More

    ಶಾಶ್ವತ ಏರ್‌ಪೋರ್ಟ್ ನಿರ್ಮಾಣಕ್ಕೆ ಆದ್ಯತೆ; ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಅನುಷ್ಠಾನಕ್ಕಾಗಿ ಪಕ್ಷಾತೀತ ಹೋರಾಟ

    ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ ಉಡಾನ್ ಯೋಜನೆ ಅನುಷ್ಠಾನದ ಜತೆಗೆ ಶಾಶ್ವತ ಏರಪೋರ್ಟ್ ನಿರ್ಮಿಸುವ ಉದ್ದೇಶಿವಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

    ನಗರದ ಎಪಿಎಂಸಿ ಸಭಾಂಗಣದಲ್ಲಿ ಉಡಾನ್ ಯೋಜನೆ ಅನುಷ್ಠಾನ ಕುರಿತು ಜಿಲ್ಲಾಮಟ್ಟದ ಸರ್ವಪಕ್ಷಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಉಡಾನ್ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧವಿದ್ದು, ಸೂಕ್ತ ಜಾಗದ ಕೊರತೆಯಿಂದ ವಿಳಂಬವಾಗಿದೆ. ಎಂಎಸ್‌ಪಿಎಲ್‌ಗೆ ಸೇರಿ ಜಾಗ ಸ್ವಾಧೀನ ಕುರಿತಂತೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಸಂಬಂಧಪಟ್ಟ ಕಂಪನಿ ಮುಖ್ಯಸ್ಥರೊಂದಿಗೆ ಚರ್ಚಿಸಲಾಗಿದೆ.

    ನೀರಾವರಿ ಹೊರತುಪಡಿಸಿ ಬಂಜರು ಪ್ರದೇಶದಲ್ಲಿ ಯೋಜನೆ ಅನುಷ್ಠಾನಕ್ಕೂ ಚಿಂತಿಸಲಾಗದ್ದು, ಜಾಗ ಹುಡುಕಲಾಗುವುದು. ಸಂಸದ ಸೇರಿ ಜಿಲ್ಲೆಯ ಜನಪ್ರತಿನಿಧಿಗಳು ಯೋಜನೆ ಅನುಷ್ಠಾನದ ಬಗ್ಗೆ ಸಿಎಂರೊಂದಿಗೆ ಒಂದು ಸುತ್ತಿನ ಮಾತುಕತೆ ಪೂರ್ಣಗೊಳಿಸಲಾಗಿದೆ. ಯೋಜನೆ ಅನುಷ್ಠಾನಕ್ಕೆ ಪಕ್ಷಾತೀತ ಬೆಂಬಲದ ಅಗತ್ಯವಿದೆ. ಶಾಶ್ವತ ಏರ್‌ಪೋರ್ಟ್ ಮತ್ತು ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.

    ಮಾಜಿ ಎಂಎಲ್ಸಿ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಆರ್.ಶ್ರೀನಾಥ ಮಾತನಾಡಿ, ಕಿಷ್ಕಿಂದಾ ಪ್ರದೇಶಕ್ಕೆ ಅನ್ಯರಾಜ್ಯ ಭಕ್ತರು ಬರುತ್ತಿದ್ದು, ಉಡಾನ್ ಯೋಜನೆ ಜಾರಿಯಾದರೆ ಇನ್ನಷ್ಟು ಪ್ರಸಿದ್ಧಿ ಪಡೆಯಲಿದೆ. ಹಜ್ ಮತ್ತು ಅಜ್ಮೀರ್ ಯಾತ್ರೆಗೆ ತೆರಳಬೇಕಾದರೂ ಬೇರೆ ರಾಜ್ಯಗಳ ಮೂಲಕ ಹೋಗಬೇಕಿದೆ. ಆನೆಗೊಂದಿ ಮತ್ತು ಹಂಪಿ ಭಾಗದ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಯೋಜನೆ ಶೀಘ್ರ ಅನುಷ್ಠಾನಗೊಳ್ಳಬೇಕಿದೆ ಎಂದರು.

    ಯೋಜನೆ ಅನುಷ್ಠಾನ ಕುರಿತಂತೆ ಮೂಲಸೌಕರ್ಯಗಳ ಸಚಿವ ಆನಂದ ಸಿಂಗ್‌ರೊಂದಿಗೆ ಚರ್ಚಿಸುವುದು, ಅಗತ್ಯಬಿದ್ದರೆ ಜಿಲ್ಲೆಯ ನಿಯೋಗ ಸಿಎಂ ಭೇಟಿ ಮಾಡುವುದು ಮತ್ತು ಸೂಕ್ತ ಜಾಗ ಅಂತಿಗೊಳಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

    ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಎಸ್.ಶಿವರಾಮನಗೌಡ ಮಾತನಾಡಿದರು. ಮಾಜಿ ಶಾಸಕ ಜಿ.ವೀರಪ್ಪ, ಕಾಡಾ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಎಪಿಎಂಸಿ ಅಧ್ಯಕ್ಷ ಚಂದ್ರಗೌಡ, ಸದಸ್ಯರಾದ ಸಣ್ಣಕ್ಕಿ ನೀಲಪ್ಪ, ಶರಣೇಗೌಡ, ಉದ್ಯಮಿಗಳಾದ ಕೆ.ಪಂಪಾಪತಿ, ಸಿಂಗನಾಳ ಜಗದೀಶಪ್ಪ, ಹಿರಿಯ ವಕೀಲ ಅಶೋಕಸ್ವಾಮಿ ಹೇರೂರು, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಕೊಪ್ಪಳದ ಅಸ್ೀಅಲಿ, ರಾಘವೇಂದ್ರ ಪಾನಗಂಟಿ, ವಿ.ಎಂ.ಭೂಸನೂರಮಠ ಇತರಿರದ್ದರು.

    ಫಲವತ್ತಾದ ಭೂಮಿ ಬೇಡ : ಬಂಜರು ಪ್ರದೇಶದಲ್ಲಿ ಯೋಜನೆ ಅನುಷ್ಠಾನಗೊಳಿಸಿದರೆ ಅಭ್ಯಂತರವಿಲ್ಲ, ಲವತ್ತಾದ ಮತ್ತು ಕೃಷಿ ಭೂಮಿ ಆಯ್ಕೆ ಮಾಡಿಕೊಳ್ಳುವುದು ಬೇಡ ಎಂದು ರೈತ ಸಂಘ ಒತ್ತಾಯಿಸಿತು. ಯೋಜನೆ ಶ್ರೀಮಂತರಿಗೆ ಲಾಭವಾಗುತ್ತಿದ್ದು, ರೈತರು ಮತ್ತು ಜನಸಾಮನ್ಯರಿಗೆ ಅನುಕೂಲವಿಲ್ಲ. ಕನಕಗಿರಿ ಭಾಗದಲ್ಲಿ ಬಂಜರು ಭೂಮಿ ಸಾಕಷ್ಟಿದ್ದು, ನೀರಾವರಿ ಪ್ರದೇಶದಲ್ಲಿ ಆಯ್ಕೆ ಮಾಡಿಕೊಳ್ಳದಂತೆ ರೈತ ಪ್ರತಿನಿಧಿಗಳಾದ ಶರಣಗೌಡ ಕೇಸಹರಟ್ಟಿ, ಶರಣೇಗೌಡ ಕತ್ತಿ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts