More

    ನೃತ್ಯ ನಿರ್ದೇಶಕ ವಿರುದ್ಧ ಆರೋಪ ಮಾಡಿದ ಮಹಿಳೆ ವಿರುದ್ಧ ದೂರು ದಾಖಲು; ಆಕೆಯ ಆರೋಪ ಆಧಾರರಹಿತ ಎಂದ ಗಣೇಶ್​ ಆಚಾರ್ಯ

    ಮುಂಬೈ: ಬಾಲಿವುಡ್​ ಕೊರಿಯೋಗ್ರಾಫರ್​ ಗಣೇಶ್​ ಆಚಾರ್ಯ ವಿರುದ್ಧ ಆರೋಪ ಮಾಡಿದ್ದ ಮಹಿಳೆ ವಿರುದ್ಧ ಮರು ದೂರು ದಾಖಲಿಸಿದ್ದಾರೆ.

    ಸಹಾಯಕಿ ಕೊರಿಯೋಗ್ರಾಫರ್​ ಆಗಿರುವ ಸಂತ್ರಸ್ಥೆ 33 ವರ್ಷದ ಮಹಿಳೆಯೊಬ್ಬರು ಗಣೇಶ್​ ಆಚಾರ್ಯ ಮತ್ತು ಇಬ್ಬರು ಮಹಿಳೆಯರು ವಿರುದ್ಧ ಹಲ್ಲೆ ಆರೋಪ ಮಾಡಿ, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿದ್ದರು.

    ಇದನ್ನೂ ಓದಿ: ಅಶ್ಲೀಲ ವಿಡಿಯೋ ನೋಡಲು ಒತ್ತಾಯ ಆರೋಪ: ಬಾಲಿವುಡ್​ ಕೊರಿಯೋಗ್ರಾಫರ್​ ಗಣೇಶ್​ ಆಚಾರ್ಯ ವಿರುದ್ಧ ದೂರು

    ಇದಲ್ಲದೇ ಆಚಾರ್ಯ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳೆ, ಕಚೇರಿಗೆ ಭೇಟಿ ನೀಡಿದಾಗ ಅಶ್ಲೀಲ ವಿಡಿಯೋಗಳನ್ನು ನೋಡುವಂತೆ ಒತ್ತಾಯ ಮಾಡುತ್ತಿದ್ದರು. ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಕಮಿಷನ್​ ನೀಡುವಂತೆ ಬೇಡಿಕೆ ಇಡುತ್ತಿದ್ದರು ಎಂದು ಆರೋಪ ಮಾಡಿದ್ದರು.

    ಅದರೆ ಈ ಎಲ್ಲ ಆರೋಪಗಳು ಸುಳ್ಳು ಎಂದಿರುವ ಗಣೇಶ ಆಚಾರ್ಯ, ಆಕೆ ಕಟ್ಟು ಕತೆ ಹೇಳುತ್ತಿದ್ದಾಳೆ. ನನ್ನ ವಿರುದ್ಧ ಮಾಡಿದ ಆರೋಪಗಳಲ್ಲಿ ಆಧಾರ ರಹಿತ ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts