More

    ಹೊಸ ಮತದಾರರ ಸೇರ್ಪಡೆ ಗೆಲುವಿಗೆ ಮುನ್ನುಡಿ: ಅನೀಲ್ ಮೆಣಸಿನಕಾಯಿ

    ಮುಳಗುಂದ : ‘ಮತಕ್ಷೇತ್ರದ ಜನರ ಅಭೂತಪೂರ್ವ ಬೆಂಬಲವಿದ್ದರೂ ಕಳೆದ ಬಾರಿ ಅಲ್ಪ ಮತಗಳಿಂದ ಪರಾಭವಗೊಂಡಿದ್ದೇನೆ. ಗೆದ್ದು ಸೋತಿದ್ದೇನೆ. ಆದರೆ, ಈ ಬಾರಿ ಅವರನ್ನು (ಕಾಂಗ್ರೆಸ್) ಸೋಲಿಸುವ ತೀರ್ಮಾನವನ್ನು ಕ್ಷೇತ್ರದ ಜನತೆ ತೆಗೆದುಕೊಂಡಿದ್ದು, 25 ಸಾವಿರ ಮತಗಳ ಅಂತರದಿಂದ ಬಿಜೆಪಿ ಗೆಲ್ಲಿಸಿ ದಾಖಲೆ ನಿರ್ಮಿಸಬೇಕು’ ಎಂದು ಗದಗ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನೀಲ್ ಮೆಣಸಿನಕಾಯಿ ಹೇಳಿದರು.

    ಅವರು ಸಮೀಪದ ವಡ್ಡರ ಬಸಾಪುರ ಗ್ರಾಮದಲ್ಲಿ ಶನಿವಾರ ಮತಯಾಚನೆ ನಡೆಸಿ, ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದರು.

    ‘ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ದಿನನಿತ್ಯ ಜನರ ಮನೆ ಬಾಗಿಲೆಗೆ ತೆರಳಿ ಬಿಜೆಪಿ ರ್ಕಾರದ ಸಾಧನೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಇದು ನನ್ನ ಚುನಾವಣೆ ಎನ್ನುವುದಕ್ಕಿಂತ ಕ್ಷೇತ್ರದ ಜನತೆಯ ಚುನಾವಣೆ. ಕೇವಲ ಬದಲಾವಣೆ ಬಯಸಿದರೆ ಸಾಲದು ನಿಮ್ಮೆಲ್ಲರ ಮತಗಳ ಆಶೀರ್ವಾದ ನನಗೆ ನೀಡಬೇಕು’ ಎಂದರು.

    ‘ಕಾಂಗ್ರೆಸ್‌ನ ಸುಳ್ಳು ಭರವಸೆ, ಆಸೆ, ಆಮಿಷಗಳಿಗೆ ಬಲಿಯಾಗದೇ, ನಿರ್ಭೀತಿಯಿಂದ ಚುನಾವಣೆ ಎದುರಿಸಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರ, ಜನಪರ ಯೋಜನೆಗಳನ್ನು ನೀಡಿದ್ದು, ಅವುಗಳ ಬಗ್ಗೆ ಹೆಚ್ಚು ಪ್ರಚುರಪಡಿಸಬೇಕು. ಹೆಚ್ಚಿನ ಮತಗಳ ಅಂತರದಿಂದ ಈ ಬಾರಿ ನನ್ನನ್ನು ಜಯಶಾಲಿಯನ್ನಾಗಿಸಬೇಕು’ ಎಂದು ಮನವಿ ಮಾಡಿಕೊಂಡರು.

    ಹೊಸ ಮತದಾರರ ಸೇರ್ಪಡೆ ಗೆಲುವಿಗೆ ಮುನ್ನುಡಿ

    ಮುಳಗುಂದ: ‘ಹೊಸ ಯುವ ಮತದಾರರು ಬಿಜೆಪಿ ಸೇರ್ಪಡೆಯಾಗುತ್ತಿರುವುದು ಪಕ್ಷಕ್ಕೆ ಹೆಚ್ಚು ಬಲ ತಂದಿದೆ. ಗದಗ ವಿಧಾನಸಭಾ ಮತಕ್ಷೇತ್ರದ ಬದಲಾವಣೆಗೆ ಯುವಕರ ಸೇರ್ಪಡೆ‌ ಗೆಲುವಿನ ಮುನ್ನುಡಿ ಬರೆಯಲಿದೆ’ ಎಂದು ಬಿಜೆಪಿ ಅಭ್ಯರ್ಥಿ ಅನೀಲ್ ಮೆಣಸಿನಕಾಯಿ ಅಭಿಪ್ರಾಯಪಟ್ಟರು.

    ಶನಿವಾರ ಜೈ ಹನುಮಾನ್ ಯುವಸೇನಾ ಅಧ್ಯಕ್ಷ ಬಸವರಾಜ್ ಶಿರಹಟ್ಟಿ ಹಾಗೂ ಗೂಳಪ್ಪ ಮಜ್ಜಿಗುಡ್ಡ ಅವರ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಯುವ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.

    ‘ಕ್ಷೇತ್ರದ ಜನರಿಗೆ ಎಪ್ಪತ್ತು ವರ್ಷಗಳ ಕಾಂಗ್ರೆಸ್ಸಿಗರ ನಾಟಕ ನೋಡಿ ಸಾಕಾಗಿದೆ. ಗುಲಾಮಗಿರಿ ಸಂಸ್ಕೃತಿಯಿಂದ ಬೇಸತ್ತಿದ್ದಾರೆ. ಹೀಗಾಗಿ ಅವರಿಗೆ ಅವರ ಪಕ್ಷದ ಕಾರ್ಯಕರ್ತರನ್ನೇ ಉಳಿಸಿಕೊಳ್ಳಲಾಗುತ್ತಿಲ್ಲ’ ಎಂದರು.

    ‘ಸಮಾಜಸೇವೆಗೆ, ರಾಜಕಾರಣಕ್ಕೆ ಒಂದು ಪರಿಕಲ್ಪನೆ ಇರಬೇಕು. ಅದು ಕಾಂಗ್ರೆಸ್ಸಿಗರಿಗೆ ಇಲ್ಲ. ಇದರಿಂದ ಗದಗ ಮತಕ್ಷೇತ್ರ ಅತ್ಯಂತ ಹಿಂದುಳಿದಿದೆ. ಕಾಂಗ್ರೆಸ್ಸಿಗರ 55 ವರ್ಷಗಳ ಜನವಿರೋಧಿ ನೀತಿಗೆ ಈ ಬಾರಿ ಕ್ಷೇತ್ರದ ಜನತೆ ತಕ್ಕಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.

    ಗದಗ ಗ್ರಾಮೀಣ ಮಂಡಳ ಅಧ್ಯಕ್ಷ ದ್ಯಾಮಣ್ಣ ನೀಲಗುಂದ ಮಾತನಾಡಿ, ಇದು ಸ್ಯಾಂಪಲ್ ಮಾತ್ರ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಾರೆ. ಮುಳಗುಂದವನ್ನು ಸಂಪೂರ್ಣ ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದರು.

    ಹಿರಿಯರಾದ ಎಂ.ಎಸ್.ಸುಂಕಾಪುರ, ಗೂಳಪ್ಪ ಮಜ್ಜಿಗುಡ್ಡ, ಬಸವರಾಜ್ ಶಿರಹಟ್ಟಿ, ವಿನಾಯಕ ಕಮ್ಮಾರ ನೇತೃತ್ವದಲ್ಲಿ ಪ್ರದೀಪ್ ಭಜಂತ್ರಿ, ಈರಣ್ಣ ಅಣ್ಣಿಗೇರಿ, ಬಾಲು ಬಳ್ಳಾರಿ, ಕಿರಣಕುಮಾರ್ ಸೆಂಕಿನ್, ಅಕ್ಷಯ್ ಕುಮಾರ್ ಬೆಂಕಿ, ಮಾಂತೇಶ ಶಿರಹಟ್ಟಿ, ಪ್ರಸಾಂತ್ ಬಸಾಪುರ, ಚೇತನ್ ನೀಲಗುಂದ, ಚೇತನ್ ಬೆಟಗೇರಿ, ಪ್ರಜ್ವಲ್ ಕೊಟ್ಟೂರ,ಲೋಹಿತ್ ಚಿಮ್ಮಲಗಿ, ಪ್ರಶಾಂತ್ ಕುಂಬಾರ್, ಶರತ್ ಬೋವಿ,ಸಲೀಂ ಕುಂದಗೋಳ, ಪ್ರಕಾಶ್ ದಿವಟರ, ದೇವರಾಜ್ ಶಿರಹಟ್ಟಿ, ಆಕಾಸ್ ಯಲವಿಗಿ, ಕುಮಾರಸ್ವಾಮಿ ಹಿರೇಮಠ, ಮೋಹನ್ ಡುಮ್ಮಿ, ಕಲ್ಮೇಶ್ ಕಪ್ಪತನವರ, ಯುವರಾಜ್ ಲಿಂಗೋಜಿ, ವಸಂತ್‌ ಕಣವಿ, ಪ್ರಭಣ್ಣ ಜೋಗಿ, ಸಂತೋಷ್ ನೆಕಾರ, ರಮೇಶ್ ಅರಳಿಕಟ್ಟಿ, ಮುತ್ತು ಕುಂದಗೋಳ, ಮಾಂಥೇಶ್ ಅರಳಿ,ಸುಧಾಕರ್‌ ಬೆಟಗೇರಿ, ಯಲ್ಲಪ್ಪ ಬಡಿಗೇರ, ಅರುಣ್ ಕುಮಾರ ಹಿರೇಮಠ, ಬಸವರಾಜ್ ಗುಡಗೇರಿ, ಗೌಸ್ ಡಾಲಾಯತ್, ಮೈಲಾರಿ ಮಜ್ಜಿಗುಡ್ಡ, ಗಂಗಾಧರ್ ಜಿಡ್ಡಿ, ಮುತ್ತಪ್ಪ ಆರೇರ, ರೋಹಿತ್ ಕಣವಿ, ಮುತ್ತು ದೇವರಮನಿ, ಕಾಳಿಂಗಪ್ಪ ತೋಟದ ಸೇರಿದಂತೆ ಅನೇಕರು ಪಕ್ಷ ಸೇರ್ಪಡೆಗೊಂಡರು. ಇದೇ ವೇಳೆ ಮುಳಗುಂದ ಪಟ್ಟಣ ಪಂಚಾಯತಿ ಸದಸ್ಯ ಬಸವರಾಜ್ ಹಾರೋಗೇರಿ ಅವರ ಮನೆಗೆ ‌ಭೇಟಿ ನೀಡಿ ಬೆಂಬಲ ಕೋರಿದರು.

    ಈ ಸಂದರ್ಭದಲ್ಲಿ ಮಲ್ಲಪ್ಪ‌ ಕುಂದಗೋಳ, ದ್ಯಾಮಣ್ಣ ನೀಲಗುಂದ, ಎಂ.ಎಸ್.ಬಳ್ಳಾರಿ, ಭದ್ರೇಶ ಕುಸಲಾಪುರ, ಕಾಂತಿಲಾಲ್ ಬನ್ಸಾಲಿ, ಸಿದ್ದಣ್ಣ ಪಲ್ಲೇದ, ಸುರೇಶ್ ಹೆಬಸೂರ, ಬೂದಪ್ಪ ಹಳ್ಳಿ, ಚಂದ್ರಶೇಖರ್ ಹರಿಜನ ಸೇರಿದಂತೆ ಹಲವರಿದ್ದರು.

    ಕೋಟ್-

    ಬಿಜೆಪಿಯ ತತ್ವಸಿದ್ದಾಂತಗಳನ್ನು ಒಪ್ಪಿ ಸ್ವಯಂ ಪ್ರೇರಿತವಾಗಿ ಅನೀಲ್ ಮೆಣಸಿನಕಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದೇವೆ. ಈ ಬಾರಿ ಅನೀಲ್ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ. ಕಾಂಗ್ರೆಸ್ ನ ದಬ್ಬಾಳಿಕೆಗೆ ಹೆದರುವ ಕಾಲ ಹೋಯ್ತು, ಒಂದು ವೇಳೆ ಪಕ್ಷ ಸೇರಿದವರಿಗೆ ಬೆದರಿಕೆ, ದಬ್ಬಾಳಿಕೆ ತಕ್ಕಪಾಠ ಕಲಿಸುತ್ತೇವೆ.

    – ಬಸವರಾಜ್ ಶಿರಹಟ್ಟಿ, ಜೈ ಹುನುಮಾನ್ ಯುವಸೇನಾ ಅಧ್ಯಕ್ಷರು, ಮುಳಗುಂದ

    ಕೋಟ್-

    ಮುಳಗುಂದ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಬದಲಾವಣೆ ಬಯಸಿ, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವುದು ಹೊಸ ಪರ್ವ ಸೃಷ್ಟಿಸಿದೆ. ನೂತನ ಯುವ ಮತದಾರರು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ನನ್ನನ್ನು ಭೀಮನಷ್ಟೇ ಬಲಶಾಲಿಯನ್ನಾಗಿಸಿದೆ. 

    – ಅನೀಲ್ ಮೆಣಸಿನಕಾಯಿ, ಗದಗ ಬಿಜೆಪಿ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts