದರು.

    ತಾಲೂಕು ಘಟಕದ ಅಧ್ಯಕ್ಷ ಆಶೋಕ ಗುಡಿಕೋಟಿ ಮಾತನಾಡಿ, ಜಿಲ್ಲೆಯಲ್ಲಿ ಬಹುತೇಕ ಅಂಗವಿಕಲರು ಯುಡಿಐಡಿ ಕಾರ್ಡ್ ಹೊಂದಿಲ್ಲ. ಬಸ್‌ಪಾಸ್ ಸೌಲಭ್ಯಕ್ಕಾಗಿ ಯುಡಿಐಡಿ ಕಾರ್ಡ್ ಕಡ್ಡಾಯ ಮಾಡಿದ್ದರಿಂದ ಅಂಗವಿಕಲರಿಗೆ ತೊಂದರೆಯಾಗಿದ್ದು, ಗ್ರಾಮೀಣ ಭಾಗದ ಅಂಗವಿಕಲರು ಸಂಕಷ್ಟಕ್ಕೊಳಗಾಗಿದ್ದಾರೆ. ಯುಡಿಐಡಿ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದರೂ ತಾಂತ್ರಿಕ ತೊಂದರೆಯಿಂದ ವಿತರಣೆಯಾಗಿಲ್ಲ. ಬಸ್ ಪಾಸ್ ಪಡೆಯಲು ೆ.28 ಕೊನೇ ದಿನವಾಗಿದ್ದು, ಎಲ್ಲ ಅಂಗವಿಕಲರು ನಿಗದಿತ ಅವಧಿಯೊಳಗೆ ಪಡೆಯಲು ಸಾಧ್ಯವಾಗುತ್ತಿಲ್ಲ. ಯುಡಿಐಡಿ ಕಾರ್ಡ್ ವಿನಾಯಿತಿ ಜತೆಗೆ, ಅವಧಿ ವಿಸ್ತರಿಸುವಂತೆ ಮನವಿ ಮಾಡಿದರು.

    ಪದಾಧಿಕಾರಿಗಳಾದ ನರಸಿಂಹಲು, ಜಾರ್, ಸಾಧಿಕ, ಖಾದರ್‌ಭಾಷಾ, ನಾಗಪ್ಪ, ಪ್ರಶಾಂತ ನಾಯಕ, ಹುಸೇನಪ್ಪ ಹಂಚಿನಾಳ್ ಇತರರಿದ್ದರು.

    ವ್ಯವಸ್ಥಾಪಕ ಸಂಜೀವಮೂರ್ತಿಗೆ ಮನವಿ
    ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸಂಚಾರದ ವ್ಯವಸ್ಥೆ ಹೆಚ್ಚಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರು ಎನ್‌ಇಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಸಂಜೀವ ಮೂರ್ತಿಗೆ ಮನವಿ ಸಲ್ಲಿಸಿದರು. ಶಾಲಾ, ಕಾಲೇಜು ಆರಂಭವಾಗಿದ್ದು, ಬಸ್ ಸಂಚಾರದ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಸದಸ್ಯರು ತಿಳಿಸಿದರು. ಪ್ರಮುಖರಾದ ಬಸವರಾಜ ನಾಯಕ, ದೊಡ್ಡಬಸವ, ಉಮೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts