More

    ನೀನ್​ ಚೆನ್ನಾಗಿರು ದೇವ್ರು.. ನಿನ್​ ಹೆಂಡ್ತಿ-ಮಕ್ಳು ಚೆನ್ನಾಗಿರ್ಲಿ; ಮುಷ್ಕರನಿರತ ಸಾರಿಗೆ ನೌಕರರಿಂದ ಗಾಂಧಿಗಿರಿ

    ಬೆಂಗಳೂರು: ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸುವುದು ಗಾಂಧಿಗಿರಿ. ಅಂಥದ್ದೇ ಒಂದು ಗಾಂಧಿಗಿರಿಯನ್ನು ಮುಷ್ಕರನಿರತ ಸಾರಿಗೆ ನೌಕರರು ಇದೀಗ ಶುರು ಮಾಡಿದ್ದು, ರಾಜ್ಯದ ಕೆಲವೆಡೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

    ಸಾರಿಗೆ ನೌಕರರ ಮುಷ್ಕರ ಆರಂಭವಾದ ಬಳಿಕ ಈಗ ನೌಕರರ ವಲಯದಲ್ಲೇ ಎರಡು ಭಾಗವಾಗಿದ್ದು, ಒಂದು ವರ್ಗದವರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೆಲಸ ಬಹಿಷ್ಕರಿಸಿ ಬೀದಿಗಿಳಿದಿದ್ದರೆ, ಇನ್ನೊಂದು ವರ್ಗದ ನೌಕರರು ‘ಲಾಕ್​ಡೌನ್​ ಸಂದರ್ಭದಲ್ಲಿ ನಾವು ಕೆಲಸ ಮಾಡದೆ ಮನೆಯಲ್ಲೇ ಕೂತಿದ್ದರೂ ಸಂಸ್ಥೆ ಸಂಬಳ ನೀಡಿದೆ’ ಎಂದು ಬಸ್​ಗಳನ್ನು ರಸ್ತೆಗಿಳಿಸಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.

    ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರೂ ನಮ್ಮದೇ ಸಂಸ್ಥೆಯ ನೌಕರರು ಕೆಲವರು ಸಹಕರಿಸುತ್ತಿಲ್ಲ ಎಂದು ಮುಷ್ಕರನಿರತ ಕೆಲವು ನೌಕರರು ಹತಾಶೆಯಿಂದ ಈಗ ಕರ್ತವ್ಯನಿರತರಿಗೆ ಹಾರ ಹಾಕಿ ಸನ್ಮಾನಿಸಲಾರಂಭಿಸಿದ್ದಾರೆ. ಕೊಡಗು-ಮೈಸೂರು ಭಾಗದಲ್ಲಿ ಬಸ್​ ರಸ್ತೆಗಿಳಿಸಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ತಡೆಯುತ್ತಿರುವ ಮುಷ್ಕರನಿರತರು ಅವರಿಗೆ ಹಾರಹಾಕಿ, ‘ನೀನ್ ಚೆನ್ನಾಗಿರು ದೇವ್ರು, ನಿನ್​ ಹೆಂಡ್ತಿ-ಮಕ್ಳು ಚೆನ್ನಾಗಿರ್ಲಿ’ ಎಂದು ವ್ಯಂಗ್ಯವಾಗಿ ಹಾರೈಸುತ್ತಿರುವುದಲ್ಲದೇ, ಚಪ್ಪಲಿ ಕೂಡ ಕಿತ್ತುಕೊಂಡು ಕಳಿಸಿದ್ದಾರೆ. ಈ ಬಸ್ ಪಿರಿಯಾಪಟ್ಟಣ ಡಿಪೋಗೆ ಸೇರಿದ್ದಾಗಿದೆ.

    ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೆ ನಂಬರ್​ ಪ್ಲೇಟ್ ಮರೆಮಾಚಿ ಪರಾರಿ!; ದಂಡ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪ್ರಚಂಡರು..

    ಇನ್ನು ಮೈಸೂರಿನಿಂದ ಮಡಿಕೇರಿಗೆ ಬರುತ್ತಿದ್ದ ಸರ್ಕಾರಿ ಬಸ್ಸನ್ನು ಕುಶಾಲನಗರದಲ್ಲಿ ತಡೆದ ಮುಷ್ಕರನಿರತರು, ಚಾಲಕನಿಗೆ ಹೂವಿನ ಹಾರ ಹಾಕಲು ಮುಂದಾದರು. ಆಗ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿದ್ದು, ಚಾಲಕ ಬಸ್ ನಿಲ್ಲಿಸಿ ಇಳಿದು ಹೊರಟಿದ್ದಾನೆ. ಆಗ ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿದ್ದು, ಪೊಲೀಸರ ಭದ್ರತೆಯಲ್ಲಿ ಬಸ್​ ಸಂಚರಿಸಿದೆ.

    ಅಭಿಮಾನಿಗಳು ದೇವರಾದ ಕಥೆ: ಇಂದು ಡಾ.ರಾಜ್​ಕುಮಾರ್ ಅವರ 15ನೇ ಪುಣ್ಯಸ್ಮರಣೆ

    ಕರೊನಾ ರಾತ್ರಿ ಬರುತ್ತೆ, ಹಗಲು ಬರಲ್ವಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts