More

    ಅಭಿಮಾನಿಗಳ ಜತೆಗೆ ರೈಡಿಂಗ್​ ಹೊರಟ ಗಣೇಶ್​​ …

    ಬೆಂಗಳೂರು: ಗಣೇಶ್​ ಇತ್ತೀಚೆಗೆ ಒಂದಿಷ್ಟು ಹುಡುಗ-ಹುಡುಗಿಯರನ್ನು ಕೂಡಿಸಿಕೊಂಡು ರೈಡ್​ ಮಾಡುವ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಗಣೇಶ್​ ರೈಡಿಂಗ್​ ಹೋಗಿದ್ದು ಯಾಕೆ? ಅವರ ಜತೆಗೆ ಇದ್ದವರು ಯಾರು? ಎಂದು ತಲೆ ಕೆರೆಡುಕೊಂಡವರಿಗೆ ಕೊನೆಗೂ ಉತ್ತರ ಸಿಕ್ಕಿದೆ.

    ಇದನ್ನೂ ಓದಿ: ಇಶಾನ್​ ಕಾಲ್​ಶೀಟ್​ ಯಾರಿಗೆ? ಮುಂದಿನ ಚಿತ್ರಗಳ ಬಗ್ಗೆ ಶುರುವಾಯ್ತು ಚರ್ಚೆ​ …

    ಅಭಿಮಾನಿಗಳ ಜತೆಗೆ ರೈಡಿಂಗ್​ ಹೊರಟ ಗಣೇಶ್​​ …ಗಣೇಶ್​ ಅಭಿನಯದ ‘ತ್ರಿಬಲ್​ ರೈಡಿಂಗ್​’ ಚಿತ್ರವು ನ. 25ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಚಿತ್ರದ ಹಾಡುಗಳು ಮತ್ತು ಟ್ರೈಲರ್​ ಸಹ ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿ, ಒಂದಿಷ್ಟು ಸದ್ದು ಮಾಡುತ್ತಿದೆ. ಈಗ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ, ವಿಭಿನ್ನ ರೀತಿಯ ಪ್ರಚಾರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುವುದಕ್ಕೆ ಮುಂದಾಗಿದೆ.

    ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಗಣೇಶ್​, ನಾಯಕಿಯರಾದ ಮೇಘಾ ಶೆಟ್ಟಿ ಮತ್ತು ರಚನಾ ಇಂದರ್​ ಅಭಿಮಾನಿಗಳ ಜೊತೆ ಬೈಕ್​ನಲ್ಲಿ ರೈಡಿಂಗ್​ ಹೋಗುವ ಮೂಲಕ ಸಿನಿಮಾದ ಪ್ರಚಾರ ಮಾಡಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಭಿಮಾನಿಗಳ ಜತೆಗೆ ರೈಡ್​ ಮಾಡುವ ಮೂಲಕ ಚಿತ್ರದ ಬಗ್ಗೆ ಜಾಗೃತಿ ಮೂಡಿಸಿದರು. ಪ್ರಚಾರದ ನೆಪದಲ್ಲಿ ತಮ್ಮ ಇಷ್ಟದ ನಟ-ನಟಿಯರ ಜತೆಗೆ ಬೈಕ್​ ರೈಡ್​ ಮಾಡಿ ಅಭಿಮಾನಿಗಳು ಕೂಡ ಫುಲ್​ ಖುಷಿಯಾದರು.

    ಇದನ್ನೂ ಓದಿ: ‘ಕೆಜಿಎಫ್​’ ಎನ್ನುವುದು ಕಾನ್ಫಿಡೆನ್ಸ್​; ‘ಕಾಂತಾರ’ ಎನ್ನುವುದು ಎಮೋಷನ್​ … ರವಿಚಂದ್ರನ್​ ವ್ಯಾಖ್ಯಾನ

    ಎಂ. ರಾಮಗೋಪಾಲ್​ ನಿರ್ಮಿಸಿ, ಮಹೇಶ್​ ಗೌಡ ನಿರ್ದೇಶನ ಮಾಡಿರುವ ‘ತ್ರಿಬಲ್​ ರೈಡಿಂಗ್​’ ಚಿತ್ರವು ಈ ವಾರ ರಾಜ್ಯಾದ್ಯಂತ ಸುಮಾರು 180ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆ ಆಗುತ್ತಿದೆ. ಗಣೇಶ್​ಗೆ ನಾಯಕಿಯಾಗಿ ಅದಿತಿ ಪ್ರಭುದೇವ, ಮೇಘಾ ಶೆಟ್ಟಿ ಮತ್ತು ರಚನಾ ಇಂದರ್​ ನಟಿಸಿದ್ದಾರೆ. ಅಚ್ಯುತ್​ ಕುಮಾರ್​, ಸಾಧು ಕೋಕಿಲ, ರಂಗಾಯಣ ರಘು, ಶೋಭರಾಜ್​ ಮುಂತಾದ ಕಲಾವಿದರು ನಟಿಸಿರುವ ಈ ಚಿತ್ರಕ್ಕೆ ಸಾಯಿಕಾರ್ತಿಕ್​ ಸಂಗೀತ ಸಂಯೋಜಿಸಿದ್ದಾರೆ.

    ಹೆದರುವ ಅವಶ್ಯಕತೆ ಇಲ್ಲ ಎಂದು ಆಶಿಕಾಗೆ ಧೈರ್ಯ ತುಂಬಿದ ರವಿಚಂದ್ರನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts