More

    ಗದಗ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ: ರೈತ ದಿನಾಚರಣೆ


    ಗದಗ :ಜಿಲ್ಲಾ ಪಂಚಾಯತ, ಗದಗ, ಕೃಷಿಕ ಸಮಾಜ ಗದಗ ಹಾಗೂ ಐ.ಸಿ.ಎ.ಆರ್. ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ “ರೈತ ದಿನಾಚರಣೆ” ಕಾರ್ಯಕ್ರಮವನ್ನು ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿಯಲ್ಲಿ ಏರ್ಪಡಿಸಲಾಯಿತು.

    ತಿರಕಪ್ಪ ಬೊಳನವರ, ಅಧ್ಯಕ್ಷರು ಕೃಷಿಕ ಸಮಾಜ, ಗದಗ ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಶ್ರೀ ಶ್ರೀನಿವಾಸ ರಾಥೋಡ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಪ್ರಾಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ, ಇವರು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗೆ ಲಭ್ಯವಿರುವ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

    ಮುಖ್ಯ ಅತಿಥಿಗಳಾದ ಡಾ. ಎಸ್.ಎಲ್.ಪಾಟೀಲ, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಕೃಷಿ ಸಂಶೋಧನಾ ಕೇಂದ್ರ, ಗದಗ ಇವರು ಮಾತನಾಡಿ, ಆಹಾರ ಭದ್ರತೆಯಲ್ಲಿ ರೈತರ ಪಾತ್ರ ಮಹತ್ವದ್ದು ಮತ್ತು ಭಾರತ ದೇಶದ ೫ ನೇ ಪ್ರಧಾನಿ ಚೌಧರಿ ಚರಣಸಿಂಗ್ ರವರ ರೈತ ಪರ ಕಾನೂನುಗಳನ್ನು ಜಾರಿಗೊಳಿಸಿ ರೈತರ ಅಭಿವೃದ್ಧಿಗೋಸ್ಕರ ಶ್ರಮಿಸಿದ್ದರಿಂದ ಅವರ ಜನ್ಮ ದಿನವಾದ ಡಿಸೆಂಬರ್ ೨೩ ರನ್ನು “ರೈತ ದಿನಾಚರಣೆ” ಯನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು. ಜೊತೆಗೆ ಬರವನ್ನು ತಡೆದುಕೊಂಡು ಹೆಚ್ಚು ಇಳುವರಿ ಕೊಡುವ ಬೆಳೆ ಬೆಳೆಯಬೇಕು ಹಾಗೂ ವಿಷಮುಕ್ತ ಆಹಾರಗಳ ಉತ್ಪಾದನೆಗಾಗಿ ಕೃಷಿಯಲ್ಲಿ ಕೃಷಿ ತ್ಯಾಜ್ಯ ವಸ್ತುಗಳನ್ನು ಮಣ್ಣಿಗೆ ಸೇರಿಸಿ ರೈತ ಸಂಪರ್ಕ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿಶ್ವ ವಿದ್ಯಾಲಯ, ಧಾರವಾಡದಲ್ಲಿ ದೊರೆಯುವ ಜೈವಿಕ ಗೊಬ್ಬರಗಳಿಂದ ಜೈವಿಕ ಕೀಟ ನಾಶಕ & ಜೈವಿಕ ಶಿಲೀಂದ್ರ ನಾಶಕಗಳನ್ನು ಕೀಟ-ರೋಗಗಳ ನಿರ್ವಹಣೆಯಲ್ಲಿ ಬಳಸುವುದರಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರ ಜೊತೆಗೆ ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸಿದಂತಾಗುತ್ತದೆ ಎಂದು ಮಾಹಿತಿ ನೀಡಿದರು.
    ಕಾರ್ಯಕ್ರಮದ ಇನ್ನೊರ್ವ ಅತಿಥಿಗಳಾದ ಡಾ. ಬಸವರಾಜ ನಾವಿ, ಸಾವಯವ ಕೃಷಿಕರು, ಇವರು ಕಳೆದ ೧೮ ವರ್ಷದಿಂದ ಸಾವಯವ ಕೃಷಿಯನ್ನು ಮಾಡುತ್ತಿದ್ದು, ಸಾವಯವ ಕೃಷಿ ಪರಿಕರಗಳ ತಯಾರಿಕೆ ಮತ್ತು ಬಳಕೆ ಮಾಡುತ್ತಿದ್ದಾರೆ. ವಿಷಯುಕ್ತ ರಾಸಾಯನಿಕ ಬಳಕೆಯಿಂದ ಜೀವಸಂಕುಲಗಳ ಮೇಲೆ ದುಷ್ಪರಿನಾಣಮಗಳು ಉಂಟಾಗುತ್ತಿವೆ. ಆದ್ದರಿಂದ ಸಾವಯವ ಪದ್ಧತಿಯಲ್ಲಿ ಸಮಗ್ರ ಕೃಷಿ ಪದ್ಧತಿ ಹಾಗೂ ಕೃಷಿ ಪೂರಕ ಉಪಕಸುಬುಗಳನ್ನು ಮಾಡುವುದರಿಂದ ಗುಣಮಟ್ಟದ ಆಹಾರ ಉತ್ಪಾದನೆ, ಸುಸ್ಥಿರ ಕೃಷಿಯೊಂದಿಗೆ ಉತ್ತಮ ಸಂಭಾವನೆಯನ್ನು ಪಡೆಯಬಹುದು ಎಂದು ತಿಳಿಸಿದರು. ಕಾರ್ಯಕ್ರಮದ ಅತಿಥಿಗಳಾದ ಡಾ. ಸುಧಾ ಮಂಕಣಿ, ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಇವರು ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಿ ಮತ್ತು ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು. ಮಂಗಳಾ ನೀಲಗುಂದ, ಪ್ರಗತಿಪರ ರೈತ ಮಹಿಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ತಾರಾಮಣಿ ಜಿ.ಎಚ್. ಜಂಟಿ ಕೃಷಿ ನಿರ್ದೇಶಕರು, ಗದಗ ಇವರು ವಹಿಸಿದ್ದು ಕೃಷಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡುತ್ತ ರೈತರು ಕಡಿಮೆ ಖರ್ಚಿನ ಬೇಸಾಯವನ್ನು ಅನುಸರಿಸಬೇಕು. ೩ ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆಯ ಆಧಾರದ ಮೇಲೆ ಶಿಫಾರಿತ ಗೊಬ್ಬರಗಳನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು, ಸಮಗ್ರ ಕೃಷಿ ಪದ್ಧತಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ, ಧೃಡೀಕೃತ ಬೀಜಗಳ ಬಳಕೆ, ಬೀಜೋಪಚಾರ, ಜೈವಿಕ ಗೊಬ್ಬರಗಳ ಬಳಕೆ ಮತ್ತು ಕೃಷಿ ನವೋದ್ಯಮಗಳು ಹಾಗೂ ಮಾರುಕಟ್ಟೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
    ರೈತ ದಿನಾಚರಣೆಯ ಅಂಗವಾಗಿ ಪ್ರಗತಿ ಪರ ರೈತರಾದ ಡಾ. ಬಸವರಾಜ ನಾವಿ, ವೀರೇಶಗೌಡ ಪಾಟೀಲ, ವಿರೇಶ ನೆಗಲಿ, ನಾಗನಗೌಡ ಕಗದಾಳ, ಅರುಣ ಹಾಳಕೇರಿ ಹಾಗೂ ಪ್ರಗತಿ ಪರ ರೈತ ಮಹಿಳೆ ಶ್ರೀಮತಿ ಮಂಗಳಾ ನೀಲಗುಂದ ರವರಿಗೆ ಸನ್ಮಾನಿಸಲಾಯಿತು ಹಾಗೂ ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಡಾ|| ಸುಧಾ. ವಿ. ಮಂಕಣಿ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು (ಪ್ರಭಾರಿ) ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಇವರಿಗೆ ರೈತರು ಸನ್ಮಾನ ಮಾಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಶ್ರೀ ವಿಜಯಕುಮಾರ ಸುಂಕದ ಸೇರಿದಂತೆ ಇನ್ನೂ ಇಬ್ಬರು ರೈತರ ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
    ಶ್ರೀ ಮಲ್ಲಯ್ಯ ಕೊರವನವರ ಕೃಷಿ ಉಪ ನಿರ್ದೇಶಕರು, ಗದಗ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ|| ವಿನಾಯಕ ನಿರಂಜನ, ವಿಜ್ಞಾನಿ (ಕೃಷಿ ಇಂಜಿನಿಯರಿAಗ್) ಸ್ವಾಗತಿಸಿದರು. ಶ್ರೀ ಎನ್.ಎಚ್. ಭಂಡಿ, ವಿಜ್ಞಾನಿ (ಮಣ್ಣು ವಿಜ್ಞಾನ), ಹುಲಕೋಟಿ ವಂದನಾರ್ಪಣೆ ಮಾಡಿದರು. ಶ್ರೀಮತಿ ರಾಜೇಶ್ವರಿ ಚಿನಿವಾರ, ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರ, ಹುಲಕೋಟಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts