More

    ನಾಲೆಯ ಅಕ್ರಮ ಸಂಪರ್ಕ ತೆರವು; ಗಂಗಾವತಿ ಕಂದಾಯ ಅಧಿಕಾರಿಗಳ ಕಾರ್ಯಾಚರಣೆ

    ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆಗೆ ಜಲಾಶಯದಿಂದ ನೀರು ಹರಿಸಿದ ಹಿನ್ನೆಲೆಯಲ್ಲಿ ನಾಲೆಯಿಂದ ಕೃಷಿ ಜಮೀನಿಗೆ ಹೊಂದಿರುವ ಅಕ್ರಮ ಪೈಪ್‌ಲೈನ್ ಸಂಪರ್ಕಗಳನ್ನು ತಾಲೂಕಿನ ಕಂದಾಯ ಅಧಿಕಾರಿಗಳು ಭಾನುವಾರ ತೆರವುಗೊಳಿಸಿದರು.

    ಎಡದಂಡೆ ಕಾಲುವೆ ಮೇಲ್ಭಾಗದ ರೈತರು ಅಕ್ರಮವಾಗಿ ನೀರು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಕೆಲವರು ಕಾಲುವೆಗೆ ಪಂಪಸೆಟ್ ಅಳವಡಿಸಿಕೊಂಡಿದ್ದರೆ ಮತ್ತೆ ಕೆಲವರು ಪೈಪ್‌ಲೈನ್ ನಿರ್ಮಿಸಿಕೊಂಡಿದ್ದಾರೆ. ಇದರಿಂದ ನಾಲೆಯ ಕೊನೆಯ ಭಾಗದ ರೈತರಿಗೆ ಸಮರ್ಪಕ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಕ್ರಮ ಸಂಪರ್ಕಗಳನ್ನು ತೆರವುಗೊಳಿಸಲಾಯಿತು.

    ವೆಂಕಟಗಿರಿ ಹೋಬಳಿ ವ್ಯಾಪ್ತಿಯಲ್ಲಿ ಮಲ್ಲಾಪುರದವರೆಗೆ ಮೊದಲ ಹಂತದ ಕಾರ್ಯಚರಣೆ ನಡೆದಿದೆ. ದಾಸನಾಳ ಬಳಿ ಕಾಲುವೆ ಮೇಲ್ಭಾಗದ ಸರ್ವಿಸ್ ರಸ್ತೆಗೆ ಹಾಕಿದ್ದ ಪಂಪಸೆಟ್‌ಗಳನ್ನು ಜೆಸಿಬಿ ಮೂಲಕ ತೆಗೆದು ಹಾಕಲಾಯಿತು. ಮಲ್ಲಾಪುರ, ರಾಂಪುರ ಬಳಿ ಪಂಪಸೆಟ್‌ಗಳನ್ನು ವಶಪಡಿಸಿಕೊಂಡು ಅಕ್ರಮ ಸಂಪರ್ಕ ತೆರವುಗೊಳಿಸಲು ರೈತರಿಗೆ ಸೂಚನೆ ನೀಡಲಾಗಿದೆ.

    ನಾಲೆಗೆ ಅಕ್ರಮ ಸಂಪರ್ಕಗಳಿದ್ದರೆ ರೈತರು ಕೂಡಲೇ ತೆರವುಗೊಳಿಸಬೇಕು. ನಿರ್ಲಕ್ಷಿಸಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಉಪ ತಹಸೀಲ್ದಾರ್ ಮಹೆಬೂಬ್ ಅಲಿ ತಿಳಿಸಿದರು. ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ, ಬಸವರಾಜ ಅಂಗಡಿ, ಗ್ರಾಮಲೆಕ್ಕಿಗರಾದ ಶಹನಾಜ್, ಗಾಯತ್ರಿ, ನೀರಾವರಿ ಇಲಾಖೆ ಎಇ ಅಮರೇಶ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts