More

    ಗ್ರಾಪಂ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಗದಗ
    ಗ್ರಾಪಂ ನೌಕರರ ವೇತನ ಪಾವತಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಆದೇಶ ವಿಳಂಬ ಆಗುತ್ತಿದೆ. ನಿವೃತ್ತಿಯಾದವರಿಗೆ ಉಪಧನ ನೀಡುತ್ತಿಲ್ಲ ಎಂದು ಗ್ರಾಪಂ ನೌಕರರ ಸಂದ ರಾಜ್ಯಾಧ್ಯ ಎಂ. ಬಿ. ನಾಡಗೌಡ್ರ ಆರೋಪಿಸಿದರು.
    ಗ್ರಾಪಂ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ ಶರಣಿ ಸತ್ಯಾಗ್ರಹದಲ್ಲಿ ಗುರುವಾರ ಭಾಗವಹಿಸಿ ಮಾತನಾಡಿದ ಅವರು, ತೆರಿಗೆ ಸಂಗ್ರಹದಲ್ಲಿ ಶೇ. 40ರಷ್ಟು ವೇತನ ನೀಡುವ ಪ್ರಸ್ತಾವನೆಗೆ ಅನುಮೋದನೆ, ಮೃತ ಸಿಬ್ಬಂದಿ ಕುಟುಂಬ ಸದಸ್ಯರಿಗೆ ಅನುಕಂಪದ ನೌಕರಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸರ್ಕಾರ ಆದೇಶಗಳನ್ನು ಜಾರಿ ಮಾಡದೇ ವಿಳಂಬ ಮಾಡುತ್ತಿದೆ. ಇದರಿಂದ ಗ್ರಾಮ ಪಂಚಾಯತಿ ಸಿಬ್ಬಂದಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಈ ಎಲ್ಲ ಆದೇಶಗಳನ್ನು ಜಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ಸಂದ ರಾಜ್ಯ ಉಪಾಧ್ಯಕ್ಷ ರುದ್ರಪ್ಪ ಕಂದಗಲ್​ ಮಾತಮಾಡಿ, ಕಳೆದ 2 ವರ್ಷದಿಂದ ಖಾಲಿಯಿರುವ ಕಾರ್ಯದಶಿರ್ ಗ್ರೇಡ್​&2 ಹಾಗೂ ದ್ವೀತಿಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ಸೇವೆಯೊಳಗಿನ ನೇರ ನೇಮಕಾತಿಗೆ ಪ್ರಕ್ರಿಯೆ ಪ್ರಾರಂಭವಾಗಿದ್ದರೂ, ಇಲ್ಲಿಯವರೆಗೆ ಬಿಲ್​ ಕಲೆಕ್ಟರ್​ ಹಾಗೂ ಕ್ಲರ್ಕ, ಕ್ಲರ್ಕ ಕಮ್​ ಡಾಟಾ ಎಂಟ್ರಿ ಆಪರೇಟರ್​ಗಳಿಗೆ ನೇಮಕಾತಿ ಆದೇಶವನ್ನು ನೀಡಿಲ್ಲ ಎಂದು ಆರೋಪಿಸಿದರು.
    ಕಾಮಿರ್ಕ ಇಲಾಖೆ ನಿಗದಿಪಡಿಸಿದ ಕನಿಷ್ಟ ವೇತನ ಆದೇಶದಂತೆ ಎಲ್ಲ ಸಿಬ್ಬಂದಿಗಳಿಗೆ ಪ್ರತಿ ತಿಂಗಳು 5ನೇ ತಾರೀಖಿನೊಳಗಾಗಿ ವೇತನ ಪಾವತಿಯಾಗಲು ಕ್ರಮವಹಿಸಬೇಕು. ಬಾಕಿ ವೇತನವನ್ನು ತೆರಿಗೆ ಸಂಗ್ರಹದಲ್ಲಿ, ಹಾಗೂ 15ನೇ ಹಣಕಾಸು ಆಯೋಗದ ಹಣದಲ್ಲಿ ಉಳಿದ ಸಿಬ್ಬಂದಿ ವೇತನ ಪಾವತಿಸಬೇಕು. ಗ್ರಾಪಂ ಗಳಲ್ಲಿ ಬಾಕಿ ಉಳಿದ ವಿವಿಧ ಹುದ್ದೆಗಳಲ್ಲಿರುವ ಬಿಲ್​ ಕಲೆಕ್ಟರ್​ ಹಾಗೂ ಕ್ಲರ್ಕ, ಕ್ಲರ್ಕ ಕಮ್​ ಕಂಪ್ಯೂಟರ್​ ಆಪರೇಟರ್​ ಹುದ್ದೆಗಳಿಂದ ಖಾಲಿಯಿರುವ ಕಾರ್ಯದಶಿರ್ ಗ್ರೇಡ್​&2 ಹಾಗೂ ದ್ವೀತಿಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ನೇಮಕಾತಿ ಪಟ್ಟಿಯಲ್ಲಿನ ಅಭ್ಯಥಿರ್ಗಳಿಗೆ ಕೂಡಲೇ ಹೊರಡಿಸಬೇಕು ಎಂದು ಕಂದಗಲ್​ ಆಗ್ರಹಿಸಿದರು.
    ಬಸವರಾಜ ಮಂತೂರ, ಮಹಾಂತೇಶ ಧಾರವಾಡ, ಪ್ರಕಾಶ ಬೋರಣಿ, ಬಸವರಾಜ ಮೇವುಂಡಿ, ಮಲ್ಲೇಶ ಪ್ಯಾಟಿ, ಬಸವರಾಜ ಅರ್ಕಸಾಲಿ, ಮಹೇಶ ಮೂಲಿಮನಿ, ಈಶ್ವರ ದಮಾನಿ, ವೀರನಗೌಡ ಪಾಟೀಲ, ರುದ್ರಗೌಡ ಸಂಕನಗೌಡ್ರ, ರಾಜು ಕಲಗುಡಿ, ಕುಮಾರ ಕಾರಬಾರ, ಸಿದ್ದಯ್ಯ ಮಣ್ಣೂರಮಠ, ಬಸವರಾಜ ಮುಧೋಳ, ಮಂಜುಳಾ ಸೀತಿಮನಿ, ಶಾರದಾ, ಶಿವು ಮೊರಬ, ರುದ್ರಪ್ಪ ಐನಾಪೂರ, ಚಂದ್ರು ಉಪಾಧ್ಯ, ಮಲ್ಲಿಕಾರ್ಜುನ ಮುತಾರಿ, ಮಲ್ಲಿಕಾರ್ಜುನ ಮುತಾರಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts