More

    ಇಲ್ಲಿ ಈ ಗಣೇಶನಿಗೆ ಮುಸುಕಿನ ಜೋಳ, ಸೊಪ್ಪುಗಳಿಂದಲೇ ಅಲಂಕಾರ!

    ಬೆಂಗಳೂರು: ಗಣೇಶ ಚತುರ್ಥಿ ಬಂತೆಂದರೆ ತರಹೇವಾರಿ ಗಣೇಶ ಮೂರ್ತಿಗಳನ್ನು ಕೂರಿಸುವ ಜತೆಗೆ ಥರಥರದ ಅಲಂಕಾರಗಳನ್ನೂ ಮಾಡುತ್ತಾರೆ. ಅಂಥದ್ದರಲ್ಲಿ ಇಲ್ಲೊಂದು ಕಡೆಯಲ್ಲಿ ಗಣೇಶನಿಗೆ ಹೂವುಗಳ ಜೊತೆ ಮುಸುಕಿನ ಜೋಳ, ಸೊಪ್ಪುಗಳೇ ಅಲಂಕಾರ.

    ಬೆಂಗಳೂರಿನ ಜೆ.ಪಿ.ನಗರದ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಗಣೇಶೋತ್ಸವದಲ್ಲಿ ಇಂಥದ್ದೊಂದು ವಿಶೇಷ ಅಲಂಕಾರ ಮಾಡಲಾಗಿದೆ. ಪ್ರತಿ ಬಾರಿ ವಿಶೇಷ ಅಲಂಕಾರ ಹಾಗೂ ವಿಶೇಷ ಸಾಮಗ್ರಿಗಳನ್ನು ಬಳಸಿಕೊಂಡು ಗಣೇಶ ಮೂರ್ತಿಯನ್ನು ತಯಾರಿಸುವ ಮೂಲಕ ಈ ದೇವಸ್ಥಾನ ಗಮನ ಸೆಳೆಯುತ್ತಿತ್ತು. ಕರೊನಾ ಸಾಂಕ್ರಾಮಿಕ ಕಾರಣ ಕಳೆದ ವರ್ಷವೂ ಹೆಚ್ಚಿನ ಆಲಂಕಾರವಿಲ್ಲದೆ ಹಬ್ಬ ಆಚರಿಸಲಾಗಿತ್ತು. ಈ ಬಾರಿ ಸ್ವಲ್ಪಮಟ್ಟಿಗೆ ಕರೊನಾ ಮಹಾಮಾರಿ ಕಡಿಮೆ ಆಗಿರುವ ನಿಟ್ಟಿನಲ್ಲಿ ಹಾಗೂ ಲಸಿಕೀಕರಣವೂ ದೊಡ್ಡ ಪ್ರಮಾಣದಲ್ಲಿ ನಡೆದಿರುವುದರಿಂದ ವಿಶೇಷ ಅಲಂಕಾರ ಏರ್ಪಡಿಸಲಾಗಿದೆ ಎಂದು ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್‌ನ ಟ್ರಸ್ಟಿ ರಾಮ್​​ಮೋಹನ್ ರಾಜ್ ತಿಳಿಸಿದ್ದಾರೆ.

    ಇಲ್ಲಿ ಈ ಗಣೇಶನಿಗೆ ಮುಸುಕಿನ ಜೋಳ, ಸೊಪ್ಪುಗಳಿಂದಲೇ ಅಲಂಕಾರ!

    ಪ್ರತ್ಯೇಕವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸದೆ ದೇವಸ್ಥಾನದಲ್ಲಿ ಇರುವ ಮೂರ್ತಿಗೇ ವಿಶೇಷ ಅಲಂಕಾರ ಮಾಡಲಾಗಿದೆ. ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮ ದೇವಸ್ಥಾನದ ಎಲ್ಲ ಸಿಬ್ಬಂದಿ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ಇಲ್ಲಿ ಈ ಗಣೇಶನಿಗೆ ಮುಸುಕಿನ ಜೋಳ, ಸೊಪ್ಪುಗಳಿಂದಲೇ ಅಲಂಕಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts