More

    ಗದಗ: ಸರ್ಕಾರಿ ನೌಕರರ ಮುಷ್ಕರ

    ಗದಗ: ರಾಜ್ಯದಲ್ಲಿ ಬುಧವಾರ ಜರುಗಿದ ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ವಿವಿಧ ಜಿಲ್ಲಾಸ್ಪತ್ರೆಗಳಲ್ಲಿ ರೋಗಿಗಳು ಪರದಾಡುವ ಸ್ಥಿತಿ ಉಲ್ಭಣಿಸಿತು. ಮುಷ್ಕರ ಅರಿಯದ ರೋಗಿಗಳು ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ವೈದ್ಯರ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.
    ಹಿರಿಯ ವೈದ್ಯರು ಸೇವೆಯನ್ನು ಸ್ಥಗಿತಗೊಳಿಸಿದ್ದರು. ಒಪಿಡಿ ವಿಭಾಗಗಳಲ್ಲಿ ಚೀಟಿ ಮಾಡುಲು ಸಿಬ್ಬಂದಿಗಳಿರಲಿಲ್ಲ. ವೈದ್ಯಾಧಿಕಾರಿಗಳು ಹೇಳಿದರೆ ಮಾತ್ರ ಚೀಟಿ ಮಾಡಲಾಗುತ್ತದೆ. ಇಲ್ಲದಿದ್ದರೆ ಮಾಡಿಕೊಡಲಾಗುವುದಿಲ್ಲ ಎಂದು ಒಪಿಡಿ ಸಿಬ್ಬಂದಿಗಳು ರೋಗಿಗಳಿಗೆ ಹೇಳುವುದು ಸಾಮಾನ್ಯವಾಗಿತ್ತು.
    ನಗರದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಟನೆ ಬುಧವಾರ ಜರುಗಿದೆ. ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಿಂದ ಬಂದ ರೋಗಿಯೋರ್ವ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳು ಅಸಡ್ಡ ತೋರಿದ್ದರಿಂ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.
    “ನಾವು ಕಣ್ಣಿನ ಚಿಕಿತ್ಸೆಗೆಂದು ಶಿರಹಟ್ಟಿ ತಾಲೂಕಿನಿಂದ ಜಿಲ್ಲಾಸ್ಪತ್ರೆಗೆ ಬಂದಿದ್ದೇವೆ. ಒಪಿಡಿ ವಿಭಾಗದಲ್ಲಿ ಯಾರೂ ಚೀಟಿ ಮಾಡುತ್ತಿಲ್ಲ. ನೀವು ಹೇಳಿದರೆ ಚೀಟಿ ಮಾಡಲು ಸಿಬ್ಬಂದಿಗೆ ಸೂಚಿಸಿ ಎಂದು ರೋಗಿಯು ಜಿಮ್ಸ್​ ಆಸ್ಪತ್ರೆಯ ಸರ್ಜನ್​ ಡಾ. ರೇಖಾ ಸೊನಾವನೆ ಅವರಿಗೆ ಮನವಿ ಮಾಡಿದ್ದಾರೆ. ಆದರೆ, ಮುಷ್ಕರದ ಬಗ್ಗೆ ರೋಗಿಗಳಿಗೆ ಮನವರಿಕೆ ಮಾಡದ ಆಸ್ಪತ್ರೆಯ ಸರ್ಜನ್​ ಅವರು ಅವರು ಆಸ್ಪತ್ರೆಯಿಂದ ಹೊರ ನಡೆದಿದ್ದಾರೆ. ಬೇರೆ ದಾರಿ ಕಾಣದ ರೋಗಿಯು ವೈದ್ಯರ ಜತೆ ವಾಗ್ವಾದ ನಡೆಸಿದರು.

    ಬಾಕ್ಸ್​:
    ಬುಧವಾರ ಮುಷ್ಕರ ಹಿಂಪಡೆದರೂ ಕೂಡ ಜಿಮ್ಸ್​ ಆಸ್ಪತ್ರೆಯಲ್ಲಿ ಹಲವು ಸಿಬ್ಬಂದಿಗಳು, ವೈದ್ಯರು ಸೇವೆಗೆ ಗೈರಾಗಿದ್ದರು. ಜಿಲ್ಲಾಡಳಿತ ಭವನದಲ್ಲೂ ಇಂತದ್ದೇ ಸನ್ನಿವೇಶ ಕಂಡುಬಂದಿತು. ಜಿಲ್ಲಾಡಳಿತ ಭವನದಲ್ಲಿ ಕೆಲವೇ ನೌಕರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts