More

    ಧಾರ್ಮಿಕ ಆಚರಣೆಗಳಿಂದ ಸಾಮರಸ್ಯ ರಕ್ಷಣೆ: ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರ ಆಶೀರ್ವಚನ



    ಗಂಗಾವತಿ: ಧಾರ್ಮಿಕ ಆಚರಣೆಗಳಿಂದ ಸಾಮರಸ್ಯ ಕಾಪಾಡಲು ಸಾಧ್ಯವಿದೆ ಎಂದು ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಹೇಳಿದರು.

    ತಾಲೂಕಿನ ಉಡುಮಕಲ್ ಹಿರೇಮಠದ ಬೃಹನ್ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಉಕ್ಕಡಗಾತ್ರಿ ಕರಿಬಸವೇಶ್ವರ 28ನೇ ಆರಾಧನೆ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಧರ್ಮಾಚರಣೆ ನಿರಂತವಾಗಿವೆ. ಸಾಮೂಹಿಕ ವಿವಾಹದಿಂದ ಅನಗತ್ಯ ದುಂದುವೆಚ್ಚ ನಿಯಂತ್ರಿಸಲು ಸಾಧ್ಯ ಎಂದರು.

    ಬೆಳಗ್ಗೆ ರುದ್ರಾಭಿಷೇಕ, ವಿಶೇಷ ಪೂಜೆ, ಕುಂಭೋತ್ಸವ ಮೆರವಣಿಗೆ, ಸಾಮೂಹಿಕ ಮದುವೆ, ಭಜನೆ, ಪುರವಂತಿಕೆ ಮತ್ತು ಪ್ರಸಾದ ವಿತರಣೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. 5 ಜೋಡಿಗಳು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು. ಹಿರೇಮಠ ಬೃಹನ್ಮಠದ ವೀರಬಸಯ್ಯಸ್ವಾಮಿ, ಶಿವಲಿಂಗಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಮುಖಂಡರಾದ ಎಚ್.ಆರ್.ಚನ್ನಕೇಶವ, ವೀರೇಶಯ್ಯಸ್ವಾಮಿ ಹಿರೇಮಠ, ಎಚ್.ಎಂ.ನಾಯಕ, ಶಿವಮೂರ್ತಿಗೌಡ ಪಾಟೀಲ್, ಸಿದ್ದಪ್ಪ ನಿರಲೂಟಿ, ಎಚ್.ಎಂ.ನಾಯಕ, ಶರಣಯ್ಯಸ್ವಾಮಿ ಮರಳೀಮಠ, ತಿಪ್ಪಣ್ಣನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts