More

    ‘ಗಾಲ್ವಾನ್ ಕಣಿವೆ ನಮ್ಮದು…ಭಾರತೀಯ ಯೋಧರು ಪ್ರಚೋದಿಸುವುದನ್ನು ನಿಲ್ಲಿಸಲಿ’- ಚೀನಾ ಸರ್ಕಾರ

    ನವದೆಹಲಿ: ಪೂರ್ವ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಚೀನಾ ದಾಳಿಯಿಂದ ಭಾರತೀಯ ಯೋಧರು ಹುತಾತ್ಮರಾಗಿ, ಗಡಿಯಲ್ಲಿ ಉದ್ವಿಘ್ನತೆ ಸೃಷ್ಟಿಯಾಗಿದೆ. ಮಂಗಳವಾರ ಮುಂಜಾನೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಲಡಾಖ್​ ಗಡಿಯಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿದ್ದಾರೆ. ಸಿಡಿಎಸ್​ ಬಿಪಿನ್​ ರಾವತ್​ ಅವರೊಂದಿಗೆ ಚರ್ಚಿಸಿದ್ದಾರೆ.

    ಈ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಪರಿಹರಿಸಲು ಭಾರತ ಸಿದ್ಧವಾಗಿದೆ. ಆದರೆ ನಮ್ಮ ದೇಶದ ಪ್ರಾದೇಶಿಕ ಸಮಗ್ರತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ರಕ್ಷಣಾ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.

    ಇದರ ಬೆನ್ನಲ್ಲೇ ಚೀನಾ ಕೂಡ ಹೊಸ ರಾಗ ತೆಗೆದಿದೆ. ಸಂಘರ್ಷಕ್ಕೆ ಭಾರತವೇ ಕಾರಣ. ನಮ್ಮನ್ನು ಪ್ರಚೋದಿಸಿದ್ದು ಭಾರತೀಯ ಸೇನೆ ಎಂದು ಹೇಳುತ್ತಿದೆ. ಇದನ್ನೂ ಓದಿ: ಭಾರತ-ಚೀನಾ ಬಿಕ್ಕಟ್ಟು: ಕುತೂಹಲ ಮೂಡಿಸಿದ ಪ್ರಧಾನಿ ಮೋದಿಯವರ ನಡೆ…ಜೂ.19ರವರೆಗೆ ಕಾಯಬೇಕು

    ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್​ ಮಾತನಾಡಿದ್ದು, ಗಾಲ್ವಾನ್​ ಕಣಿವೆಯ ಸಾರ್ವಭೌಮತ್ವ ಯಾವಾಗಲೂ ಚೀನಾಕ್ಕೆ ಸೇರಿದ್ದು. ಆದರೆ ಗಡಿಯಲ್ಲಿರುವ ಭಾರತೀಯ ಯೋಧರು ನಿಯಮವನ್ನು ಮೀರಿದ್ದಾರೆ. ಕಮಾಂಡರ್​ ಲೆವಲ್​ ಮಾತುಕತೆಯಲ್ಲಿ ರೂಪಿಸಲಾದ ನೀತಿಗಳು ಮತ್ತು ಗಡಿ ಶಿಷ್ಠಾಚಾರಗಳನ್ನು ಅವರು ಉಲ್ಲಂಘಿಸಿದ್ದಾರೆ. ಘಟನೆಯಲ್ಲಿ ಸರಿ ಮತ್ತು ತಪ್ಪುಗಳು ಏನು? ಯಾರದ್ದು? ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಚೀನಾ ಕಂಪನಿಗಳನ್ನು ನಿಷೇಧಿಸಲು ಆರ್​ಎಸ್​ಎಸ್​ನ ಸ್ವದೇಶಿ ಜಾಗರಣ ಮಂಚ್ ಆಗ್ರಹ

    ನಮಗೆ ಮತ್ತೂ ಹೆಚ್ಚಿನ ಘರ್ಷಣೆಗಳು ನಡೆಯುವುದು ಬೇಕಿಲ್ಲ. ಹಾಗೇ ಭಾರತ ಸರ್ಕಾರಕ್ಕೂ ಕೇಳಿಕೊಳ್ಳುತ್ತೇವೆ. ಅದರ ಸೈನಿಕರು ಶಿಸ್ತು ಪಾಲಿಸಲಿ. ನಿಯಮ ಉಲ್ಲಂಘಿಸುವುದನ್ನು, ಪ್ರಚೋದನೆ ಮಾಡುವುದನ್ನು ಅವರು ನಿಲ್ಲಿಸಲಿ. ಚೀನಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಬೇಕು. ಈಗಿನ ಬಿಕ್ಕಟ್ಟಿನ ಶಮನಕ್ಕೆ ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.(ಏಜೆನ್ಸೀಸ್​)

    ಮೋದಿ ನಾಯಕತ್ವದಲ್ಲಿ ಚೀನಾ ವಿರುದ್ಧ ಪ್ರತೀಕಾರ ನಿಶ್ಚಿತ ಎಂದ ಶಿವಸೇನಾ ಮುಖ್ಯಸ್ಥ ಸಂಜಯ್ ರಾವತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts