More

    ನರಭಕ್ಷಕ ಚಿರತೆ ಸೆರೆಗೆ ತಜ್ಞರ ತಂಡ ಆಹ್ವಾನಿಸುವಂತೆ ಅಧಿಕಾರಿಗಳಿಗೆ ಶಾಸಕ ಪರಣ್ಣ ಮುನವಳ್ಳಿ ಸೂಚನೆ

    ಗಂಗಾವತಿ: ನರಭಕ್ಷಕ ಚಿರತೆ ಸೆರೆಹಿಡಿಯುವಂತೆ ಅರಣ್ಯಾಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದ್ದು, ತಜ್ಞರ ತಂಡ ಆಹ್ವಾನಿಸಲು ತಿಳಿಸಲಾಗುವುದು ಎಂದು ಶಾಸಕ ಪರಣ್ಣಮುನವಳ್ಳಿ ಹೇಳಿದರು.

    ನಗರದ ಶಾಸಕರ ಗೃಹ ಕಚೇರಿಯಲ್ಲಿ ಆನೆಗೊಂದಿ ಮತ್ತು ಸಣಾಪುರ ಗ್ರಾಪಂ ವ್ಯಾಪ್ತಿಯ ನಿವಾಸಿಗಳೊಂದಿಗೆ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಅರವಳಿಕೆ ಮೂಲಕ ಚಿರತೆ ಸೆರೆಹಿಡಿಯುವುದು ಅಸಾಧ್ಯವಾಗಿದ್ದು, ಶೂಟ್ ಮಾಡಲು ಕಾನೂನು ತೊಡಕುಗಳಿವೆ. ಚಿರತೆ ಸೆರೆಹಿಡಿಯಲು 10 ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಶ್ರಮಿಸುತ್ತಿದ್ದು, ಚಿರತೆಯ ಸುಳಿವು ಸಿಗುತ್ತಿಲ್ಲ. ಈ ಬಗ್ಗೆ ಅರಣ್ಯ ಸಚಿವ ಆನಂದ ಸಿಂಗ್‌ರೊಂದಿಗೆ ಚರ್ಚಿಸಿದ್ದು, ತಜ್ಞರ ತಂಡ ಆಹ್ವಾನಿಸುವಂತೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಆನೆಗೊಂದಿ ಅಭಿವೃದ್ಧಿಗೆ ಹಂಪಿ ಪ್ರಾಧಿಕಾರ ಸಹಕರಿಸುತ್ತಿಲ್ಲ ಎಂಬುದು ಗೊತ್ತಿದೆ. ಏಕಾಏಕಿ ಆನೆಗೊಂದಿ ಪ್ರಾಧಿಕಾರ ಸ್ಥಾಪಿಸುವುದು ಅಸಾಧ್ಯ. ಪ್ರಾಧಿಕಾರ ತಾರತಮ್ಯ ನೀತಿಯ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

    ಸಭೆಯ ಬಳಿಕ ಆನೆಗೊಂದಿಯ ಶ್ರೀ ಆದಿಶಕ್ತಿ ದೇವಾಲಯದ ಗೋಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಆನೆಗೊಂದಿಯಲ್ಲಿ ಡಿಸಿ ಎಸ್.ವಿಕಾಸ ಕಿಶೋರ, ತಹಸೀಲ್ದಾರ್ ಎಂ.ರೇಣುಕಾ ನೇತೃತ್ವದಲ್ಲಿ ಸಭೆ ನಡೆಸಿ ಚಿರತೆ ಸೆರೆಗೆ ಕ್ರಮಕೈಗೊಳ್ಳುವಂತೆ ಅರಣ್ಯ ಸಿಬ್ಬಂದಿಗೆ ಸೂಚಿಸಿದರು.

    ಡಿಎ್ಒ ಡಾ.ಹರ್ಷಾಭಾನು, ತಾಲೂಕು ಅರಣ್ಯಾಧಿಕಾರಿ ಶಿವರಾಜ ಮೇಟಿ, ಆರ್‌ಐ ಮಂಜುನಾಥ ಹಿರೇಮಠ, ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದಸ್ವಾಮೀಜಿ, ಗ್ರಾಮಸ್ಥರಾದ ಹರಿಹರದೇವರಾಯ, ಪದ್ಮನಾಭ್, ಸುದರ್ಶನ ವರ್ಮ,ರಾಜಣ್ಣ, ಚಂದ್ರಶೇಖರ್ ಇತರರಿದ್ದರು.

    ನರಭಕ್ಷಕ ಚಿರತೆ ಸೆರೆಗೆ ತಜ್ಞರ ತಂಡ ಆಹ್ವಾನಿಸುವಂತೆ ಅಧಿಕಾರಿಗಳಿಗೆ ಶಾಸಕ ಪರಣ್ಣ ಮುನವಳ್ಳಿ ಸೂಚನೆ

    ಮತ್ತೆ ಕಾಣಿಸಿದ ಚಿರತೆ: ನರ ಭಕ್ಷಕ ಚಿರತೆ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯದ ಬಳಿ ಸೋಮವಾರ ಮತ್ತೆ ಕಾಣಿಸಿಕೊಂಡಿದ್ದು, ಹಗಲಿನಲ್ಲಿ ಗೋಶಾಲೆಯ ಆಕಳೊಂದನ್ನು ಕೊಂದಿದೆ. ಆಕಳನ್ನು ಎಳೆದೊಯ್ಯದಿರುವ ವಿಡಿಯೋ ವೈರಲ್ ಆಗಿದ್ದು, ಸಂಜೆ ವೇಳೆ ದಾರಿಹೋಕರಿಗೆ ಕಾಣಿಸಿಕೊಂಡಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಆನೆಗೊಂದಿ, ಕಡೇಬಾಗಿಲುವರೆಗೂ ಸಂಚರಿಸುತ್ತಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts