More

    ಗಾಂಧಿ ತತ್ವಾದರ್ಶಗಳನ್ನು ಬಿಜೆಪಿ ಕಡೆಗಣಿಸಿದೆ : ಶಾಸಕ ಡಾ.ಜಿ.ಪರಮೇಶ್ವರ್ ಆರೋಪ

    ತುಮಕೂರು: ಮಹಾತ್ಮ ಗಾಂಧಿ ಅವರ ಹೋರಾಟವನ್ನು ಹೀನಾಯವಾಗಿ ಜನರ ಮುಂದೆ ಬಿಂಬಿಸುವ ಮೂಲಕ ಬಿಜೆಪಿ, ರಾಷ್ಟ್ರಪಿತ ಹಾಗೂ ದೇಶದ ಜನರಿಗೆ ಅಪಮಾನವೆಸಗುತ್ತಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ದೂರಿದರು.

    ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನೋತ್ಸವದಲ್ಲಿ ಮಾತನಾಡಿದರು. ಇಡೀ ಪ್ರಪಂಚವೇ ಇಂದು ಗಾಂಧಿ ಅವರನ್ನು ಶಾಂತಿ ಧೂತ ಎಂದು ಕರೆಯುತ್ತಿದೆ. ವಿದೇಶಗಳಲ್ಲೂ ಅವರ ಪ್ರತಿಮೆಗಳನ್ನು ಅನಾವರಣ ಮಾಡಿದ್ದಾರೆ. ವಿಶ್ವಸಂಸ್ಥೆಯೇ ಅವರ ಹುಟ್ಟಿದ ದಿನವನ್ನು ಶಾಂತಿಯ ದಿನವನ್ನಾಗಿ ಆಚರಿಸಲು ಕರೆ ನೀಡಿದೆ. ಇಷ್ಟಿದ್ದರೂ ಬಿಜೆಪಿ ಮಹಾತ್ಮನ ತತ್ವಾದರ್ಶಗಳನ್ನು ಕಡೆಗಣಿಸಿದೆ ಎಂದರು.

    ದೇಶದ ಬಡ ಜನರು, ದೀನದಲಿತರು, ಗ್ರಾಮೀಣ ಜನರ ಅಭಿವೃದ್ಧಿಯ ಬಗ್ಗೆ ಅಪಾರ ಕನಸು ಹೊಂದಿದ್ದ ಗಾಂಧಿಯ ರಾಮರಾಜ್ಯದ ಕನಸನ್ನು ನನಸಾಗಿಸುವತ್ತ ಎಲ್ಲ ಕಾಂಗ್ರೆಸ್ ಮುಖಂಡರು ದುಡಿಯಬೇಕಾಗಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮಾಜಿ ಅಧ್ಯಕ್ಷ ಕೆಂಚಮಾರಯ್ಯ, ಮಾಜಿ ಶಾಸಕ ಎಸ್.ಷಪಿಅಹಮದ್, ಬಿಸಿಸಿ ಅಧ್ಯಕ್ಷ ಆಟೋ ರಾಜು, ಸಿಮೆಂಟ್ ಮಂಜುನಾಥ್, ಮಹಿಳಾ ಘಟಕದ ಗೀತಾ ಮತ್ತಿತರರು ಇದ್ದರು.

    ಕೀಳುಮಾತು ಸಲ್ಲದು:ಸಾರ್ವಜನಿಕ ಜೀವನದಲ್ಲಿರುವ ರಾಜಕೀಯ ಮುಖಂಡರು ಒಬ್ಬನ್ನೊಬ್ಬರು ಹೀಯಾಳಿಸುವುದು ಸರಿಯಲ್ಲ, ಕೀಳುಮಾತು, ಕೀಳು ರಾಜಕಾರಣ ಆಗಬಾರದು. ಜನರನ್ನು ಪ್ರತಿನಿಧಿಸುವ ನಾವು ಅದನ್ನು ಅರ್ಥ ಮಾಡಿಕೊಂಡು ನಡೆಯಬೇಕು ಎಂದು ಡಾ.ಜಿ.ಪರಮೇಶ್ವರ್, ಬಿಜೆಪಿ-ಕಾಂಗ್ರೆಸ್ ನಡುವಿನ ತಾಲಿಬಾನ್ ಟಾಕ್‌ವಾರ್ ಕುರಿತು ಪ್ರತಿಕ್ರಿಯಿಸಿದರು. ಭಾರತದಲ್ಲಿ ತಾಲಿಬಾನಿಗಳು, ಭಯೋತ್ಪಾದಕರು ಇದ್ರೆ ಅವರನ್ನು ನಮ್ಮ ಸೈನ್ಯ ನೋಡಿಕೊಳ್ಳಲಿದೆ, ಗಡಿಯಲ್ಲಿಯೇ ಹೊಡೆದು ಹಾಕಲಿದೆ ಎಂದರು.

    ಪಂಜಾಬ್‌ನಲ್ಲಿ ದಲಿತ ಸಿಎಂ ಮಾಡಲಾಗಿದೆ. ಭವಿಷ್ಯದಲ್ಲಿ ರಾಜ್ಯದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಜನರು ಕೇಳಬಹುದು. ಅದಕ್ಕೂ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವುದು ಮುಖ್ಯವಾಗಿದೆ. ಬಿಜೆಪಿಯಲ್ಲಿ ಮೂರು ಜನ ಸಿಎಂ ಆಗುವ ಸಾಧ್ಯತೆಯಿದೆ.
    ಡಾ.ಜಿ.ಪರಮೇಶ್ವರ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts