More

    ತ್ಯಾಗ, ಪ್ರೀತಿ, ವಿಶ್ವಾಸ ಕೆಎಲ್‌ಇ ಸಂಸ್ಥೆ ಧ್ಯೇಯ

    ಗಂಗಾವತಿ: ನಡೆ, ನುಡಿ ಮತ್ತು ಸೌಜನ್ಯ ಬದುಕನ್ನು ಕಟ್ಟಿಕೊಡುತ್ತದೆ ಎಂದು ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ರಮೇಶ ಸಿದ್ದಪ್ಪ ಹೇಳಿದರು.

    ವಡ್ಡರಹಟ್ಟಿಯ ಕೆಎಲ್‌ಇ ಸಂಸ್ಥೆಯ ಪಿಯು ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ತ್ಯಾಗವೀರ ಸಿರಸಂಗಿ ಲಿಂಗರಾಜ್ ಅವರ 162ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕೆಎಲ್‌ಇ ಸಂಸ್ಥೆ ಕಟ್ಟಿದ ತ್ಯಾಗವೀರ ಸಿರಸಂಗಿ ಲಿಂಗರಾಜ್ ದಾನದ ಮನೋಭಾವ ಅವಿಸ್ಮರಣೀಯವಾದದ್ದು. ದಾನಿಗಳ ತ್ಯಾಗದಿಂದ ಕೆಎಲ್‌ಇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದು, ಗ್ರಾಮೀಣ ಭಾಗದಲ್ಲಿ ಶಾಲಾ ಕಾಲೇಜುಗಳನ್ನು ತೆರೆದಿದೆ. ತ್ಯಾಗ, ಪ್ರೀತಿ, ವಿಶ್ವಾಸವೇ ಸಂಸ್ಥೆಯ ಧ್ಯೇಯ ವಾಕ್ಯವಾಗಿದೆ ಎಂದರು.

    ವಿಜಯಪುರ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಲಿಂ.ಸಿದ್ಧೇಶ್ವರ ಸ್ವಾಮೀಜಿಗೆ ಮೌನಾಚರಣೆಯೊಂದಿಗೆ ನುಡಿನಮನ ಸಲ್ಲಿಸಲಾಯಿತು. ಸಂಸ್ಥೆ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಗಿರಿಯಪ್ಪ ಹೊಸ್ಕೇರಾ, ಪ್ರಾಚಾರ್ಯ ಎಸ್.ಸಿ.ಪಾಟೀಲ್, ಉಪನ್ಯಾಸಕರಾದ ಬಿ.ಸಿದ್ದೇಶ, ಶ್ರೀದೇವಿ, ಶ್ಯಾಮಸಿಂಗ್, ಆನಂದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts