More

    ಮೈನವಿರೇಳಿಸಿದ ಹೋರಿ ಬೆದರಿಸುವ ಹಬ್ಬ

    ಸೊರಬ: ತಾಲೂಕಿನ ಚಿಕ್ಕಚೌಟಿ ಗ್ರಾಮದಲ್ಲಿ ಗ್ಯಾಂಗ್ ಸ್ಟಾರ್ ಬಳಗ ಏರ್ಪಡಿಸಿದ್ದ ಸಾಂಪ್ರಾದಯಿಕ ಹೋರಿ ಬೆದರಿಸುವ ಹಬ್ಬ ನೋಡುಗರನ್ನು ರೋಮಾಂಚನಗೊಳಿಸಿತು. ಸಾವಿರಾರು ರೈತರು, ಸಾಹಸ ಪ್ರಿಯರು ಸಂಭ್ರಮಿಸಿದರು

    ಗ್ರಾಮದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಹೋರಿ ಬೆದರಿಸುವ ಹಬ್ಬ ನಡೆಯಿತು. ಅಖಾಡದಲ್ಲಿ ಹೋರಿಗಳು ಬೆದರá-ವುದನ್ನು ನೋಡಲು ಹಾವೇರಿ, ಗದಗ, ಉತ್ತರ ಕನ್ನಡ ಮತ್ತಿತರ ಜಿಲ್ಲೆಗಳಿಂದ ಜನರು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಅತ್ತಿತ್ತ ಓಡಿ ಹೋಗುತ್ತಿದ್ದಂತೆ ಪ್ರೇಕ್ಷಕರಿಂದ ಭಾರಿ ಕೇಕೆ, ಶಿಳ್ಳೆ ಕೇಳಿಬರುತ್ತಿದ್ದವು.

    ಹೋರಿಗಳ ಮಾಲೀಕರು ಹೋರಿಗಳಿಗೆ ಬಗೆ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಬಲೂನು ಹಾಗೂ ಕೊಬ್ಬರಿ ಕಟ್ಟಿ ಸಿಂಗರಿಸಿದ್ದರು. ಅಖಾಡದಲ್ಲಿ ಚಿಕ್ಕಚೌಟಿ ಗ್ಯಾಂಗ್​ಸ್ಟಾರ್, ಚಿನ್ನಾಟದ ಚೆಲುವ, ಆನವಟ್ಟಿ ಪವರ್ ಸ್ಟಾರ್, ಜಕ್ಕನಹಳ್ಳಿ ಛಲಗಾರ, ಕೆಡಿಎಂ ಕಿಂಗ್, ಹುಲುಗಿನಕೊಪ್ಪದ ಡಾನ್, ಕರ್ನಾಟಕದ ನಂದಿ, ಹುಲುಗಿನಕೊಪ್ಪದ ನಾಯಕ, ಹಾವೇರಿ ಅನ್ನದಾತ, ತಡಸನಹಳ್ಳಿ ಡಾನ್ ಸೇರಿ ವಿವಿಧ ಹೆಸರುಗಳ ಹೋರಿಗಳು ಅಖಾಡದಲ್ಲಿ ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು.

    ಸಮಿತಿಯವರು ಅಖಾಡದ ಎರಡೂ ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡಿದ್ದರು. ಅಖಾಡದಲ್ಲಿ ಕ್ರಮವಾಗಿ ಒಂದೊಂದೇ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಸಮಿತಿಯವರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts