More

    ಒಂದೇ ಜಾಗದಲ್ಲಿ ಗಣೇಶಮೂರ್ತಿ, ಅಲ್ಲಾ ದೇವರ ಪ್ರತಿಷ್ಠಾಪನೆ!

    ಬಾಗಲಕೋಟೆ: ಈ ಊರಿನ ಒಂದೇ ಜಾಗದಲ್ಲಿ ಗಣೇಶಮೂರ್ತಿ ಹಾಗೂ ಅಲ್ಲಾ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಎರಡು ದೇವರಿಗೂ ಪೂಜೆ ಸಲ್ಲಿಸುವ ಮೂಲಕ ಹಿಂದು-ಮುಸ್ಲಿಮರು ಭಾವೈಕ್ಯತೆ ಮೆರೆದಿದ್ದಾರೆ.

    ಹಿಂದು-ಮುಸ್ಲಿಂ ದೇವರ ಸಮಾಗಮಕ್ಕೆ ಸಾಕ್ಷಿಯಾದ ಊರೇ ಮಹಾಲಿಂಗಪುರ. ಈ ಬಾರಿ ಗಣೇಶ ಚತುರ್ಥಿ ಹಾಗೂ ಮೋಹರಂ ಹಬ್ಬ ಒಂದೇ ಸಮಯಕ್ಕೆ ಬಂತು. ಅಲ್ಲದೆ ಕೋವಿಡ್-19 ಕಾರಣಕ್ಕೆ ಹಬ್ಬಗಳನ್ನು ಸರಳವಾಗಿ ಆಚರಿಸಬೇಕು ಎಂದು ಸರ್ಕಾರವೂ ಆದೇಶ ಹೊರಡಿಸಿತ್ತು. ಹಾಗಾಗಿ ಎರಡೂ ಸಮುದಾಯದವರು ಸೇರಿ ಪರಸ್ಪರ ಒಪ್ಪಿ ಭಾವೈಕ್ಯತೆಗೆ ನಾಂದಿ ಹಾಡಿದ್ದಾರೆ.

    ಇದನ್ನೂ ಓದಿರಿ ಕೋಲುಮಂಡೆ ವಿವಾದ: ರ‍್ಯಾಪರ್​ ಚಂದನ್ ಶೆಟ್ಟಿ ವಿರುದ್ಧ ದೂರು

    ಕಳೆದ ಐದು ದಶಕಗಳಿಂದ ಮಹಾಲಿಂಗಪುರದ ನಡುಚೌಕಿಯ ರಸ್ತೆಬದಿಯಲ್ಲಿ ಟೆಂಟ್ ಹಾಕಿ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿತ್ತು. ಈ ವರ್ಷ ಕೋವಿಡ್ ಕಾರಣಕ್ಕೆ ಆಡಂಬರ ಬೇಡ ಎಂದು ತೀರ್ಮಾನಿಸಲಾಯಿತು. ಬಳಿಕ ಅಲ್ಲಾದೇವರ(ಪಂಜಾ) ಪಕ್ಕದಲ್ಲೇ ಗಣೇಶ ಮೂರ್ತಿ ಪ್ರತಿಪ್ಠಾಪನೆ ಮಾಡಲಾಗಿದೆ. ಒಂದೇ ಜಾಗದಲ್ಲಿ ಎರಡೂ ದೇವರ ಆರಾಧನೆ ನಡೆದಿದೆ.

    video/ ಗಣೇಶ ವಿಸರ್ಜನೆ ಬಳಿಕ ನಡೆಯಿತು ಪವಾಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts