More

    ಜೋಡು ಮಾರುತಿ ದೇವಾಸ್ಥಾನದ ಪಕ್ಕ ಶಾದಿಮಹಲ್ ನಿರ್ಮಾಣ?​, ಹಿಂದೂಗಳ ಭಾವನೆಗೆ ಧಕ್ಕೆ, ವಿವಿಧ ಸಂಘಟನೆಗಳ ವಿರೊಧ

    ವಿಜಯವಾಣಿ ಸುದ್ದಿಜಾಲ ಗದಗ
    ರಾಮ ಭಕ್ತ ಹನುಮ ದೇವಸ್ಥಾನದ ಪಕ್ಕದಲ್ಲೇ ಶಾದಿ ಮಹಲ್​ ನಿರ್ಮಾಣಕ್ಕೆ ನಿರ್ಣಯ ಕೈಗೊಂಡಿರುವ ರಾಜ್ಯ ಸರ್ಕಾರದ ನಡೆಗೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ವಿವಿಧ ಸಂಟನೆಗಳು, ಸಾರ್ವಜನಿಕರು ಈಗಾಗಲೇ ಸಚಿವರ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು ಸರ್ಕಾರ ತೆಗೆದುಕೊಂಡಿರುವ ನಿರ್ಣಯವನ್ನು ಪರಮಾಶಿರ್ಸಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಈ ಹಿನ್ನೆಲೆ ಜಿಲ್ಲೆಯ ಹಿಂದೂಗಳ ಭಾವನೆಗೆ ಧಕ್ಕೆ ಆಗುತ್ತಿದೆ ಎಂದ ಸಂಟನೆಗಳು ಆರೋಪಿಸುತ್ತಿವೆ. ಬಹು ಸಂಖ್ಯಾತ ಹಿಂದೂಗಳ ಅಕ್ರೋಶಕ್ಕೂ ಕಾರಣವಾಗಿದೆ. ದೇವಸ್ಥಾನದಲ್ಲಿನ ಪೂಜಾ ಕೈಂಕರ್ಯಕ್ಕೆ ಅಡೆತಡೆಯಾಗಲಿದೆ ಎಂಬ ಆರೋಪವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ.

    ಏನಿದು ಪ್ರಕರಣ:
    ಐತಿಹಾಸಿಕ ಹಿನ್ನೆಲೆ ಇರುವ ನಗರದ ಜೋಡು ಮಾರುತಿ ದೇವಸ್ಥಾನದ ಪಕ್ಕದಲ್ಲಿಯೇ ಶಾದಿಮಹಲ್​ ನಿರ್ಮಾಣಕ್ಕೆ ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿದೆ. ಪಕ್ಕದಲ್ಲೇ ಇರುವ ಖಾಲಿ ಜಾಗೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಶಾದಿ ಮಹಲ್​ ನಿರ್ಮಾಣಕ್ಕೆ ಅಲ್ಪಸಂಖ್ಯಾತ ಇಲಾಖೆಯಿಂದ ಮಂಜೂರಾತಿ ದೊರೆತಿದೆ. ಈ ಜಾಗೆಯಲ್ಲಿ ಆಲೆದೇವರುಗಳನ್ನು ಕೂಡಿಸಿ ಮೂಜಿಸಲಾಗುತ್ತಿತ್ತು. ಇದೇ ಜಾಗ ಈಗ ವಿವಾದದ ಕೇಂದ್ರುಬಿಂದು ಆಗಿದೆ. ಆದರೆ, ನಗರದ ಹಿಂದೂ ಸಂಘಟನೆಗಳ ಕಾರ್ಯಕರ್ತರು ದೇವಸ್ಥಾನದ ಪಕ್ಕದಲ್ಲಿ ಶಾದಿಮಹಲ್​ ನಿಮಾರ್ಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶಾದಿ ಮಹಲ್​ ನಿರ್ಮಾಣಕ್ಕೆ ಸಂಘಟನೆಗಳ ವಿರೋಧವಿಲ್ಲ. ಆದರೆ, ದೇವಸ್ಥಾನದ ಪಕ್ಕದಲ್ಲೇ ನಿರ್ಮಾಣ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಹಿನ್ನೆಲೆ ವಿವಿಧ ಸಂಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ ಶಾದಿ ಮಹಲ್​ ನಿಮಾರ್ಣಕ್ಕೆ ಅನುಮತಿ ನೀಡಬಾರದೆಂದು ಮನವಿ ಸಲ್ಲಿಸಿದ್ದಾರೆ.

    ವಿಶೇಷತೆ ಏನು?
    ಛತ್ರಪತಿ ಶಿವಾಜಿ ಮಹಾರಾಜರ ಧರ್ಮಗುರು ಸಮರ್ಥ ರಾಮದಾಸರಿಂದ ನಿಮಾರ್ಣವಾಗಿರುವ ದೇವಸ್ಥಾನ ಎಂಬ ಐತಿಹಾಸಿಕ ಹಿನ್ನೆಲೆ ಇರುವ ದೇವಸ್ಥಾಬ ಇದಾಗಿದೆ. ಜೋಡಿ ಹನುಮ ಮೂತಿರ್ಗಳು ಒಂದೇ ಕಡೆ ಇರುವುದು ವಿಶೇಷ. ಇಲ್ಲಿ ಭಕ್ತಿಯಿಂದ ಪೂಜಿಸಿ ಇಷ್ಟಾರ್ಥಗಳನ್ನು ಬೇಡಿಕೊಂಡರೆ ಈಡೇರುತ್ತವೆ ಎಂಬ ಭಾವನೆ ಹಿಂದೂಗಳಲ್ಲಿ ಇದೆ. ಪ್ರತಿ ಶನಿವಾರ ಸಾವಿರಾರು ಜನ ಭಕ್ತರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದು ವಿಶೇಷ. ಹಳೆಯ ದೇವಸ್ಥಾನವನ್ನು ಜೀರ್ಣೊದ್ಧಾರ ಮಾಡಲು ಇತ್ತೀಚೆಗೆ ದೇವಾಲಯದ ಆಡಳಿತ ಮಂಡಳಿಯ ಕ್ರಮ ಕೈಗೊಂಡಿದೆ. ಮುಂದಿನ ತಿಂಗಳು ಏಪ್ರಿಲ್​ನಲ್ಲಿ ಜೋಡು ಮಾರುತಿ ದೇವರ ಪ್ರಾಣ ಪ್ರತಿಷ್ಠಾನೆ ಕಾರ್ಯ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

    ಕೋಟ್​:
    ಜೋಡು ಮಾರುತಿ ದೇವಾಲಯದ ಹತ್ತಿರದ ಸ್ಥಳದಲ್ಲಿ ಶಾದಿಮಹಲ್​ ನಿಮಾರ್ಣಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಈ ಕುರಿತು ಅಲ್ಪಸಂಖ್ಯಾತ ಇಲಾಖಾ ಅಧಿಕಾರಿಗಳಿಗೆ ಮತ್ತು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯುವ ಮೂಲಕ ವಿಷಯ ತಿಳಿಸಲಾಗಿದೆ. ಕರೆ ಮಾಡುವ ಮೂಲಕವು ವಿಷಯ ಪ್ರಸ್ತಾಪಿಸಲಾಗಿದೆ. ಇಲಾಖೆಗಳಿಂದ ಉತ್ತರ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. – ವೈಶಾಲಿ ಎಂ.ಎಲ್​. ಜಿಲ್ಲಾಧಿಕಾರಿ ಗದಗ

    ಕೋಟ್​
    ಜಿಲ್ಲೆಯ, ನಗರದ ಬೇರೆ ಯಾವದೇ ಸ್ಥಳದಲ್ಲಿ ಶಾದಿಮಹಲ್​ ನಿಮಾರ್ಣಕ್ಕೆ ನಾವು ಅಡತಡೆ ಮಾಡುವುದಿಲ್ಲ. ಇದೇ ಸ್ಥಳದಲ್ಲಿ ನಿರ್ಮಾಣ ಮಾಡುವುದರಿಂಧ ಭವಿಷ್ಯದಲ್ಲಿ ಕೋಮು ಗಲಭೆ ಸೃಷ್ಟಿ ಆಗುವ ಸಾಧ್ಯತೆ ಇರುತ್ತವೆ. ಸರ್ಕಾರ ತನ್ನ ನಿಲುವು ಬದಲಾಯಿಸದೇ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವದು ಅನಿವಾರ್ಯ.
    ಬಾಬು ಬಾಕಳೆ, ಕ್ರಾಂತಿ ಸೇನಾ ಅಧ್ಯಕ್ಷ

    ಕೋಟ್​
    ಅಲ್ಪ ಸಂಖ್ಯಾತರ ತುಷ್ಟೀಕರಣಕ್ಕಾಗಿ ಉದ್ದೇಶಪೂರ್ವಕ ದೇವಾಲಯಗಳ ಪಕ್ಕದಲ್ಲಿಯೇ ಶಾದಿಮಹಲ್​ ನಿಮಾರ್ಣ ಮಾಡಲಾಗುತ್ತಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಇಂತಹ ನಿಲುವುಗಳಿಂದ ಸರ್ಕಾರ ಹಿಂದೆ ಸರಿಯಬೇಖು. ಮತಬ್ಯಾಂಕ್​ ಒಮದೇ ಕಾರಣಕ್ಕೆ ಜನರನ್ನು ದಿಕ್ಕು ತಪ್ಪಿಸಬಾರದು.
    – ರಾಜೂ ಖಾನಪ್ಪನವರ, ರಾಜ್ಯ ಕಾರ್ಯದಶಿರ್
    ಶ್ರೀರಾಮ ಸೇನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts