More

    ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಭಾಷಣ ಕೇಳಿದ ಗದ್ದಿಗೌಡರ, ಸಿದ್ದು ಸವದಿ

    ಮಹಾಲಿಂಗಪುರ: ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದೇವಸ್ಥಾನದ ಹುಂಡಿಗೆ ಕೈಹಾಕಿದ್ದು, ಇವರದು ಗ್ಯಾರಂಟಿಗೆ ಕೈ ಕೊಟ್ಟ ಸರ್ಕಾರವಾಗಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.

    ಶುಕ್ರವಾರ ಸಂಜೆ ಸ್ಥಳೀಯ ಕೆಎಲ್‌ಇ ಕಾಲೇಜು ಎದುರುಗಡೆ ಮೈದಾನದಲ್ಲಿ ಹಾಕಿದ ವೇದಿಕೆಯಲ್ಲಿ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಅವರು ಮಾತನಾಡಿದರು.

    ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಲವ್ ಜೀಹಾದ್ ಜಾಸ್ತಿ ಆಗಿವೆ. ಮುಸ್ಲಿಂ ಮತಗಳಿಗಾಗಿ ಕೀಳುಮಟ್ಟದ ಹೇಳಿಕೆ ನೀಡುತ್ತಿರುವ ಸಿಎಂ ಹಿಂದುಗಳನ್ನು ಕಾಲ ಕಸದಂತೆ ಕಾಣುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಎನ್‌ಕೌಂಟರ್ ರದ್ದು ಮಾಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಪ್ರಧಾನಿ ಮೋದಿ ಅವರು ರದ್ದುಪಡಿಸಿದ ಆರ್ಟಿಕಲ್ 370 ಮತ್ತೆ ಜಾರಿ ಮಾಡುವುದಾಗಿ ರಾಹುಲ್ ಗಾಂಧಿ ಹೇಳುತ್ತಾರೆ. ಇದರಿಂದ ಬಹುಸಂಖ್ಯಾತರು ಅಲ್ಪಸಂಖ್ಯಾತರ ಮುಂದೆ ಕೈಕಟ್ಟಿ ನಿಲ್ಲಬೇಕಾಗುತ್ತದೆ. ಕಾರಣ ಹಿಂದುಗಳು ನೆಮ್ಮದಿಯಿಂದ ಬಾಳಲು ಮೋದಿ ಮತ್ತೆ ಪ್ರಧಾನಿ ಆಗಬೇಕು. ರಾಹುಲ್ ಗಾಂಧಿ ಪ್ರಧಾನಿ ಆಗುವುದನ್ನು ಕನಸ್ಸಿನಲ್ಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

    ಶ್ರೀಮಂತ ರಾಷ್ಟ್ರಗಳ ಪೈಕಿ 12ನೇ ಸ್ಥಾನದಲ್ಲಿದ್ದ ಭಾರತವನ್ನು ಮನಮೋಹನಸಿಂಗ್ ಸರ್ಕಾರ 11ನೇ ಸ್ಥಾನಕ್ಕೆ ತಂದು ತೃಪ್ತಿಪಟ್ಟಿತು. ಆದರೆ, ಮೋದಿ ಸರ್ಕಾರ ಭಾರತವನ್ನು 5ನೇ ಸ್ಥಾನಕ್ಕೆ ಏರಿಸಿದೆ. ಇನ್ನೊಮ್ಮೆ ಮೋದಿ ಪ್ರಧಾನಿ ಆದರೆ ಅದನ್ನು 3ನೇ ಸ್ಥಾನಕ್ಕೆ ಏರಿಸುತ್ತಾರೆ. ಅಮೆರಿಕಾ ಮತ್ತು ಚೀನಾ ನಂತರ ಭಾರತ ಜಗತ್ತಿನ ಬಲಿಷ್ಠ ಹಾಗೂ ಶ್ರೀಮಂತ ರಾಷ್ಟ್ರವಾಗಲಿದೆ. ಖಾದಿಯನ್ನು ಜಾಗತಿಕ ಬ್ರಾಂಡ್ ಮಾಡುವುದಾಗಿ ಮೋದಿ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಜವಾಹರಲಾಲ ನೆಹರು, ಇಂದಿರಾ ಗಾಂಧಿ ಅವರಿಗೆ ಭಾರತ ರತ್ನ ನೀಡಿತು. ಆದರೆ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ನೀಡಲಿಲ್ಲ. ಆದರೆ, ಮೋದಿ ಸರ್ಕಾರ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಿತು ಎಂದರು.

    ಹುಕ್ಕೇರಿಯ ಕ್ಷೇತ್ರ ಕ್ಯಾರಗುಡ್ಡ ಮಠದ ಅಭಿನವ ಮಂಜುನಾಥ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರಧಾನಿ ಮೋದಿ ಅವರಿಂದ ಇಂದು ಭಾರತ ಬಲಾಢ್ಯ ರಾಷ್ಟ್ರವಾಗುತ್ತಿದ್ದು ಮೋದಿ ನಮ್ಮೆಲ್ಲರ ಸೌಭಾಗ್ಯ ಎಂದರು. ನ್ಯಾಯವಾದಿ ಮಲ್ಲು ಸಂಗಣ್ಣವರ ಅವರನ್ನು ಸನ್ಮಾನಿಸಲಾಯಿತು.
    ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ, ಶಾಸಕ ಸಿದ್ದು ಸವದಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಭಾಷಣ ಆಲಿಸಿದರು.

    ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಮುಖಂಡರಾದ ಬಸನಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಮಹಾಲಿಂಗ ಕುಳ್ಳೋಳ್ಳಿ, ಶ್ರೀಮಂತ ಹಳ್ಳಿ, ಮನೋಹರ ಶಿರೋಳ, ಶೇಖರ ಅಂಗಡಿ, ಜಿ.ಎಸ್. ಗೊಂಬಿ, ಎಂ.ಐ. ಕೋಳಿಗುಡ್ಡ, ಬಸವರಾಜ ಹಿಟ್ಟಿನಮಠ, ರವಿ ಜವಳಗಿ, ಸಿದ್ದುಗೌಡ ಪಾಟೀಲ, ಮಹಾಲಿಂಗಪ್ಪ ಲಾತೂರ, ಆನಂದ ಕಂಪು, ಸಚಿನ್ ಕಲ್ಮಡಿ, ಮಹಾಲಿಂಗ ದೇಸಾಯಿ, ಶ್ರೀಗಿರಿ ಕುಲಕರ್ಣಿ, ಅಭಿಷೇಕ ಲಮಾಣಿ, ಆನಂದ ಬಂಡಿಗಣಿ, ರಾಘು ಪವಾರ, ರಾಘು ಗರಗಟ್ಟಿ ಇತರರಿದ್ದರು.

    ಸಂಗೀತ ಕಲಾವಿದೆ ಗೀತಾ ಕೋಲ್ಕಾರ ವೈಯಕ್ತಿಕ ಗೀತೆ ಹಾಡಿದರು. ಹಿಂದು ಮುಖಂಡ ನಂದು ಗಾಯಕವಾಡ ಸ್ವಾಗತಿಸಿದರು.ನಾರನಗೌಡ ಉತ್ತಂಗಿ ನಿರೂಪಿಸಿದರು. ರಾಜೇಂದ್ರ ನಾವಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts