More

    ಅಂಗವಿಕಲರಿಗೆ ಶೇ. 5 ಮೀಸಲಾತಿ ಒದಗಿಸಿ

    ಸವಣೂರ: ಸರ್ಕಾರದ ಶೇ.5 ಮೀಸಲಾತಿಯನ್ನು ಅಂಗವಿಕಲರಿಗೆ ಒದಗಿಸಿ ಸ್ವಾವಲಂಬಿ ಜೀವನ ನಡೆಸಲು ಅಧಿಕಾರಿಗಳು ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಭರತರಾಜ್ ಕೆ.ಎನ್. ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಅಂಗವಿಕಲರ ಕುಂದುಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸಭೆಯಲ್ಲಿ ಅಂಗವಿಕಲರ ಹಲವು ಕುಂದುಕೊರತೆಗಳ ಕುರಿತು ರ್ಚಚಿಸಲಾಯಿತು. ಆರೋಗ್ಯ ಇಲಾಖೆ ವತಿಯಿಂದ ನೀಡಲಾಗುವ ಯುಡಿಐಡಿ ಕಾರ್ಡ್ ಅನ್ನು ತ್ವರಿತವಾಗಿ ವಿತರಿಸಬೇಕು. ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲುಬು-ಕೀಲುಗಳ ತಜ್ಞರ ಕೊರತೆಯಿಂದಾಗಿ ಸಾಕಷ್ಟು ಅಂಗವಿಕಲರಿಗೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ಶಿಗ್ಗಾಂವಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರನ್ನು ನೇಮಿಸಿ ಯುಡಿಐಡಿ ಶಿಬಿರ ಏರ್ಪಡಿಸಿ ಅಂಗವಿಕಲರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಯುಆರ್​ಡಬ್ಲ್ಯು ಈರಯ್ಯ ಹಿರೇಮಠ ಆಗ್ರಹಿಸಿದರು.

    ಎಂಆರ್​ಡಬ್ಲ್ಯುಶಿವಾನಂದ ಯರೇಸಿಮಿ ಮಾತನಾಡಿ, ಸರ್ಕಾರ ಶಕ್ತಿ ಯೋಜನೆಯಡಿ ಸಾಕಷ್ಟು ಮಹಿಳೆಯರು ಪ್ರಯಾಣಿಸುವುದರಿಂದ ಅಂಗವಿಕಲರು ಬಸ್ ಹತ್ತಲು ಹರಸಾಹಸ ಪಡಬೇಕಾದ ಪರದಾಡುತ್ತಿದ್ದು, ಸಾರಿಗೆ ಇಲಾಖೆ ಅಂಗವಿಕಲರಿಗೆ ಮೀಸಲಿರುವ ಆಸನದಲ್ಲಿ ಅನ್ಯರಿಗೆ ಅವಕಾಶ ನೀಡದೆ ಅವರ ಪ್ರಯಾಣಕ್ಕೆ ಅನುಕೂಲ ಕಲ್ಪಿಸಬೇಕು. ಸವಣೂರ ಬಸ್ ನಿಲ್ದಾಣದಲ್ಲಿ ಅಂಗವಿಕಲರಿಗಾಗಿ ಮೀಸಲಿರುವ ವಿಶ್ರಾಂತಿ ಕೊಠಡಿ ಅನ್ಯರಿಗೆ ಮಾತ್ರ ಅನುಕೂಲವಾಗುತ್ತಿದೆ. ಕೂಡಲೇ ಘಟಕ ವ್ಯವಸ್ಥಾಪಕರು ಕ್ರಮ ವಹಿಸಿ ಅಲ್ಲಿ ಅಂಗವಿಕಲರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದರು.

    ಪಟ್ಟಣದ ಪುರಸಭೆ ಸಾಕಷ್ಟು ದೂರ ಇರುವುದರಿಂದ ಆಟೋ ಮೂಲಕ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ, ಹಳೆಯ ಪುರಸಭೆಯ ಕಟ್ಟಡದಲ್ಲಿ ಒಂದು ಕೊಠಡಿ ನೀಡಿ ಅಲ್ಲಿ ಅಂಗವಿಕಲರ ಪುನರ್ವಸತಿ ಕೇಂದ್ರ ತೆರೆಯಲು ವ್ಯವಸ್ಥೆ ಕಲ್ಪಿಸಲು ಮನವಿ ಮಾಡಲಾಯಿತು.

    ಗ್ರೇಡ್-2 ತಹಸೀಲ್ದಾರ್ ಗಣೇಶ ಸವಣೂರ, ಬಿಇಒ ಎಂ.ಎಫ್. ರ್ಬಾ, ಇತರರಿದ್ದರು.

    ತಾಸು ತಡವಾಗಿ ಬಂದ ಅಧಿಕಾರಿಗಳು

    ವಿವಿಧ ನ್ಯೂನತೆಗಳಿರುವ ಅಂಗವಿಕಲರು ನಿಗದಿತ ಸಮಯಕ್ಕೆ ಹಾಜರಿದ್ದರೂ ಅಧಿಕಾರಿಗಳು ಒಂದು ಗಂಟೆ ವಿಳಂಬವಾಗಿ ಆಗಮಿಸಿದ್ದು ಅಂಗವಿಕಲರ ಅಸಮಾಧಾನಕ್ಕೆ ಕಾರಣವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts